ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದಿರುವ ಘಟನೆ ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹೇಶ(19) ಮೃತ ದುರ್ದೈವಿ.
ಒಂದ್ ಮಾತು ಬರುತ್ತೆ ಹೋಗುತ್ತೆ, ಅದಕ್ಕೆ ಕೊಲೆ ಮಾಡಬೇಕಾ?- ಕತ್ತು ಹಿಸುಕಿದ ಸ್ನೇಹಿತನ ರೂಪದ ರಾಕ್ಷಸರು - ಕೊಲೆ
ಖುಷಿ ಖುಷಿಯಾಗಿದ್ದ ಸ್ನೇಹಿತರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಅದು ವಿಕೋಪಕ್ಕೆ ಹೋಗ್ತಿದ್ದಂತೆಯೇ ಗೆಳೆಯರೇ ಸೇರಿ ಆ ಒಂಟಿ ಸ್ನೇಹಿತನ ಕತ್ತು ಹಿಸುಕಿದ್ದಾರೆ.
ಕೊಲೆ
ದೇವಾಲಯಕ್ಕೆ ತೆರಳಿದ ವೇಳೆ ಸ್ನೇಹಿತರೊಂದಿಗೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು, ಬಳಿಕ ಮಹೇಶ್ ಮನೆ ಹತ್ತಿರ ಬಂದು ಈ ಜಗಳ ಮುಂದುವರಿದಿದೆ. ಗಲಾಟೆಯಲ್ಲಿ ಮಹೇಶನ ಕತ್ತನ್ನು ಆತನ ಗೆಳೆಯರೇ ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated : Apr 21, 2019, 9:51 PM IST