ತಿರುವನಂತಪುರಂ (ಕೇರಳ):ಇಲ್ಲಿನ ಶ್ರೀಕಾರ್ಯಂ ಇಡವಕ್ಕೊಣಂನಲ್ಲಿರುವ ಖಾಸಗಿ ಶಾಲೆಯೊಂದರ ಬಸ್ ಚಾಲಕನನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ನೊಂದ ಚಾಲಕ ಶಾಲೆಯ ಆವರಣದ ಬಳಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಟ್ಟಪ್ಪಾರಾ ನಿವಾಸಿ ಶ್ರೀಕುಮಾರ್ ಮೃತ ವ್ಯಕ್ತಿ. ಲಾಕ್ಡೌನ್ ವೇಳೆಯಲ್ಲಿ 86 ಮಂದಿ ಸಿಬ್ಬಂದಿಯನ್ನು ಶಾಲಾ ಆಡಳಿತ ಮಂಡಳಿ ವಜಾ ಮಾಡಿತ್ತು. ಇಂದು ಬೆಳಗ್ಗೆ ಸಹ ಶಾಲೆಗೆ ಹೋದ ಆತನಿಗೆ ಕೆಲಸಕ್ಕೆ ಬರುವುದು ಬೇಡವೆಂದು ಶಾಲಾ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆತ ಶಾಲೆಯ ಬಳಿ ನಿಲ್ಲಿಸಿದ್ದ ಆಟೋರಿಕ್ಷಾ ಮೇಲೆ ಪೆಟ್ರೋಲ್ ಸುರಿದು, ಆಟೋ ಒಳಗೆ ಕುಳಿತು ಬೆಂಕಿ ಹಚ್ಚಿಕೊಂಡಿದ್ದಾನೆ.