ಹೈದರಾಬಾದ್: ಪದವಿ ವಿದ್ಯಾರ್ಥಿನಿಯ ಪಾಲಿಗೆ ಆಕೆಯ ಸ್ನೇಹಿತರ ವಿಲನ್ ಆಗಿದ್ದಾರೆ. ಬರ್ತಡೇ ಪಾರ್ಟಿಗೆಂದು ಯುವತಿಯನ್ನು ಕರೆದೊಯ್ದು ಆಕೆಗೆ ಡ್ರಗ್ ನೀಡಿದ ಕಿರಾತಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್ನ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ನಡೆದಿದೆ.
ವಿದ್ಯಾರ್ಥಿನಿಗೆ ಡ್ರಗ್ ಕೊಟ್ಟು ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ! - ಹೈದರಾಬಾದ್ನ ಜ್ಯುಬಿಲಿ ಹಿಲ್ಸ್
ಬರ್ತಡೇ ಪಾರ್ಟಿ ಎಂದು ಯುವತಿಯನ್ನು ಲಾಡ್ಜ್ಗೆ ಕರೆದೊಯ್ದ ಆಕೆಯ ಗೆಳೆಯರೇ ಕೇಕ್ನಲ್ಲಿ ಡ್ರಗ್ ಬೆರೆಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ತೆಲಂಗಾಣದಲ್ಲಿ ಈ ಹೇಯ ಕೃತ್ಯ ಬೆಳಕಿಗೆ ಬಂದಿದೆ.
ಅಕ್ಟೋಬರ್ 5 ರಂದು ಯುವತಿ ಕಾಲೇಜು ಶುಲ್ಕ ಪಾವತಿಸಲೆಂದು ಕಾಲೇಜಿಗೆ ತೆರಳಿದ್ದಳು. ಶುಲ್ಕ ಪಾವತಿಸಿ ಹಿಂದಿರುಗುವ ವೇಳೆ, ಆಕೆಯ ಸ್ನೇಹಿತರು ಹಾಗೂ ನೆರೆಹೊರೆಯವರೂ ಆಗಿರುವ ಜೋಸೆಫ್, ನವೀನ್ ರೆಡ್ಡಿ ಮತ್ತು ರಾಮು ಬರ್ತಡೇ ಪಾರ್ಟಿ ಇದೆ ಎಂದು ಆಕೆಯನ್ನ ಲಾಡ್ಜ್ಗೆ ಕರೆದೊಯ್ದಿದ್ದಾರೆ. ಕೇಕ್ನಲ್ಲಿ ಡ್ರಗ್ಸ್ ಬೆರೆಸಿ ಕೊಟ್ಟು ಈ ದುಷ್ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಈ ಬಗ್ಗೆ ಹೊರಗಡೆ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಕೂಡ ಬೆದರಿಕೆ ಹಾಕಿದ್ದಾರೆ. ಆದರೆ ಎರಡು ದಿನಗಳ ಬಳಿಕ ಆಕೆಗೆ ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆಯ ಪೋಷಕರು ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.