ಸೇಲಂ(ತಮಿಳುನಾಡು):ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಮಹಿಳೆಗೆ ಹಿಂಬದಿಯಿಂದ ಬಂದ ಲಾರಿ ಗುದ್ದಿದ್ದು, ಘಟನೆಯ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿದ್ಯಾರ್ಥಿ ಎದುರೇ ಶಿಕ್ಷಕಿಯ ಭಯಾನಕ ಸಾವು..! ವಿಡಿಯೋ - ಸಿಸಿಟಿವಿ
ಹಿಂಬದಿಯಿಂದ ಬಂದ ಲಾರಿ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಮಹಿಳೆಗೆ ಗುದ್ದಿದ್ದು ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಭಯಾನಕ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆ್ಯಕ್ಸಿಡೆಂಟ್
ತಮಿಳುನಾಡು ಒಮಲೂರಿನ ಸಲೇಂನಲ್ಲಿ ವಾಸಿಸುತ್ತಿರುವ ಕ್ರಿಸ್ತಾ ಅಗಸ್ತಾ ರಾಣಿ ವೃತ್ತಿಯಲ್ಲಿ ಶಿಕ್ಷಕಿ. ತನ್ನ ವಿದ್ಯಾರ್ಥಿನಿ ಜೊತೆಗೆ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಲಾರಿ ಬಂದು ಅಪ್ಪಳಿಸಿದೆ.
ಲಾರಿ ಗುದ್ದಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಲಾಗಿದೆ ಎನ್ನುವ ಮಾತುಗಳೂ ಕೇಳಿಬಂದಿವೆ.