ಹೈದರಾಬಾದ್:ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಟಿಡಿಪಿ ಸಂಸದನ ಸೋದರಳಿಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಪಿಯು ಗಣಿತದಲ್ಲಿ ಫೇಲ್, ಆತ್ಮಹತ್ಯೆಗೆ ಶರಣಾದ ಸಂಸದನ ಸೋದರಳಿಯ - ಸೋದರಳಿಯ ಆತ್ಮಹತ್ಯೆ
ಸಂಸತ್ ಸದಸ್ಯರೊಬ್ಬರ ಸೋದರಳಿಯ ಪರೀಕ್ಷೆಯಲ್ಲಿ ಫೇಲ್ ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ರಾಜ್ಯಸಭಾ ಸದಸ್ಯ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಸಿಎಂ ರಮೇಶ್ ಸೋದರಳಿಯ ಧರ್ಮರಾಮ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಇಲ್ಲಿನ ಅಮೀರ್ಪೇಟ್ನ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದು, ಗಣಿತ ವಿಷಯದಲ್ಲಿ ಫೇಲ್ ಆಗಿದ್ದರು. ಈ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ತನ್ನ ಸೋದರತ್ತೆಗೆ ಮೊಬೈಲ್‌ನಿಂದ ಮೆಸೇಜ್ ಕಳುಹಿಸಿರುವ ಧರ್ಮರಾಜ್ ಬಳಿಕ, ಮನೆಯಿರುವ ಕಟ್ಟಡದ ಆರನೇ ಅಂತಸ್ತಿನ ಮೇಲಿಂದ ಜಿಗಿದಿದ್ದಾರೆ. ಈ ಸಂದರ್ಭ ಜೋರಾಗಿ ಶಬ್ಧ ಕೇಳಿಬಂದ ಹಿನ್ನೆೆಲೆಯಲ್ಲಿ ಧರ್ಮರಾಜ್ ಸಹೋದರಿ ಕೆಳಗೆ ಬಂದು ನೋಡಿದ್ದಾರೆ. ಆಗ ತನ್ನ ಸಹೋದರ ರಕ್ತದ ಮಡುವಿನಲ್ಲಿರುವುದು ಕಂಡುಬಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಯಿತಾದರೂ ಪ್ರಯೋಜನವಾಗದೆ, ಅವರು ಕೊನೆಯುಸಿರೆಳೆದಿದ್ದಾರೆ.