ಕರ್ನಾಟಕ

karnataka

ETV Bharat / science-and-technology

65 ಸಾವಿರ ಕೋಟಿ ರೂ. ದಾಟಿದ 'ಮೇಡ್​ - ಇನ್ - ಇಂಡಿಯಾ' ಐಫೋನ್ ರಫ್ತು - iPhone exports

2023 ರಲ್ಲಿ ಆಪಲ್ ಭಾರತದಲ್ಲಿ 1 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ಐಫೋನ್​ಗಳನ್ನು ಜೋಡಣೆ ಮಾಡಿದೆ.

Apple exported 'India-made' iPhones worth Rs 65,000 cr in 2023
Apple exported 'India-made' iPhones worth Rs 65,000 cr in 2023

By ETV Bharat Karnataka Team

Published : Jan 9, 2024, 6:20 PM IST

ನವದೆಹಲಿ: ಭಾರತವು ಸ್ಥಳೀಯ ಉತ್ಪಾದನೆಯನ್ನು ದ್ವಿಗುಣಗೊಳಿಸುತ್ತಿದ್ದಂತೆ ಆಪಲ್ 2023 ರಲ್ಲಿ ಭಾರತದಲ್ಲಿ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಐಫೋನ್​ಗಳನ್ನು ಜೋಡಣೆ ಮಾಡಿದೆ ಎಂದು ಉದ್ಯಮದ ಅಂಕಿ - ಅಂಶಗಳು ತಿಳಿಸಿವೆ. ಈ 1 ಲಕ್ಷ ಕೋಟಿ ರೂ. ಮೌಲ್ಯದ ಆಪಲ್ ಪೋನ್​ಗಳ ಪೈಕಿ ಸುಮಾರು 65,000 ಕೋಟಿ ರೂ.ಗಳ ಐಫೋನ್​ಗಳನ್ನು ಕಂಪನಿ ಇತರ ದೇಶಗಳಿಗೆ ರಫ್ತು ಮಾಡಿದೆ ಎಂದು ಉದ್ಯಮದ ಮೂಲಗಳು ಮಂಗಳವಾರ ಐಎಎನ್ಎಸ್​ಗೆ ತಿಳಿಸಿವೆ.

ಆದಾಗ್ಯೂ, ಉದ್ಯಮದ ಮೂಲಗಳ ಪ್ರಕಾರ, ಭಾರತದಲ್ಲಿ ತಯಾರಿಸಿದ ಅಥವಾ ಜೋಡಿಸಲಾದ ಐಫೋನ್​ಗಳ ನಿಜವಾದ ಮಾರುಕಟ್ಟೆ ಮೌಲ್ಯವು ಇತರ ದೇಶಗಳಲ್ಲಿನ ತೆರಿಗೆಗಳನ್ನು ಅವಲಂಬಿಸಿ ಇನ್ನೂ ಹೆಚ್ಚಾಗಿರಬಹುದು. ದೇಶದಲ್ಲಿ ಆಪಲ್ ನ ಉತ್ಪಾದನಾ ದತ್ತಾಂಶದ ಬಗ್ಗೆ ಎಕನಾಮಿಕ್ ಟೈಮ್ಸ್ ಮೊದಲು ವರದಿ ಮಾಡಿತ್ತು. ಭಾರತದಲ್ಲಿ ಆಪಲ್​ನ ಉತ್ಪಾದನೆಯು ಉತ್ಪಾದನಾ - ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯಡಿ ನಿಗದಿಪಡಿಸಿದ ಗುರಿಗಳ ಭಾಗವಾಗಿದೆ.

ದೇಶೀಯ ಉತ್ಪಾದನಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್ ನಿಂದ ನವೆಂಬರ್ ವರೆಗೆ ದೇಶದಿಂದ ಮೊಬೈಲ್ ಫೋನ್ ರಫ್ತು 9 ಬಿಲಿಯನ್ ಡಾಲರ್ (75,000 ಕೋಟಿ ರೂ.ಗಿಂತ ಹೆಚ್ಚು) ಮೀರಿದೆ ಎಂದು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ತಿಳಿಸಿದೆ.

