ಕರ್ನಾಟಕ

karnataka

ETV Bharat / science-and-technology

ಜಾಗತಿಕ ತಾಪಮಾನ ಎಫೆಕ್ಟ್ ​: ಕರಗುತ್ತಿದೆ ಅಂಟಾರ್ಟಿಕಾದ ಹಿಮನದಿಗಳು

ಮೂರು ಪ್ರಮುಖ ಸ್ಥಳಗಳಲ್ಲಿ ಮಂಜುಗಡ್ಡೆ ಅತಿ ಹೆಚ್ಚಾಗಿ ಕರಗುತ್ತಿದೆ. ಮೊದಲ ಎರಡು ಪ್ರದೇಶಗಳಲ್ಲಿ ಚಿಕ್ಕದಾಗಿದ್ದು, ಮತ್ತೆ ಮಂಜುಗಡ್ಡೆ ರೂಪುಗೊಳ್ಳುಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ..

Antarctic glacier may cross tipping point, raise sea level
ಜಾಗತಿಕ ತಾಪಮಾನ ಎಫೆಕ್ಟ್​: ಕರಗುತ್ತಿದೆ ಅಂಟಾರ್ಟಿಕಾದ ಹಿಮನದಿಗಳು

By

Published : Apr 3, 2021, 3:33 PM IST

ಲಂಡನ್ :ಪಶ್ಚಿಮ ಅಂಟಾರ್ಟಿಕಾದ ಪೈನ್ ಐಲ್ಯಾಂಡ್ ಗ್ಲೇಸಿಯರ್ (ಹಿಮನದಿ) ವೇಗವಾಗಿ ಕರಗುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ಜಾಗತಿಕವಾಗಿ ಸಮುದ್ರಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಂಟಾರ್ಟಿಕಾದಲ್ಲಿ ಬೇರೆ ಬೇರೆ ಹಿಮನದಿಗಳೂ ಇದ್ದು, ಪೈನ್ ಐಲ್ಯಾಂಡ್ ಹಿಮನದಿ ಎಲ್ಲಾ ಹಿಮನದಿಗಳಿಗಿಂತ ವೇಗವಾಗಿ ಕರಗುತ್ತಿದೆ. ಇದರ ಜೊತೆಗೆ ಪಕ್ಕದಲ್ಲೇ ಇರುವ ಥ್ವೈಟ್ಸ್​ ಹಿಮನದಿ ಕೂಡ ವೇಗವಾಗಿ ಕರಗುತ್ತಿದೆ. ಜಾಗತಿಕವಾಗಿ ಶೇ.10ರಷ್ಟು ಸಮುದ್ರಮಟ್ಟ ಏರಿಕೆಯಾಗಲು ಕಾರಣವಾಗಲಿದೆ.

'ದ ಕ್ರ್ಯೂಸ್ಫಿಯರ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದಂತೆ ಸಮುದ್ರದ ತಾಪಮಾನ 1.2 ಸೆಲ್ಸಿಯಸ್​ನಷ್ಟು ಹೆಚ್ಚಳವಾದ ಕಾರಣದಿಂದಲೇ ಪಶ್ಚಿಮ ಅಂಟಾರ್ಟಿಕಾದಲ್ಲಿ ಮಂಜುಗಡ್ಡೆ ಕರಗಲು ಕಾರಣ ಎನ್ನಲಾಗಿದೆ.

ಇದನ್ನೂ ಓದಿ:ಕಾಶ್ಮೀರಕ್ಕೆ ಸ್ವಾಯತ್ತತೆ ಸಿಗುವ ತನಕ ಭಾರತದ ಜತೆ ಸದ್ಯಕ್ಕೆ ವ್ಯಾಪಾರವಿಲ್ಲ: ಪಾಕ್​ ಪ್ರಧಾನಿ ಖಾನ್

ಮಂಜುಗಡ್ಡೆ ಕರಗುವ ಕಾರಣದಿಂದ ಸಮುದ್ರಮಟ್ಟ ಸುಮಾರು ಮೂರು ಮೀಟರ್ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್​ನ ನಾರ್ಥುಂಬ್ರಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಮುಂಡಸೇನ್ ಸಮುದ್ರದಲ್ಲಿ ಮಾರುತದ ದಿಕ್ಕು, ತೀರಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳು ಮತ್ತು ದೀರ್ಘಕಾಲದ ಉಷ್ಣತೆ ಪೈನ್ ಐಲ್ಯಾಂಡ್ ಗ್ಲೇಸಿಯರ್​ನಲ್ಲಿ ಮಂಜುಗಡ್ಡೆ ಕರಗಲು ಕಾರಣವಾಗಿದೆ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ.

ಮೂರು ಪ್ರಮುಖ ಸ್ಥಳಗಳಲ್ಲಿ ಮಂಜುಗಡ್ಡೆ ಅತಿ ಹೆಚ್ಚಾಗಿ ಕರಗುತ್ತಿದೆ. ಮೊದಲ ಎರಡು ಪ್ರದೇಶಗಳಲ್ಲಿ ಚಿಕ್ಕದಾಗಿದ್ದು, ಮತ್ತೆ ಮಂಜುಗಡ್ಡೆ ರೂಪುಗೊಳ್ಳುಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ.

ABOUT THE AUTHOR

...view details