ಕರ್ನಾಟಕ

karnataka

ETV Bharat / science-and-technology

ಬೈ ವಿತ್ ಪ್ರೈಮ್ ವಿಭಾಗದಲ್ಲಿ ಶೇ 5ರಷ್ಟು ಉದ್ಯೋಗ ಕಡಿತಕ್ಕೆ ಮುಂದಾದ ಅಮೆಜಾನ್ - ಉದ್ಯೋಗಿಗಳನ್ನು ವಜಾ

ಅಮೆಜಾನ್ ತನ್ನ ಬೈ ವಿತ್ ಪ್ರೈಮ್ ವಿಭಾಗದ ಶೇ 5ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.

Amazon reduces nearly 5% of workforce at its Buy with Prime unit
Amazon reduces nearly 5% of workforce at its Buy with Prime unit

By ETV Bharat Karnataka Team

Published : Jan 19, 2024, 3:08 PM IST

ಸ್ಯಾನ್ ಫ್ರಾನ್ಸಿಸ್ಕೋ :ಅಮೆಜಾನ್ ತನ್ನ ಬೈ ವಿತ್ ಪ್ರೈಮ್ ಘಟಕ (Buy with Prime unit) ದಲ್ಲಿ ಶೇ 5ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. ಈ ಹಂತದಲ್ಲಿ ಸುಮಾರು 30 ಉದ್ಯೋಗಿಗಳ ಕಡಿತವನ್ನು ಒಳಗೊಂಡಿರುತ್ತದೆ ಎಂದು ಸಿಎನ್​ಬಿಸಿ ವರದಿ ಮಾಡಿದೆ. ಆದರೆ, ಅದರ ಬೈ ವಿತ್ ಪ್ರೈಮ್ ವಿಭಾಗದಲ್ಲಿ ಎಷ್ಟು ಜನ ಉದ್ಯೋಗಿಗಳಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

"ನಾವು ನಿಯಮಿತವಾಗಿ ನಮ್ಮ ತಂಡಗಳ ರಚನೆಯನ್ನು ಪರಿಶೀಲಿಸುತ್ತೇವೆ ಮತ್ತು ವ್ಯವಹಾರದ ಅಗತ್ಯಗಳ ಆಧಾರದ ಮೇಲೆ ಹೊಂದಾಣಿಕೆಗಳನ್ನು ಮಾಡುತ್ತೇವೆ ಮತ್ತು ಇತ್ತೀಚಿನ ವಿಮರ್ಶೆಯ ನಂತರ, ನಮ್ಮ ಬೈ ವಿತ್ ಪ್ರೈಮ್ ತಂಡದಲ್ಲಿ ಸಣ್ಣ ಸಂಖ್ಯೆಯ ಉದ್ಯೋಗಿಗಳನ್ನು ತೆಗೆದುಹಾಕುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ" ಎಂದು ಅಮೆಜಾನ್ ವಕ್ತಾರರು ಹೇಳಿದ್ದಾರೆ.

ಏನಿದು ಬೈ ವಿತ್​ ಫ್ರೈಮ್​?:ಬೈ ವಿತ್ ಪ್ರೈಮ್ ಅಮೆಜಾನ್ ಗೆ ಉನ್ನತ ಆದ್ಯತೆಯಾಗಿ ಉಳಿದಿದೆ ಮತ್ತು ಈ ವಿಭಾಗದಲ್ಲಿ ಗಮನಾರ್ಹ ಸಂಪನ್ಮೂಲ ಹೂಡಿಕೆ ಮಾಡುವುದನ್ನು ಮುಂದುವರಿಸಲು ಕಂಪನಿಯು ಯೋಜಿಸಿದೆ ಎಂದು ವಕ್ತಾರರು ಹೇಳಿದರು. ಬೈ ವಿತ್ ಪ್ರೈಮ್ ಸೇವೆಯಲ್ಲಿ ಆನ್ ಲೈನ್ ಸ್ಟೋರ್ ಗಳು ಪ್ರೈಮ್ ಚಂದಾದಾರರಿಗೆ ಎರಡು ದಿನಗಳಲ್ಲಿ ಸರಕನ್ನು ಶಿಪ್ಪಿಂಗ್ ಮಾಡುತ್ತವೆ. ಇದು ಅಮೆಜಾನ್​ನ ಪ್ರೈಮ್ ಸೇವೆಯಾಗಿದೆ.

ಮೂಲಗಳನ್ನು ಉಲ್ಲೇಖಿಸಿ ವರದಿಯ ಪ್ರಕಾರ, ಇತ್ತೀಚಿನ ಉದ್ಯೋಗ ಕಡಿತದಿಂದ ಬಾಧಿತರಾದ ಕೆಲವು ಉದ್ಯೋಗಿಗಳು ಅಮೆಜಾನ್​ನ ಮಲ್ಟಿಚಾನಲ್ ಪೂರೈಸುವ ಘಟಕದಲ್ಲಿ ಕೆಲಸ ಮಾಡುತ್ತಿದ್ದರು, ಇದು "ಪ್ರಾಜೆಕ್ಟ್ ಸ್ಯಾಂಟೋಸ್" ಸಂಸ್ಥೆಯ ಅಡಿಯಲ್ಲಿ ಬೈ ವಿತ್ ಪ್ರೈಮ್ ಜೊತೆಯಲ್ಲಿದೆ.

ಉದ್ಯೋಗ ಹುಡುಕಲು ಸಹಾಯ:ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರಿಗೆ ಕಂಪನಿಯೊಳಗೆ ಹೊಸ ಉದ್ಯೋಗಗಳನ್ನು ಹುಡುಕಲು ಸಹಾಯ ಮಾಡಲಾಗುತ್ತಿದೆ ಎಂದು ಅಮೆಜಾನ್ ಹೇಳಿದೆ. ಕಾರ್ಮಿಕರು ಕನಿಷ್ಠ 60 ದಿನಗಳ ವೇತನ ಮತ್ತು ಇತರ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವಾರ, ಅಮೆಜಾನ್ ಒಡೆತನದ ಆಡಿಯೊ ಬುಕ್ ಮತ್ತು ಪಾಡ್​ಕಾಸ್ಟ್ ವಿಭಾಗ ಆಡಿಬಲ್ ತನ್ನ ಶೇಕಡಾ 5 ರಷ್ಟು ಸಿಬ್ಬಂದಿ ಅಂದರೆ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತು. ಅದೇ ವಾರದಲ್ಲಿ ಅಮೆಜಾನ್ ಟ್ವಿಚ್, ಪ್ರೈಮ್ ವಿಡಿಯೋ ಮತ್ತು ಎಂಜಿಎಂ ಸ್ಟುಡಿಯೋಸ್​ ನೂರಾರು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ್ದವು.

ಇದನ್ನೂ ಓದಿ : ಆ್ಯಪಲ್ ಹಿಂದಿಕ್ಕಿ ವಿಶ್ವದ ಅತಿದೊಡ್ಡ ಕಂಪನಿಯಾದ ಮೈಕ್ರೊಸಾಫ್ಟ್​

ABOUT THE AUTHOR

...view details