ಸುಳ್ಯ:ಕಾಡಿಗೆ ಶಿಕಾರಿಗೆಂದು ತೆರಳಿದ್ದ ನಾಲ್ವರ ತಂಡದಲ್ಲಿ, ಓರ್ವನಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಅರಂತೋಡು ಸಮೀಪ ನಡೆದಿದೆ.
ಓದಿ: ಆ್ಯಂಬುಲೆನ್ಸ್ ಟೆಂಡರ್ ರದ್ದು : ಆರೋಗ್ಯ ಸಚಿವರನ್ನು ಪ್ರತಿವಾದಿಯಾಗಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್

ಅರಂತೋಡು ನಿವಾಸಿ ಸತ್ಯಮೂರ್ತಿ ಎಂಬುವರು ಗೆಳೆಯನ ಗುಂಡಿಗೆ ಗಾಯಗೊಂಡ ವ್ಯಕ್ತಿ. ಸದ್ಯ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರಂತೋಡಿನ ಪೂಮಲೆ ಅರಣ್ಯಕ್ಕೆ ಸ್ಥಳೀಯ ನಾಲ್ವರ ತಂಡವು ಶಿಕಾರಿಗೆಂದು ತೆರಳಿತ್ತು. ನಾಲ್ವರು ಕೋವಿ ಹಿಡಿದುಕೊಂಡು ಕಾಡಿಗೆ ತೆರಳಿದ್ದು, ನಾಲ್ಕು ಜನರೂ ನಾಲ್ಕು ಕಡೆಗಳಲ್ಲಿ ಬೇಟೆಗೆಂದು ಮರಗಳ ಮರೆಯಲ್ಲಿ ಕಾದು ಕೂತಿದ್ದರು ಎನ್ನಲಾಗಿದೆ.
ಸತ್ಯಮೂರ್ತಿ ಬೇಟೆಯಾಡಲು ಅಡಗಿ ಕುಳಿತಿದ್ದ ಜಾಗದ ಬಳಿ ಶಬ್ದ ಕೇಳಿ ಬಂದಾಗ ಒಬ್ಬ ಜತೆಗಾರ ಪ್ರಾಣಿಯ ಚಲನವಲನದ ಶಬ್ದವಾಗಿರಬಹುದು ಎಂದು ಭಾವಿಸಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಅದು ತಾಗಿ ಸತ್ಯಮೂರ್ತಿ ಎಂಬಾತ ಗಂಭೀರ ಗಾಯಗೊಂಡಿದ್ದು, ಆತನನ್ನು ಜತೆಗಾರರು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.