ಕರ್ನಾಟಕ

karnataka

ETV Bharat / jagte-raho

ಡ್ರಾಪ್‌ ನೆಪದಲ್ಲಿ ಟೆಕ್ಕಿಗೆ ಚಾಕುವಿನಿಂದ ಇರಿದು ಹಲ್ಲೆ: ನಗದು-ಚಿನ್ನಾಭರಣ ಕಿತ್ತುಕೊಂಡು ಖದೀಮರು ಪರಾರಿ

ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ ಟೆಕ್ಕಿ ಮೇಲೆ ಹಲ್ಲೆ ನಡೆಸಿದ ಖದೀಮರು, ನಗದು-ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

Cash grabbers escaped
ಡ್ರಾಪ್‌ ನೆಪದಲ್ಲಿ ಟೆಕ್ಕಿಗೆ ಚಾಕುವಿನಿಂದ ಹಲ್ಲೆ

By

Published : Jan 14, 2020, 6:58 AM IST

ಮೈಸೂರು:ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ ಟೆಕ್ಕಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಖದೀಮರು, ನಗದು-ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮೈಸೂರಿನ ಗೌರಿ ಶಂಕರದ ನಿವಾಸಿ ಮಧು ವಿಕಾಸ್ (34) ಹಲ್ಲೆಗೊಳಗಾದವರು. ಮೈಸೂರಿನಿಂದ ಬೆಂಗಳೂರಿಗೆ ತೆರಳಲು ಸೋಮವಾರ ಬೆಳಗ್ಗೆ 5ಗಂಟೆಗೆ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಬಿಳಿ ಬಣ್ಣದ ಕಾರೊಂದು ನಿಲ್ದಾಣದ ಹೊರಗೆ ನಿಲ್ಲಿಸಿಕೊಂಡಿದ್ದ ವ್ಯಕ್ತಿಯೊಬ್ಬ ಬೆಂಗಳೂರು..ಬೆಂಗಳೂರು ಎಂದು ಕೂಗಿದ್ದಾನೆ. ಬೆಂಗಳೂರು ಬೇಗ ತಲುಪಬಹುದು ಎಂದು ವಿಕಾಸ್ ಕಾರು ಹತ್ತಿದ್ದಾರೆ.

ಕಾರಿನಲ್ಲಿ ಚಾಲಕನೊಂದಿಗೆ ಮತ್ತಿಬ್ಬರಿದ್ದರು. ವಿಕಾಸ್ ಕಾರಿನಲ್ಲಿ ಕುಳಿತ ಕೂಡಲೇ ಬೆಂಗಳೂರಿನತ್ತ ಚಾಲಕ ತೆರಳಿದರು. ರಿಂಗ್ ರಸ್ತೆಯ ಕೊಲಂಬಿಯಾ ಆಸ್ಪತ್ರೆ ಸಮೀಪ ಬರುತ್ತಿದ್ದಂತೆ ಕಾರನ್ನು ಕೆ.ಆರ್.ರಸ್ತೆ ಕಡೆಗೆ ತಿರುಗಿಸಿದ್ದ. ಈ ಕಡೆ ಕಾರು ಏಕೆ ತೆರಳುತ್ತಿದ್ದಿಯಾ ಎಂದು ವಿಕಾಸ್​​​ ಪ್ರಶ್ನಿಸಿದ.

ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ, ವಿಕಾಸ್‌ ಕುತ್ತಿಗೆ ಹಿಡಿದುಕೊಂಡು 5 ಗ್ರಾಂ. ಚಿನ್ನದ ಉಂಗುರ ಮತ್ತು 10 ಗ್ರಾಂ. ಚಿನ್ನದ ಸರ ಕಿತ್ತುಕೊಂಡ. ಬಳಿಕ ಪರ್ಸ್ ಕಿತ್ತುಕೊಂಡು ಎಟಿಎಂ ಕಾರ್ಡ್‌ ಪಡೆದು ಪಿನ್‌ಕೋಡ್ ಹೇಳುವಂತೆ ಬೆದರಿಸಿದ್ದಾನೆ. ವಿಕಾಸ್ ಪಿನ್‌ಕೋಡ್ ಹೇಳದ ಕಾರಣ ಚಾಕುವಿನಿಂದ ತೊಡೆಗೆ ಇರಿದಿದ್ದಾರೆ.

ಗಾಬರಿಗೊಂಡ ವಿಕಾಸ್, ತಕ್ಷಣ ಪಿನ್‌ಕೋಡ್ ಹೇಳಿದ್ದಾನೆ. ಅಲ್ಲಿಂದ ಒಂಟಿಕೊಪ್ಪಿನ ಎಂಟಿಎಂನಲ್ಲಿ ₹ 20 ಸಾವಿರ ಹಾಗೂ ಅಶೋಕ್​ ರಸ್ತೆಯಲ್ಲಿರುವ ಎಟಿಎಂನಲ್ಲಿ ₹ 22 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ವಿಕಾಸ್‌ನನ್ನು ಕೆ.ಆರ್.ಆಸ್ಪತ್ರೆಯ ಎದುರು ಕಾರಿನಿಂದ ಹೊರ ತಳ್ಳಿ ಪರಾರಿಯಾಗಿದ್ದಾರೆ.

ವಿಕಾಸ್​ ನೀಡಿದ ದೂರನ್ನು ಪ್ರಕರಣ ದಾಖಲಿಸಿಕೊಂಡ ಲಷ್ಕರ್​​ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಬಳಿಕ ಪೊಲೀಸರು ಗಾಯಗೊಂಡಿದ್ದ ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.

ABOUT THE AUTHOR

...view details