ಗಂಗಾವತಿ: ತಾಲೂಕಿನ ವಡಕಿ ಗ್ರಾಮದಲ್ಲಿ ಪಡೆದ ಸಾಲ ಹಿಂತಿರುಗಿಸುವ ವಿಷಯದಲ್ಲಿ ನಾಲ್ವರ ನಡುವೆ ಜಗಳ ನಡೆದು ರಾಮಣ್ಣ ಕ್ಯಾಡೇದ್ ಎಂಬುವರ ಕೊಲೆಯಲ್ಲಿ ಅಂತ್ಯವಾಗಿದ್ದು, ಹತ್ಯೆ ಮಾಡಿದ ಮೂವರು ಆರೋಪಿಗಳನ್ನು ಗಂಗಾವತಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಪಡೆದ ಸಾಲ ಕೇಳಿದ್ದಕ್ಕೆ ನಡೆದ ಜಗಳ ವ್ಯಕ್ತಿ ಕೊಲೆಯಲ್ಲಿ ಅಂತ್ಯ - ಕೊಪ್ಪಳ ಅಪರಾಧ ಸುದ್ದಿ
ಗಂಗಾವತಿ ತಾಲೂಕಿನ ವಡಕಿ ಗ್ರಾಮದಲ್ಲಿ ಪಡೆದ ಸಾಲ ಹಿಂತಿರುಗಿಸುವ ವಿಷಯದಲ್ಲಿ ನಾಲ್ವರ ನಡುವೆ ಜಗಳ ನಡೆದು ರಾಮಣ್ಣ ಕ್ಯಾಡೇದ್ ಎಂಬುವರ ಕೊಲೆಯಲ್ಲಿ ಅಂತ್ಯವಾಗಿದೆ.
ಗಂಗಾವತಿ ಮಸಾರಿ ಕ್ಯಾಂಪಿನ ಮುತ್ತಣ್ಣ ಭೋವಿ, ಯಮನೂರ ಅಮದಾಳ ಹಾಗೂ ನೇತ್ರಕುಮಾರ ಬಂಧಿತರು.
ರಾಮಣ್ಣ ಕ್ಯಾಡೇದ್ ಅವರು ಕನಕಗಿರಿ ತಾಲೂಕಿನ ವಡಕಿ ಗ್ರಾಮದವರು. ರಾಮಣ್ಣ ಅವರು ಮುತ್ತಣ್ಣ ಭೋವಿ ಎಂಬ ವ್ಯಕ್ತಿಗೆ ಒಂದೂವರೆ ಲಕ್ಷ ರೂಪಾಯಿ ಸಾಲ ನೀಡಿದ್ದರು. ಮರಳಿ ಹಣ ನೀಡುವಂತೆ ರಾಮಣ್ಣ ಒತ್ತಾಯಿಸಿದ್ದರು.ಹಣ ಕೊಡುವುದಿಲ್ಲ, ಏನು ಬೇಕಾದರೂ ಮಾಡಿಕೋ ಹೋಗು ಎಂದು ಮುತ್ತಣ್ಣ ರಾಮಣ್ಣನಿಗೆ ಅವಾಜ್ ಹಾಕಿದ್ದಾನೆ. ಆಗ ರಾಮಣ್ಣ, ನನ್ನ ಹಣ ಏಕೆ ನೀಡುವುದಿಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿ ರಾಮಣ್ಣನ ಹತ್ಯಗೈದು ತುಂಗಭದ್ರಾ ಎಡದಂಡೆಗೆ ಎಸೆದಿರುವುದಾಗಿ ಆರೋಪಿಗಳು ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.