ರಾಯದುರ್ಗಂ:ಮಹಿಳೆಯೊಬ್ಬಳು ವರ್ಷದವರೆಗೂ ನಾಲ್ವರೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದ ಘಟನೆ ಅನಂತಪುರಂ ಜಿಲ್ಲೆಯ ರಾಯದುರ್ಗಂನಲ್ಲಿ ನಡೆದಿದೆ.
ದಂಪತಿ ಕೈ - ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸದರಿ ಮಹಿಳೆ ನಿತ್ಯ ಹಾಲು ತರಲು ಮನೆ ಬಳಿರುವ ಶಾಪ್ಗೆ ತೆರಳುತ್ತಿದ್ದಳು. ಈ ಪರಿಚಯ ನಂತರ ಸ್ನೇಹವಾಗಿ ಪರಿವರ್ತನೆಯಾಗಿದೆ. ಬಳಿಕ ಫೇಸ್ಬುಕ್ ಮೂಲಕ ಆ ಯುವಕ ಮಹಿಳೆಗೆ ಮತ್ತಷ್ಟು ಹತ್ತಿರವಾಗಿದ್ದಾನೆ. ಈ ಕ್ರಮದಲ್ಲಿ ಅವರ ಮಧ್ಯೆ ಸಂಭಾಷಣೆ ನಡೆದಿದ್ದು, ಯುವಕ ಅದನ್ನು ರೆಕಾರ್ಡ್ ಮಾಡಿದ್ದಾನೆ. ಬಳಿಕ ಈ ಸಂಭಾಷಣೆಯನ್ನು ನಿನ್ನ ಗಂಡನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ವಿವಾಹೇತರ ಸಂಬಂಧ ನಡೆಸಿದ್ದಾನೆ.
ಇನ್ನು ಆ ಯುವಕ ಅಷ್ಟಕ್ಕೆ ಸುಮ್ಮನಾಗದೇ ತನ್ನ ಮೂವರು ಗೆಳೆಯರನ್ನು ಮಹಿಳೆಗೆ ಪರಿಚಯ ಮಾಡಿಸಿದ್ದಾನೆ. ಅವರು ಸಹ ಮಹಿಳೆಗೆ ಬೆದರಿಕೆಯೊಡ್ಡಿ ಈಕೆಯೊಂದಿಗೆ ವಿವಾಹೇತರ ಸಂಬಂಧ ಮುಂದುವರಿಸಿದ್ದಾರೆ. ಇತ್ತಿಚೇಗೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾಗ ನಿನ್ನ ಗಂಡನನ್ನು ಕೊಲೆ ಮಾಡುತ್ತೇವೆ, ನಿನ್ನ ಮೇಲೆ ಆ್ಯಸಿಡ್ ಎರಚುತ್ತೇವೆ ಎಂದು ಬೆದರಿಕೆ ಹಾಕಿದ್ದರು.
ಇವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಈ ಸುದ್ದಿಯನ್ನು ತನ್ನ ಗಂಡನಿಗೆ ತಿಳಿಸಿದ್ದಾಳೆ. ಗಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಜಾಲ ಬೀಸಿದ್ದಾರೆ.