ನವದೆಹಲಿ: ಗ್ಲೋಬಲ್ ಸ್ಮಾರ್ಟ್‌ಫೋನ್ ಬ್ರಾಂಡ್ ಶಿಯೋಮಿ, ಜೂನ್ 22 ರಂದು ಭಾರತದಲ್ಲಿ ಸ್ಮಾರ್ಟ್‌ಫೋನ್ ಮಿ 11 ಲೈಟ್ ಅನ್ನು ಮೂರು ಬಣ್ಣಗಳಲ್ಲಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಟಸ್ಕನಿ ಕೋರಲ್, ಜಾಝ್ ಬ್ಲೂ, ವಿನೈಲ್ ಬ್ಲ್ಯಾಕ್‌ನಲ್ಲಿ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಚೀನಾದಲ್ಲಿ ಶಿಯೋಮಿ ಮಿ 11 ಲೈಟ್ 8 ಜಿಬಿ + 128 ಜಿಬಿಯ ಬೆಲೆ ಅಂದಾಜು 26,415 ರೂಪಾಯಿ, 8 ಜಿಬಿ + 256 ಜಿಬಿ ಬೆಲೆ 29,860 ರೂ., ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 780 ಜಿ ಪ್ರೊಸೆಸರ್ ಅನ್ನು ಒಳಗೊಂಡಿರುವ ವಿಶ್ವದ ಮೊದಲ ಮಿ 11 ಲೈಟ್, ಇದು 8 ಜಿಬಿ RAM ಮತ್ತು 256 ಜಿಬಿ ಯುಎಫ್ಎಸ್ 2.2 ಹೊಂದಿದೆ. ಇದನ್ನು ಬಾಹ್ಯ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 512 ಜಿಬಿವರೆಗೆ ವಿಸ್ತರಿಸಬಹುದು.