ಕರ್ನಾಟಕ

karnataka

ETV Bharat / jagte-raho

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಹನ್ನೊಂದು ತಿಂಗಳ ಮಗು..! - ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವು

ಅನಾರೋಗ್ಯದಿಂದ ಆಸ್ಪತ್ರೆಗೆ ಕರೆದುತಂದ ಮಗುವಿಗೆ ಸಮರ್ಪಕ ರೀತಿಯಲ್ಲಿ ಚಿಕಿತ್ಸೆ ನೀಡದ ವೈದ್ಯರು, ದೂರವಾಣಿ ಮೂಲಕ ತನ್ನ ಆಸ್ಪತ್ರೆಯ ಸಿಬ್ಬಂದಿಗೆ ಚುಚ್ಚುಮದ್ದು ನೀಡಲು ಸೂಚಿಸಿ ಪ್ರಾಣ ತೆಗೆದಿದ್ದಾರೆ ಎನ್ನುವುದು ಸದ್ಯ ಮೃತ ಮಗುವಿನ ಪೋಷಕರ ಗಂಭೀರ ಆರೋಪ.

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಹನ್ನೊಂದು ತಿಂಗಳ ಮಗು

By

Published : Sep 19, 2019, 2:11 AM IST

ಹಾಸನ:ವೈದ್ಯರ ನಿರ್ಲಕ್ಷ್ಯದಿಂದ 11 ತಿಂಗಳ ಮಗುವೊಂದು ಸಾವಿಗೀಡಾದ ಘಟನೆ ಹಾಸನ ನಗರದ ಜಯಶೀಲ ಆಸ್ಪತ್ರೆಯಲ್ಲಿ ನಡೆದಿದೆ.

ಅನಾರೋಗ್ಯದಿಂದ ಆಸ್ಪತ್ರೆಗೆ ಕರೆದುತಂದ ಮಗುವಿಗೆ ಸಮರ್ಪಕ ರೀತಿಯಲ್ಲಿ ಚಿಕಿತ್ಸೆ ನೀಡದ ವೈದ್ಯರು, ದೂರವಾಣಿ ಮೂಲಕ ತನ್ನ ಆಸ್ಪತ್ರೆಯ ಸಿಬ್ಬಂದಿಗೆ ಚುಚ್ಚುಮದ್ದು ನೀಡಲು ಸೂಚಿಸಿ ಪ್ರಾಣ ತೆಗೆದಿದ್ದಾರೆ ಎನ್ನುವುದು ಸದ್ಯ ಮೃತ ಮಗುವಿನ ಪೋಷಕರ ಗಂಭೀರ ಆರೋಪ.

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಹನ್ನೊಂದು ತಿಂಗಳ ಮಗು

ತನುಷ್ ಹೆಸರಿನ ಹನ್ನೊಂದು ತಿಂಗಳ ಮಗು ವೈದ್ಯರ ನಿರ್ಲಕ್ಷ್ಯಕ್ಕೆ ಒಳಗಾಗಿ ಸಾವಿಗೀಡಾಗಿರುವ ಪುಟ್ಟ ಕಂದಮ್ಮ. ಹಾಸನ ತಾಲೂಕಿನ ಸಾಣೇಹಳ್ಳಿಯ ಚಂದ್ರಶೇಖರ್ ಮತ್ತು ಪವಿತ್ರಾ ದಂಪತಿಯ ಪುತ್ರ ತನುಷ್ ಅನಾರೋಗ್ಯದಿಂದ ಬಳಲುತ್ತಿದ್ದು, ಬುಧವಾರ ಮಧ್ಯಾಹ್ನ ಚಿಕಿತ್ಸೆಗಾಗಿ ನಗರದ ಪೆನ್ಶನ್ ಮೊಹಲ್ಲಾ ಬಡಾವಣೆಯಲ್ಲಿರುವ ಜಯಶೀಲ ಆಸ್ಪತ್ರೆಗೆ ದಾಖಲು ಮಾಡಿದ್ದರು.

ದೂರವಾಣಿಯ ಮುಖಾಂತರ ಪೋಷಕರು ಮಗುವಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಬೇಕೆಂದು ಮನವಿ ಮಾಡಿದಾಗ, ದೂರವಾಣಿಯ ಮುಖಾಂತರವೇ ತನ್ನ ಆಸ್ಪತ್ರೆಯ ದಾದಿಗೆ ಚುಚ್ಚುಮದ್ದು ನೀಡುವಂತೆ ವೈದ್ಯರು ಹೇಳಿದ್ದಾರೆ.

ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿದ್ದ ರೂಪ ಮಗುವಿಗೆ ಚುಚ್ಚುಮದ್ದು ನೀಡಿದ್ದು, ಚಿಕಿತ್ಸೆಗೆ ಸ್ಪಂದಿಸದ ಮಗು ಮತ್ತಷ್ಟು ಆನಾರೋಗ್ಯದಿಂದ ಚಡಪಡಿಸುತ್ತಿದ್ದ ಹಿನ್ನಲೆ ತಕ್ಷಣ ಅವರನ್ನು ಮತ್ತೊಂದು ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪುಟ್ಟ ಕಂದಮ್ಮನ ಪ್ರಾಣಪಕ್ಷಿ ಹಾರಿಹೋಗಿತ್ತು.

ಹನ್ನೊಂದು ತಿಂಗಳ ಮಗು ತನುಷ್

ವಿಷಯ ತಿಳಿದ ಪೋಷಕರು ತಕ್ಷಣ ಆಸ್ಪತ್ರೆ ವೈದ್ಯರಿಗೆ ವಿಚಾರವನ್ನು ತಿಳಿಸಿದರೆ ವೈದ್ಯರು ಪೋಷಕರಿಗೆ ಧಮ್ಕಿ ಹಾಕಿದ್ರು ಅನ್ನೋ ಕಾರಣಕ್ಕೆ ಪೋಷಕರು ವೈದ್ಯರಿಗೆ ತರಾಟೆಗೆ ತೆಗೆದುಕೊಂಡಿದ್ದು, ಆಸ್ಪತ್ರೆಯ ನರ್ಸ್ ರೂಪಗೆ ಹಲ್ಲೆ ಮಾಡಿದ್ದಷ್ಟೆಯಲ್ಲದೇ ಆಸ್ಪತ್ರೆಯ ಕೆಲವು ವಸ್ತುಗಳನ್ನು ಪುಡಿ ಪುಡಿ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸೋ ಮೂಲಕ ತಹಬದಿಗೆ ತಂದಿದ್ದಾರೆ. ಹನ್ನೊಂದು ತಿಂಗಳಿಂದ ಅಂಬೆಗಾಲಿಡುತ್ತಾ ಮುದ್ದುಮುದ್ದಾಗಿ ಮನೆಯಂಗಳದಲ್ಲಿ ಓಡಾಡಿಕೊಂಡು ಮನೆಮಂದಿಗೆಲ್ಲಾ ಖುಷಿ ನೀಡಿದ್ದ ಆ ಪುಟ್ಟ ಕಂದಮ್ಮ ಆ ಕುಟುಂಬಕ್ಕೆ ಇನ್ನು ನೆನಪು ಮಾತ್ರ. ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿ ಸಲಹಿ, ಇದ್ದ ಒಬ್ಬ ಮಗುವನ್ನು ಕಳೆದುಕೊಂಡ ಆ ಕರುಳಿನ ಸಂಕಟ ಹೇಳತೀರದಾಗಿದೆ.

ABOUT THE AUTHOR

...view details