ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಸಬ್ಬುವಾರಿ ಪಾಲೆನಿ ಗ್ರಾಮದ ವೆಂಕೆಟೇಶ್ವರರಾವು ತನ್ನ ಕುಟುಂಬಸ್ಥರು ಮತ್ತು ಬಂಧು ಸೇರಿದಂತೆ 11 ಜನರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದರು. ಭಾನುವಾರ ದೇವರ ದರ್ಶನ ಪಡೆದು ಸ್ವಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆ ಕುಟುಂಬ ಜೀವಂತವಾಗಿ ವಾಪಾಸ್ ಬರಲೇ ಇಲ್ಲ! - ವಾಪಾಸ್
ಕುಟುಂಬಸ್ಥರು, ಸಂಬಂಧಿಕರು ಸೇರಿ 11 ಜನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತೆರಳಿದ್ದರು. ಆದ್ರೆ, ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಆಗುತ್ತಿದ್ದ ವೇಳೆ, ದುರಂತ ಸಂಭವಿಸಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ತಿರುಪತಿ ತಿಮ್ಮಪ್ಪನ ದರ್ಶನ
ಗುಂಟೂರು ಜಿಲ್ಲೆಯ ಚಿಲಕಲೂರಿಪೇಟ ಹತ್ತಿರ ನಿಂತಿದ್ದ ಲಾರಿಯನ್ನು ವೆಂಕೆಟೇಶ್ವರರಾವು ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ 11 ಜನರ ಪೈಕಿ ವೆಂಕೆಟೇಶ್ವರ್ ರಾವ್, ಆತನ ಪತ್ನಿ ಸೂರ್ಯ ಭವಾನಿ, ಮಗಳು ಸೋನಾಕ್ಷಿ, ಮಗ ಗೀತೇಶ್ವರ್, ಸಹೋದರ ಆನಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.