ನವದೆಹಲಿ: ನಿಮ್ಮ ಫೀಡ್ನಲ್ಲಿರುವ ವಿಡಿಯೋಗಳಿಗೆ ಕಂಪನಿಯು ಸ್ವಯಂ - ರಚಿತ ಶೀರ್ಷಿಕೆಗಳನ್ನು ಸೇರಿಸುತ್ತಿದೆ ಎಂದು ಇನ್ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಮಂಗಳವಾರ ಹೇಳಿದ್ದಾರೆ.
ಟಿಕ್ಟಾಕ್ ಕಳೆದ ಏಪ್ರಿಲ್ನಲ್ಲಿ ಸ್ವಯಂ-ಶೀರ್ಷಿಕೆಗಳನ್ನು ಪರಿಚಯಿಸಿತ್ತು. ಇದೀಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಕೂಡ ಈ ರೀತಿಯ ಫೀಚರ್ ಪರಿಚಯಿಸಿದ್ದು, ಶೀರ್ಷಿಕೆಗಳು ಡೀಫಾಲ್ಟ್ ಆಗಿ ಆನ್ ಆಗುತ್ತವೆ. ಪ್ರಾರಂಭದಲ್ಲಿ ಈ ಶೀರ್ಷಿಕೆಗಳು ಆಯ್ಕೆಯ ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದು, ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಭಾಷೆಗಳಿಗೆ ಶೀರ್ಷಿಕೆಗಳನ್ನು ವಿಸ್ತರಿಸಲಾಗುತ್ತದೆ ಎಂದು ಮೊಸ್ಸೆರಿ ತಿಳಿಸಿದ್ದಾರೆ.