ಕರ್ನಾಟಕ

karnataka

ETV Bharat / lifestyle

ಆನ್‌ಲೈನ್‌ನಲ್ಲಿ ಮಕ್ಕಳ ರಕ್ಷಣೆಗೆ ಹೊಸ ಫೀಚರ್ ಪರಿಚಯಿಸಿದ ಫೇಸ್‌ಬುಕ್‌ - ಸೈಬರ್‌ ಪೀಸ್‌ ಫೌಂಡೇಷನ್‌

ಸದಾ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರ ಸ್ನೇಹಿಯಾಗಿರುವ ವಿಶ್ವದ ದೈತ್ಯ ಸಂಸ್ಥೆ ಫೇಸ್‌ಬುಕ್‌ ಇದೀಗ ಮಕ್ಕಳ ರಕ್ಷಣೆಗಾಗಿ ಹೊಸ ಸೌಲಭ್ಯವನ್ನು ಬಿಡುಗಡೆ ಮಾಡಿದೆ. ಎಫ್‌ಬಿಯಲ್ಲಿನ ನೂತನ ಫೀಚರ್‌ನಿಂದ ಮಕ್ಕಳಿಗೆ ನೀಡುವ ಕಿರುಕುಳದ ವಿಷಯದ ವರದಿ ಮತ್ತು ಅದನ್ನು ಜನರು ಹಂಚಿಕೊಳ್ಳುವುದನ್ನು ತಡೆಯಬಹುದಾಗಿದೆ.

facebook-launches-new-initiative-to-help-children-be-safe-online
ಆನ್‌ಲೈನ್‌ನಲ್ಲಿ ಮಕ್ಕಳ ರಕ್ಷಣೆಗೆ ಸಹಕಾರಿಯ ಹೊಸ ಸೌಲಭ್ಯ ಪರಿಚಯಿಸಿದ ಫೇಸ್‌ಬುಕ್‌

By

Published : Jun 16, 2021, 5:21 PM IST

ನವದೆಹಲಿ:ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಫೇಸ್‌ಬುಕ್ ಮಕ್ಕಳಿಗಾಗಿ ಹೊಸ ಸೌಲಭ್ಯವನ್ನು ಪರಿಚಯಿಸಿದ್ದು, ಈ ನೂತನ ಫೀಚರ್‌ನಲ್ಲಿ ಮಕ್ಕಳಿಗೆ ನೀಡುವ ಕಿರುಕುಳದ ವಿಷಯವನ್ನು ಫೇಸ್‌ಬುಕ್‌ನಲ್ಲಿ ವರದಿ ಮಾಡುವುದು ಮತ್ತು ಅದನ್ನು ಜನರು ಹಂಚಿಕೊಳ್ಳುವುದನ್ನು ತಡೆಯಲು ಸಹಕಾರಿಯಾಗಿದೆ.

ಸೈಬರ್‌ ಪೀಸ್‌ ಫೌಂಡೇಶನ್, ಅರ್ಪಾನ್, ಆರಂಭ ಸಂಸ್ಥೆಗಳ ಸಹಯೋಗದಲ್ಲಿ ಈ ಫೀಚರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಮಗುವಿನ ಮೇಲೆ ನಕರಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಇದನ್ನು ತಡೆಯುವ ಸಲುವಾಗಿ ಎಫ್‌ಬಿ ಈ ಸೌಲಭ್ಯವನ್ನು ಪರಿಚಯಿಸಿದೆ.

ಇದನ್ನೂ ಓದಿ: ಕೋವ್ಯಾಕ್ಸಿನ್‌ನಲ್ಲಿ ನವಜಾತ ಕರು ಸೀರಮ್ ಬಳಕೆಯಾಯ್ತೇ.. ಕೇಂದ್ರ ಆರೋಗ್ಯ ಸಚಿವಾಲಯದ ಸ್ಪಷ್ಟನೆ ಹೀಗಿದೆ..

ಫೇಸ್‌ಬುಕ್‌ ಇಂಡಿಯಾದ ಕಾರ್ಯಕ್ರಮಗಳ ಜಾರಿ ಮುಖ್ಯಸ್ಥ ಮಧು ಸಿರೋಹಿ ಮಾತನಾಡಿ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸುರಕ್ಷಿತ ಮತ್ತು ಬೆಂಬಲಿತ ವಾತಾವರಣವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮಕ್ಕಳ ಮೇಲಿನ ದೌರ್ಜನ್ಯದಂತಹ ವಿಷಯವನ್ನು ಜನರು ನೋಡುವ ಮೊದಲೇ ಗುರುತಿಸಲು ಮತ್ತು ತೆಗೆದುಹಾಕಲು, ಅದರ ಬಗ್ಗೆ ಸೂಕ್ತವಾದ ಜಾಗೃತಿ ಮೂಡಿಸಲು ನಾವು ಬಯಸುತ್ತೇವೆ. ಇದಕ್ಕಾಗಿ ತಂತ್ರಜ್ಞಾನವನ್ನು ರೂಪಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಮಗುವಿಗೆ ಅಪಾಯ ಎದುರಾಗುವ ವಿಷಯವನ್ನು ವರದಿ ಮಾಡಲು, 1098 ಗೆ ಕರೆ ಮಾಡಿ ಮತ್ತು ಅದನ್ನು ಚೈಲ್ಡ್‌ ​​ಇಂಡಿಯಾ ಫೌಂಡೇಶನ್‌ಗೂ ಮಾಹಿತಿ ನೀಡಬಹುದು. ಫೇಸ್‌ಬುಕ್‌ನಲ್ಲಿ ಈ ಸೌಲಭ್ಯಗಳಿವೆ. Fb.me/online ಮಕ್ಕಳ ರಕ್ಷಣೆಯಲ್ಲಿ ವರದಿ ಮಾಡಬಹುದು. ಈ ವರ್ಷದ ಆರಂಭದಲ್ಲಿ, ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಶೋಷಣೆಯ ವಿಷಯವನ್ನು ಅರ್ಥಮಾಡಿಕೊಳ್ಳಲು ಆಳವಾದ ವಿಶ್ಲೇಷಣೆ ನಡೆಸಲಾಗಿತ್ತು.

ABOUT THE AUTHOR

...view details