ಕರ್ನಾಟಕ

karnataka

ETV Bharat / lifestyle

ಒಪ್ಪೊ ಹೊರತರಲಿದೆ ಮೊದಲ ಡೈಮೆನ್ಸಿಟಿ 1200 ಪವರ್​ಫುಲ್ ಫೋನ್​​​​​ - 1200 ಪವರ್​​ಫುಲ್ ಪ್ರೊಸೆಸರ್​​​​ನೊಂದಿಗೆ

ಈ ಮೊದಲು ಡೈಮೆನ್ಸಿಟಿ 900 ಮಾಡೆಲ್ ಫೋನ್​​ಗಳ ಹೊರತಂದಿರುವ ಒಪ್ಪೊ ಇದೀಗ ಅದರ ಪ್ರೋ ಮಾಡೆಲ್​ನಲ್ಲಿ ಡೈಮೆನ್ಸಿಟಿ 1200 ಪ್ರೊಸೆಸರ್ ಇರಲಿದೆ. ಇದರಲ್ಲಿ ರೆನೊ06 ನಲ್ಲಿ 6ಎನ್​ಎಂ ಚಿಪ್​ಸೆಟ್​ ಜೊತೆ ಡೈಮೆನ್ಸಿಟಿ 900 ಇರಲಿದ್ದು, ಇದು ಸ್ನ್ಯಾಪ್​ಡ್ರ್ಯಾಗನ್​ 786ಜಿ ಪ್ರೊಸೆಸರ್​​ಗಿಂತಲೂ ಹೆಚ್ಚು ಪವರ್​ಫುಲ್​ ಆಗಿರಲಿದೆ.

oppo-reno6-pro-likely-to-feature-dimensity-1200-report
ಒಪ್ಪೊ ಹೊರತರಲಿದೆ ಮೊದಲ ಡೈಮೆನ್ಸಿಟಿ 1200 ಪವರ್​ಫುಲ್ ಫೋನ್​​​​​

By

Published : May 13, 2021, 4:43 PM IST

ಬೀಜಿಂಗ್​​​ (ಚೀನಾ):ಚೀನಾ ಮೊಬೈಲ್ ತಯಾರಿಕಾ ಕಂಪನಿಯಾಗಿರುವ ಒಪ್ಪೊ ತನ್ನ ರೆನೋ-6 ಸೀರಿಸ್​ ಲಾಂಚ್ ಮಾಡಲು ಮುಂದಾಗಿದೆ. ಮೊದಲ ಬಾರಿಗೆ ಮೀಡಿಯಾ ಟೆಕ್​ ಡೈಮೆನ್ಸಿಟಿ 1200 ಪವರ್​​ಫುಲ್ ಪ್ರೊಸೆಸರ್​​​​ನೊಂದಿಗೆ ಹೊರಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಒಪ್ಪೊ ಮೊಬೈಲ್​ಗಳು ಮಾಡೆಲ್​ ನಂಬರ್ PEQM00, PEPM00 ಮತ್ತು PENM00ಗಳನ್ನು ಚೀನಾದಲ್ಲಿ ರೆನೋ06, ರೆನೋ06ಪ್ರೋ, ರೆನೋ06 ಪ್ರೋ ಪ್ಲಸ್​ ಎಂಬ ಹೆಸರಿನಲ್ಲಿ ಲಾಂಚ್​ ಆಗಲಿವೆ.

ಈ ಮೊದಲು ಡೈಮೆನ್ಸಿಟಿ 900 ಮಾಡೆಲ್ ಫೋನ್​​ಗಳನ್ನು ಹೊರತಂದಿರುವ ಒಪ್ಪೊ ಇದೀಗ ಅದರ ಪ್ರೋ ಮಾಡೆಲ್​ನಲ್ಲಿ ಡೈಮೆನ್ಸಿಟಿ 1200 ಪ್ರೊಸೆಸರ್ ಇರಲಿದೆ. ಇದರಲ್ಲಿ ರೆನೊ06 ನಲ್ಲಿ 6ಎನ್​ಎಂ ಚಿಪ್​ಸೆಟ್​ ಜೊತೆ ಡೈಮೆನ್ಸಿಟಿ 900 ಇರಲಿದ್ದು, ಇದು ಸ್ನ್ಯಾಪ್​ಡ್ರ್ಯಾಗನ್​ 786ಜಿ ಪ್ರೊಸೆಸರ್​​ಗಿಂತಲೂ ಹೆಚ್ಚು ಪವರ್​ಫುಲ್​ ಆಗಿರಲಿದೆ. ಆದರೆ ರೆನೊ06 ಪ್ರೋ ಪ್ಲಸ್​ ಮೊಬೈಲ್​ನಲ್ಲಿ ಮಾತ್ರ ಸ್ನ್ಯಾಪ್​ಡ್ರ್ಯಾಗನ್ 870 ಚಿಪ್​​ಸೆಟ್​ ಹೊಂದಿರಲಿದೆ.

ಈ ಮೊದಲು ಮಾರ್ಚ್​ 22ರಂದು ಮೊಬೈಲ್​ ಹೊರಬರಲಿದೆ ಎನ್ನಲಾಗಿತ್ತು. ಆದ್ರೀಗ ಮೇ​ 27ರಂದು ಅನೌನ್ಸ್ ಅಗಲಿದೆ ಎಂದು ವರದಿಯಾಗಿದೆ. ರೆನೊ06 ಪ್ರೋ ಮೊಬೈಲ್​ನಲ್ಲಿ 6.55 ಇಂಚಿನ ಓಎಲ್​​ಇಡಿ ಜೊತೆ 32 ಎಂಪಿ ಕ್ಯಾಮರಾ ಇದ್ದು, ಮುಖ್ಯ ಕ್ಯಾಮರಾ 64 ಎಂಪಿ ಆಗಿರಲಿದೆ. ಅಲ್ಲದೆ 4,500 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ, ಹಾಗೂ 65 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಿಗಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಆದರೆ ಇದರ ಬೆಲೆ ಎಷ್ಟು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಜೊತೆಗೆ ಭಾರತದಲ್ಲಿ ಯಾವಾಗ ರಿಲೀಸ್ ಆಗಲಿದೆ ಎಂಬ ಕುರಿತು ಮಾಹಿತಿ ನೀಡಿಲ್ಲ.

ABOUT THE AUTHOR

...view details