ಕರ್ನಾಟಕ

karnataka

By

Published : Aug 13, 2021, 6:51 PM IST

ETV Bharat / lifestyle

ಆರೋಗ್ಯಕರ ಜೀವನಕ್ಕೆ ಈ ಪಂಚಸೂತ್ರಗಳನ್ನು ಅನುಸರಿಸಿ

ಕೋವಿಡ್​​ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವರ ಜೀವನಶೈಲಿಯೇ ಬದಲಾಗಿ ಹೋಗಿದೆ. ಇಂಥ ಸಂದರ್ಭದಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ, ಅನುಸರಿಸಬೇಕಾದ ಕೆಲ ಮಾರ್ಗಸೂಚಿಗಳು ಇಂತಿವೆ.

ಆರೋಗ್ಯಕರ ಜೀವನಕ್ಕೆ ಈ ಪಂಚಸೂತ್ರಗಳನ್ನು ಅನುಸರಿಸಿ
ಆರೋಗ್ಯಕರ ಜೀವನಕ್ಕೆ ಈ ಪಂಚಸೂತ್ರಗಳನ್ನು ಅನುಸರಿಸಿ

ಆಧುನಿಕ ಜೀವನದಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಕೆಲ ಅಭ್ಯಾಸಗಳನ್ನು ಮಾಡಿಕೊಂಡಿರುತ್ತೇವೆ. ಇದರಿಂದಾಗಿ ನಮ್ಮ ದೇಹದ ಮೇಲೆ ಆಗುವ ಪರಿಣಾಮವನ್ನು ನಾವು ಲೆಕ್ಕಿಸಿರುವುದಿಲ್ಲ. ಈ ಕುರಿತು ಹೆಲ್ತ್‌ಕೇರ್ ಸಾಧನ ಕಂಪನಿಯ ಸಹ ಸಂಸ್ಥಾಪಕಿ ನೇಹಾ ಮಿತ್ತಲ್ ಕೆಲ ಮಾಹಿತಿಗಳನ್ನು ಈ ಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ನಿದ್ರೆ:ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ, ಲವಲವಿಕೆಯಿಂದ ಇರಲು ಸಾಧ್ಯವಿಲ್ಲ. ಕನಿಷ್ಠ ಆರು ಗಂಟೆಗಳಾದರೂ ನಿದ್ರೆ ಮಾಡಬೇಕು. ಇದರಿಂದಾಗಿ, ದೇಹದ ಚಟುವಟಿಕೆಗಳು(ಉಸಿರಾಟ, ಜೀರ್ಣಕ್ರಿಯೆ) ಸರಾಗವಾಗಿ ನಡೆಯುತ್ತವೆ.

ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರ:ಚೀಸ್, ಮಾಂಸ ಹಾಗೂ ಅತಿಯಾದ ಪ್ರೋಟೀನ್ ಯುಕ್ತ ಆಹಾರ ಸೇವಿಸುವುದರಿಂದ IGF1 ಹೆಸರಿನ ಹಾರ್ಮೋನ್​ನಲ್ಲಿ ವ್ಯತ್ಯಾಸವಾಗುತ್ತದೆ. ಈ ಮೂಲಕ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಮಾಂಸಹಾರದ ಜತೆಗೆ ಸಸ್ಯಹಾರಿ ಊಟಗಳನ್ನೂ ಸಮ ಪ್ರಮಾಣದಲ್ಲಿ ಸೇವಿಸಿ.

ಹೆಚ್ಚು ಹೊತ್ತು ಕುಳಿತುಕೊಳ್ಳುವುದು:ನೀವು ಹೆಚ್ಚಿನ ಸಮಯ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ಧೂಮಪಾನದಷ್ಟೇ ಅಪಾಯಕಾರಿ. ಅತಿಯಾಗಿ ಕುಳಿತುಕೊಳ್ಳುವುದರಿಂದ ಸ್ತನ, ಕೊಲೊನ್​ನಂತಹ ವಿವಿಧ ಕ್ಯಾನ್ಸರ್​ಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಪ್ರತಿ ಒಂದು ಗಂಟೆಗೊಮ್ಮೆ ಸ್ವಲ್ಪ ದೂರ ನಡೆಯಿರಿ.

ಒಂಟಿತನ: ಜೀವನದಲ್ಲಿ ಒಂಟಿಯಾಗಿರುವುದು ನಮಗೆ ಸಮಸ್ಯೆ ಅಂತಾ ಅನ್ನಿಸುವುದಿಲ್ಲ. ಆದರೆ, ಏಕಾಂಗಿಯಾಗಿರುವುದು ಹೃದಯ ಸಂಬಂಧಿ ಕಾಯಿಲೆಗಳಿಗೆ ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಭಾವನಾತ್ಮಕ ವಿಚಾರಗಳನ್ನು ನೀವು ಹಂಚಿಕೊಳ್ಳದಿದ್ದರೆ ದೇಹವು ಮತ್ತಷ್ಟು ರೋಗಗಳ ಆವಾಸಸ್ಥಾನವಾಗುತ್ತದೆ.

ಸೂರ್ಯನ ಶಾಖಕ್ಕೆ ಮೈಯೊಡ್ಡಿ: ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದರಿಂದ ಚರ್ಮದ ಕ್ಯಾನ್ಸರ್ ಬರುತ್ತದೆ ಎಂದು ಕೆಲವು ಒಳಾಂಗಣದಲ್ಲಿಯೇ ಟ್ಯಾನಿಂಗ್ ಮಾಡುತ್ತದೆ. ಆದರೆ, ಬೆಳಗ್ಗೆ 7 ರಿಂದ 9 ಗಂಟೆವರೆಗೆ ಬೀಳುವ ಸೂರ್ಯನ ಕಿರಣಗಳಿಗೆ ಮೈಯೊಡ್ಡಿದರೆ, ಯಾವುದೇ ಪರಿಣಾಮಗಳಾಗುವುದಿಲ್ಲ. ಸಾಧ್ಯವಾದಷ್ಟು, ಟ್ಯಾನ್​ಗಾಗಿ ಸಲೂನ್​ಗೆ ಹೋಗುವುದನ್ನು ನಿಲ್ಲಿಸಿ.

ABOUT THE AUTHOR

...view details