ಬೆಂಗಳೂರು: ಮಹಿಳೆಯ ಜತೆ ಏಕಾಂತದಲ್ಲಿ ಕಾಲ ಕಳೆಯಲು ಯೋಚಿಸಿ ಡೇಟಿಂಗ್ ಆ್ಯಪ್ ಮೊರೆ ಹೋಗಿದ್ದ ಯುವಕ, ಯುವತಿಯ ಮೋಸದ ಬಲೆಗೆ ಬಿದ್ದು ಪರಡಾಡಿರುವ ಘಟನೆ ನಗರದಲ್ಲಿ ನಡೆದಿದೆ.
ವೈಟ್ ಫೀಲ್ಡ್ ವಿಭಾಗದ ದೊಡ್ಡನೆಕ್ಕುಂದಿ 26 ವರ್ಷದ ಯುವಕ, ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಮಹಿಳೆಯ ಜೊತೆ ಕಾಲ ಕಳೆಯಲು 'ಓಕೆ ಕೂಪಿಡ್' (OK Cupid) ಎಂಬ ಡೇಟಿಂಗ್ ಆ್ಯಪ್ನಲ್ಲಿ ಯುವತಿಗಾಗಿ ಹುಡುಕಾಡಿದ್ದಾನೆ. ಈ ವೇಳೆ ಆ್ಯಪ್ ಮೂಲಕ ಮಹಿಳೆಯೊಬ್ಬರು ಸಂಪರ್ಕವಾಗಿ ನಂತರ ಇಬ್ಬರು ಪರಸ್ಪರ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು.
2-3 ದಿನಗಳವರೆಗೆ ವ್ಯಾಟ್ಸ್ಆ್ಯಪ್ನಲ್ಲಿ ಚ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ ಯುವಕ ತನ್ನ ಭಾವನೆಯನ್ನು ಮಹಿಳೆಯ ಮುಂದೆ ಹೇಳಿಕೊಂಡಿದ್ದ. ಬಳಿಕ ಆಕೆಯ ಜತೆ ವ್ಯಾಟ್ಸ್ಆ್ಯಪ್ನಲ್ಲಿ ನಗ್ನವಾಗಿ ವಿಡಿಯೋ ಸಂಭಾಷಣೆ ನಡೆಸಿದ್ದ. ಇದೇ ವೇಳೆ ಆಕೆ, ಯುವಕನ ಅರಿವಿಗೆ ಬಾರದಂತೆ ಎಲ್ಲವನ್ನೂ ಸಂಗ್ರಹಿಸಿದ್ದಳು.