ಆಪಲ್ ನೇತೃತ್ವದಲ್ಲಿ ಭಾರತವು ಪ್ರಸಕ್ತ ಹಣಕಾಸು ವರ್ಷದಲ್ಲಿ (ಎಫ್​ವೈ 24) ಮೊಬೈಲ್ ಫೋನ್ ರಫ್ತುಗಳಲ್ಲಿ 15 ಬಿಲಿಯನ್ ಡಾಲರ್ (1,24,000 ಕೋಟಿ ರೂ.) ದಾಟಲು ಸಜ್ಜಾಗಿದೆ. ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇಕಡಾ 35 ರಷ್ಟು ಹೆಚ್ಚಳವಾಗಿದೆ.

ಭಾರತದಲ್ಲಿ ಆಪಲ್​ನ ಆದಾಯವು 2023 ರ ಹಣಕಾಸು ವರ್ಷದಲ್ಲಿ ಸುಮಾರು 50,000 ಕೋಟಿ ರೂ.ಗೆ ತಲುಪಿದೆ. ಮಾರಾಟವು ಶೇಕಡಾ 48 ರಷ್ಟು ಏರಿಕೆಯಾಗಿ 49,321 ಕೋಟಿ ರೂ.ಗೆ ತಲುಪಿದೆ ಮತ್ತು ನಿವ್ವಳ ಲಾಭ ಶೇಕಡಾ 76 ರಷ್ಟು ಏರಿಕೆಯಾಗಿ 2,229 ಕೋಟಿ ರೂ.ಗೆ ಮುಟ್ಟಿದೆ. ದೇಶೀಯ ಉತ್ಪಾದನೆಯಿಂದ ಚಾಲಿತವಾದ ಆಪಲ್ ಐಫೋನ್​ಗಳು 2023 ರಲ್ಲಿ ಭಾರತದ ಆಂಡ್ರಾಯ್ಡ್ ಪ್ರಾಬಲ್ಯದ ಸ್ಮಾರ್ಟ್​ಪೋನ್ ಮಾರುಕಟ್ಟೆಯಲ್ಲಿ ಸುಮಾರು 7 ಪ್ರತಿಶತದಷ್ಟು ಪಾಲು ಗಳಿಸಲು ಸಜ್ಜಾಗಿವೆ.

ಮೂಲ ಉಪಕರಣ ತಯಾರಕರು, ಮೂಲ ವಿನ್ಯಾಸ ತಯಾರಕರು ಮತ್ತು ಬಿಡಿಭಾಗಗಳು ಮತ್ತು ಭಾಗಗಳೊಂದಿಗೆ ವ್ಯವಹರಿಸುವ ಕಂಪನಿಗಳಿಂದ ಭಾರಿ ಹೂಡಿಕೆಯಿಂದಾಗಿ ದೇಶವು ಈಗ ಮೊಬೈಲ್ ಫೋನ್​ಗಳ ಎರಡನೇ ಅತಿದೊಡ್ಡ ಉತ್ಪಾದನಾ ಕೇಂದ್ರವಾಗಿದೆ. ಮೊಬೈಲ್ ಫೋನ್ ರಫ್ತು 2024 ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಶೇಕಡಾ 58 ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಶೇಕಡಾ 47 ರಷ್ಟಿತ್ತು.

ಇದನ್ನೂ ಓದಿ : ಲ್ಯಾಂಡರ್​ನಲ್ಲಿ ಇಂಧನ ನಷ್ಟ: ಅಮೆರಿಕದ ಚಂದ್ರಯಾನ ಯೋಜನೆಗೆ ಹಿನ್ನಡೆ

ABOUT THE AUTHOR

...view details