ಧಾರವಾಡ: ಸಾರ್ವತ್ರಿಕ ಲೋಕಸಭಾ ಚುನಾವಣೆ 2019ರ ಮಾದರಿ ನೀತಿ ಸಂಹಿತೆ ಜಿಲ್ಲೆಯಾದ್ಯಂತ ಜಾರಿಯಲ್ಲಿದ್ದು, ಇದುವರೆಗೆ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ಗಳಲ್ಲಿ ಒಟ್ಟು 43,94,850 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಧಾರವಾಡ ಚೆಕ್ ಪೋಸ್ಟ್ಗಳಲ್ಲಿ ಲಕ್ಷಾಂತರ ನಗದು, ಮದ್ಯ ವಶ - ನಗದು
ಲೋಕಸಭಾ ಚುನಾವಣೆ 2019 ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಈವರೆಗೆ ಧಾರವಾಡ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ಗಳಲ್ಲಿ ಲಕ್ಷಾಂತರ ರೂ. ನಗದು, ಮದ್ಯ ವಶಪಡಿಸಿಕೊಳ್ಳಲಾಗಿದೆ.
ಸುಮಾರು 12 ಲಕ್ಷಕ್ಕಿಂತಲೂ ಅಧಿಕ ಮೌಲ್ಯದ 4082.315 ಲೀಟರ್ ಮದ್ಯ, 6,000 ರೂ. ಮೌಲ್ಯದ ಮಾದಕ ವಸ್ತುಗಳನ್ನು ಅಬಕಾರಿ ದಳ ವಶಪಡಿಸಿಕೊಂಡಿದೆ. 49,71,590 ರೂ. ಮೌಲ್ಯದ 23 ದ್ವಿಚಕ್ರ ವಾಹನಗಳು, 3 ಮೊಬೈಲುಗಳು, 1 ಕ್ಯಾಂಟರ್ ವಾಹನ, 46 ಸೀರೆ, 78 ಧೋತಿ, 28 ಶಾಲು, 100 ಪ್ರಚಾರ ಫಲಕಗಳು, 2,220 ಗ್ಯಾಸ್ ಸ್ಟವ್ಗಳು, 5 ನಾಲ್ಕು ಚಕ್ರದ ವಾಹನಗಳು, ಎರಡು ಆಟೋಗಳು, 101 ಧ್ವಜಗಳು ಹಾಗೂ ಭಾರತೀಯ ಜನತಾ ಪಕ್ಷದ 550 ಕರಪತ್ರಗಳನ್ನು ಎಫ್‌ಎಸ್‌ಟಿ, ಎಸ್‌ಎಸ್‌ಟಿ ತಂಡಗಳು ಹಾಗೂ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.