ಸ್ಯಾನ್ ಫ್ರಾನ್ಸಿಸ್ಕೊ (ಯು.ಎಸ್):ಅಕ್ಟೋಬರ್‌ನಲ್ಲಿ ಫೇಸ್‌ಬುಕ್, ಖಾತೆಗಳು, ಪೇಜ್ಗಳು ಮತ್ತು ಗ್ರೂಪ್ಗಳ 14 ನೆಟ್‌ವರ್ಕ್‌ಗಳನ್ನು ತೆಗೆದುಹಾಕಿದೆ.
ಅವುಗಳಲ್ಲಿ ಜಾರ್ಜಿಯಾ, ಮ್ಯಾನ್ಮಾರ್, ಉಕ್ರೇನ್ ಮತ್ತು ಅಜೆರ್ಬೈಜಾನ್ನಿಂದ 8 ನೆಟ್‌ವರ್ಕ್‌ಗಳು ತಮ್ಮ ದೇಶಗಳಲ್ಲಿನ ದೇಶೀಯ ಪ್ರೇಕ್ಷಕರನ್ನು ಮತ್ತು ಇರಾನ್, ಈಜಿಪ್ಟ್, ಯುಎಸ್ ಮತ್ತು ಮೆಕ್ಸಿಕೊದಿಂದ 6 ನೆಟ್‌ವರ್ಕ್‌ಗಳು ತಮ್ಮ ದೇಶಗಳ ಹೊರಗಿನ ಜನರನ್ನು ಗುರಿಯಾಗಿಸಿದೆ.
ಮ್ಯಾನ್ಮಾರ್‌ನಲ್ಲಿ ಪಿಆರ್ ಏಜೆನ್ಸಿಯಾದ ಓಪನ್‌ಮೈಂಡ್‌ಗೆ ಲಿಂಕ್ ಮಾಡಲಾದ 36 ಫೇಸ್‌ಬುಕ್ ಖಾತೆಗಳು, ಆರು ಪೇಜ್ಗಳು, ಎರಡು ಗ್ರೂಪ್ಗಳು ಮತ್ತು ಒಂದು ಇನ್ಸ್ಟಾಗ್ರಾಂ ಖಾತೆ ತೆಗೆದುಹಾಕಿದೆ.
"ಮ್ಯಾನ್ಮಾರ್‌ನಲ್ಲಿ ನವೆಂಬರ್ ಚುನಾವಣೆಗೆ ಮುಂಚಿತವಾಗಿ ಶಂಕಿತ ಹಾಗೂ ಅಸಮರ್ಪಕ ನಡವಳಿಕೆಯ ಕುರಿತು ನಮ್ಮ ಪೂರ್ವಭಾವಿ ತನಿಖೆಯಲ್ಲಿ ನಾವು ಈ ನೆಟ್ವರ್ಕ್ ಕುರಿತು ತಿಳಿದು ಕೊಂಡಿದ್ದೇವೆ" ಎಂದು ಫೇಸ್‌ಬುಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯುಎಸ್ನಲ್ಲಿ, ಟರ್ನಿಂಗ್ ಪಾಯಿಂಟ್ ಯುಎಸ್ಎ ಮತ್ತು ಇನ್ಕ್ಲೂಸಿವ್ ಕನ್ಸರ್ವೇಶನ್ ಗ್ರೂಪ್ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಯುಎಸ್ ಮಾರ್ಕೆಟಿಂಗ್ ಸಂಸ್ಥೆಯಾದ ರ್ಯಾಲಿ ಫೊರ್ಜ್ಗೆ ಲಿಂಕ್ ಮಾಡಲಾದ 202 ಫೇಸ್‌ಬುಕ್ ಖಾತೆಗಳು, 54 ಪೇಜ್ಗಳು ಮತ್ತು 76 ಇನ್ಸ್ಟಾಗ್ರಾಂ ಖಾತೆಗಳನ್ನು ಫೇಸ್‌ಬುಕ್ ತೆಗೆದುಹಾಕಿದೆ.