ಕರ್ನಾಟಕ

karnataka

ETV Bharat / jagte-raho

ಅರ್ಚಕನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ - ಬಾರ್ಮರ್​

ಅರ್ಚಕನನ್ನು ಕಟ್ಟಿ ಹಾಕಿ, ಅವರ ಪತ್ನಿಯ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Rajasthan
ಅತ್ಯಾಚಾರ

By

Published : Sep 11, 2020, 4:48 PM IST

ರಾಜಸ್ಥಾನ: ದೇವಸ್ಥಾನದ ಅರ್ಚಕನ ಪತ್ನಿಯ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಬಾರ್ಮರ್​ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಬಾರ್ಮರ್​ ಜಿಲ್ಲೆಯ ಪಂಚಪದ್ರ ಪ್ರದೇಶದಲ್ಲಿ ವಾಸವಿರುವ ಅರ್ಚಕನ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಮೊದಲು ಅರ್ಚಕನನ್ನು ಕಟ್ಟಿ ಹಾಕಿದ್ದಾರೆ. ಕೃತ್ಯ ಎಸಗಿ ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ದಂಪತಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಹುಡುಕುತ್ತಿರುವುದಾಗಿ ಪೊಲೀಸ್​ ವರಿಷ್ಠಾಧಿಕಾರಿ ಆನಂದ್​​ ಶರ್ಮಾ ತಿಳಿಸಿದ್ದಾರೆ.

ABOUT THE AUTHOR

...view details