ಕರ್ನಾಟಕ

karnataka

ETV Bharat / jagte-raho

ಡ್ರಗ್ಸ್ ಪ್ರಕರಣ: ಸಿಸಿಬಿಗೆ ಸಿಗುತ್ತಿಲ್ಲ ಆದಿತ್ಯ ಆಳ್ವಾ ಸುಳಿವು! - Aditya Alva

ಡ್ರಗ್ಸ್ ಮಾಫಿಯಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದಾರೆ. ಸದ್ಯಕ್ಕೆ ಆರೋಪಿ ಯಾರ ಸಂಪರ್ಕಕ್ಕೂ ಸಿಗದ ಕಾರಣ ಸಿಸಿಬಿ ಪೊಲೀಸರಿಗೆ ಹುಡುಕಾಟ ನಡೆಸಲು ಬಹಳ ಕಷ್ಟವಾಗಿದೆ.

Aditya alva
ಆದಿತ್ಯ ಆಳ್ವಾ

By

Published : Oct 2, 2020, 11:11 AM IST

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಾಯಕ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದು, ಈತನಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರೂ ಕೂಡ ಈವರೆಗೆ ಸುಳಿವು ಸಿಗುತ್ತಿಲ್ಲ.

ಆದಿತ್ಯ ಆಳ್ವಾನಿ ಅವರಿಗೆ ಪೇಜ್ ತ್ರಿ ಪಾರ್ಟಿ ಆಯೋಜಕ ಕಿಂಗ್ ಪಿನ್ ವಿರೇನ್ ಜೊತೆ ನಂಟು ಇದೆ ಎನ್ನಲಾಗ್ತಿದ್ದು, ಈತ ರಿಯಲ್ ಎಸ್ಟೇಟ್‌ ಸೇರಿದಂತೆ ಇತರೆ ಉದ್ಯಮ ನಡೆಸುತ್ತಿದ್ದ. ಹಾಗೆಯೇ ಈತನ ಭಾವ ವಿವೇಕ್ ಒಬೆರಾಯ್ ನಿಂದಾಗಿ ಚಲನಚಿತ್ರದ ನಂಟು ಕೂಡ ಬೆಳೆದಿತ್ತು. ನಂತರ ವಿರೇನ್ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಹೋಗುತ್ತಿದ್ದರು. ರಾಗಿಣಿ ಆಪ್ತ ರವಿಶಂಕರ್ ಹಾಗೂ ಸಂಜನಾ ಆಪ್ತ ರಾಹುಲ್ ಮೂಲಕ ಡ್ರಗ್ಸ್ ಪೂರೈಸಿ, ಡ್ರಗ್ಸ್​ ಮಾಫಿಯಾದಲ್ಲಿ ತೊಡಗಿ ಹಣ ಗಳಿಸುತ್ತಿದ್ದ ಎನ್ನಲಾಗ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ ಆಳ್ವಾ ಪಾತ್ರ ಬಹಳ ಪ್ರಾಮುಖ್ಯತೆಯಿಂದ ಕೂಡಿದೆ. ಯಾಕಂದ್ರೆ, ಆದಿತ್ಯ ಬಹಳ ಪ್ರತಿಷ್ಠಿತ ನಟಿ ನಟರು, ಮಾಡೆಲ್​ಗಳನ್ನು ಕರೆತಂದು ಡ್ರಗ್ಸ್ ಜಾಲದಲ್ಲಿ ತೊಡಗಿಸಿದ್ದರು ಎನ್ನಲಾಗ್ತಿದೆ.

ಡ್ರಗ್ಸ್ ಮಾಫಿಯಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆದಿತ್ಯ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ವಿದೇಶಕ್ಕೆ ತೆರಳಬಾರದೆಂದು ನೋಟಿಸ್ ಜಾರಿ ಮಾಡಲಾಗಿದೆ. ಮತ್ತೊಂದೆಡೆ ಮುಂಬೈನಲ್ಲಿರುವ ಮಾಹಿತಿ ಮೇರೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಆರೋಪಿ ಆದಿತ್ಯ ಆಳ್ವಾ ಯಾರ ಸಂಪರ್ಕಕ್ಕೂ ಸಿಗದ ಕಾರಣ ಸಿಸಿಬಿ ಪೊಲೀಸರಿಗೆ ಹುಡುಕಾಟ ನಡೆಸಲು ಬಹಳ ಕಷ್ಟವಾಗಿದೆ ಎನ್ನಲಾಗ್ತಿದೆ.

ABOUT THE AUTHOR

...view details