ಶಿವಮೊಗ್ಗ:ಬ್ಯಾಂಕ್ನಿಂದ ಹಣ ಬಿಡಿಸಿಕೊಂಡು ಬರುವ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ಹಣ ಎಗರಿಸುತ್ತಿದ್ದ ತಮಿಳುನಾಡಿನ ಇಬ್ಬರು ಕಳ್ಳರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕ್ನಿಂದ ಹಣ ತರುವ ಜನರನ್ನೇ ಟಾರ್ಗೆಟ್ ಮಾಡಿ ಹಣ ದೋಚುತ್ತಿದ್ದ ಖದೀಮರು ಅಂದರ್
ಬ್ಯಾಂಕ್ನಿಂದ ಹಣ ಬಿಡಿಸಿಕೊಂಡು ಬರುವ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ಹಣ ಎಗರಿಸುತ್ತಿದ್ದ ತಮಿಳುನಾಡಿನ ಇಬ್ಬರು ಕಳ್ಳರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೀರ್ಥಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬ್ಯಾಂಕ್ನಿಂದ ಹಣ ಬಿಡಿಸಿಕೊಂಡು ಬಂದವರನ್ನೇ ನೋಡಿ ಅವರಿಂದ ಹಣ ಲಪಟಾಯಿಸುತ್ತಿದ್ದರು. ನವೆಂಬರ್ ತಿಂಗಳಲ್ಲಿ ಬ್ಯಾಂಕ್ನಿಂದ ಹಣ ತಂದ ವ್ಯಕ್ತಿಯೊಬ್ಬರು ಬೈಕ್ನಲ್ಲಿಟ್ಟು ಅಂಗಡಿಗೆ ಹೋಗಿ ವಾಪಸ್ ಬರುವುದರಲ್ಲಿ ಸೂಟ್ಕೇಸ್ ಅಪಹರಿಸಿದ್ದರು ಈ ಕತರ್ನಾಕ್ ಕಳ್ಳರು. ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ಕಾರ್ತಿಕ್ ಅಲಿಯಾಸ್ ಶಿವರಾಜ್ (30) ಹಾಗೂ ಕಾರ್ತಿಕೇಯನ್ (30) ಎಂಬವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 20 ಲಕ್ಷ ರೂ. ಹಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಯೂನಿಕಾರ್ನ್ ಬೈಕ್ ಹಾಗೂ 3 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ ತೀರ್ಥಹಳ್ಳಿ ಡಿವೈಎಸ್ಪಿ ರವಿ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಗಣೇಶಪ್ಪ, ಪಿಎಸ್ಐ ಸುಷ್ಮಾ ಹಾಗೂ ಸಿಬ್ಬಂದಿ ಪ್ರಕಾಶ್, ಕುಮಾರ್, ಜನಾರ್ಧನ್, ದಿವಾಕರ್, ಸುಧಾಕರ್, ಜಗದೀಶ್ ಸೇರಿ ಇತರರನ್ನು ಎಸ್ಪಿ ಶಾಂತಕುಮಾರ್ ಹಾಗೂ ಎಎಸ್ಪಿ ಡಾ. ಶೇಖರ್ ಅಭಿನಂದಿಸಿದ್ದಾರೆ.
TAGGED:
bankmoney_arrest