ಕರ್ನಾಟಕ

karnataka

ETV Bharat / jagte-raho

ಪೆಟ್ರೋಲ್ ಬಂಕ್ ದರೋಡೆ ಪ್ರಕರಣ: ಆರೋಪಿಗಳ ಬಂಧನ

ಡಿ. 12 ರಂದು ಬೆಳಗ್ಗೆ 5 ಗಂಟೆಗೆ ವಿರಾಜಪೇಟೆ ತಾಲೂಕಿನ ಕುಟ್ಟಾ-ಮಾನಂದವಾಡಿ ರಸ್ತೆಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್‌ನಲ್ಲಿ ಸಂಚು ರೂಪಿಸಿ ಬಂಕ್‌ನಲ್ಲಿದ್ದ 24,200 ರೂ ಹಣವನ್ನು ಕದ್ದು ಪರಾರಿಯಾಗಿದ್ದ ಖದೀಮರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

kodagu-police-arrested-petrol-bump-robbers
ಟ್ರೋಲ್ ಬಂಕ್ ದರೋಡೆ ಪ್ರಕರಣ: ಆರೋಪಿಗಳ ಬಂಧನ

By

Published : Dec 28, 2019, 7:08 AM IST

Updated : Dec 28, 2019, 7:25 AM IST

ಕೊಡಗು : ಪೆಟ್ರೋಲ್ ಬಂಕ್ ದರೋಡೆ ಪ್ರಕರಣ ಭೇದಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಓರ್ವ ಬಾಲಾಪರಾಧಿ ಸೇರಿದಂತೆ ಮೈಸೂರಿನ ರಾಜೀವ್ ನಗರದ ನಿವಾಸಿಗಳಾದ ಸೈಯ್ಯದ್ ಸಕ್ಲೇನ್ (21), ಅಕ್ಬರ್ ಶರೀಫ್‌ (18) ಬಂಧಿತರಾಗಿದ್ದು, ಆರೋಪಿಗಳಿಂದ 20,500 ರೂ ಹಣ ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ಆರೋಪಿ ಮೈಸೂರಿನ ಶಾಂತಿನಗರದ ನುಹೀದ್ ಖಾನ್ ತಲೆಮರೆಸಿಕೊಂಡಿದ್ದು ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಡಿಸೆಂಬರ್ 12 ರಂದು ಬೆಳಗ್ಗೆ 5 ಗಂಟೆಗೆ ವಿರಾಜಪೇಟೆ ತಾಲೂಕಿನ ಕುಟ್ಟಾ-ಮಾನಂದವಾಡಿ ರಸ್ತೆಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್‌ನಲ್ಲಿ ಸಂಚು ರೂಪಿಸಿ ಬಂಕ್‌ನಲ್ಲಿದ್ದ 24,200 ರೂ ಹಣವನ್ನು ದೋಚಿ ಪರಾರಿಯಾಗಿದ್ದರು.

ಈ ಕುರಿತು ಪೆಟ್ರೋಲ್ ಬಂಕ್ ಮಾಲೀಕ ಚಂದನ್ ಕಾಮತ್ ಕುಟ್ಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ. ಪನ್ನೇಕರ್ ಮಾರ್ಗದರ್ಶನದಲ್ಲಿ ಕುಟ್ಟ ಸರ್ಕಲ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ನೇತೃತ್ವದ ತಂಡ ರಚಿಸಿದ್ದರು.

Last Updated : Dec 28, 2019, 7:25 AM IST

ABOUT THE AUTHOR

...view details