ಕರ್ನಾಟಕ

karnataka

ETV Bharat / jagte-raho

ಯುವಕನ ಬರ್ತ್​ಡೇ ಆಚರಣೆಯಲ್ಲಿ ಯಡವಟ್ಟು, ಜೈಲಿಗೆ ಸೇರಲು ಕಾರಣವಾಯ್ತು ಟಿಕ್​ಟಾಕ್​..! - ಟಿಕ್​ಟಾಕ್ ವಿಡಿಯೋ

ಫೈಜಾನ್ ಹೆಸರಿನ ದೆಹಲಿ ಮೂಲದ ಯುವಕ ತನ್ನ ಹುಟ್ಟುಹಬ್ಬವನ್ನು ಅವಿಸ್ಮರಣೀಯವಾಗಿ ಆಚರಿಸಿಕೊಳ್ಳುವ ಇರಾದೆ ಹೊಂದಿದ್ದ. ಈ ನಿಟ್ಟಿನಲ್ಲಿ ಆತ ನಾಡ ಬಂದೂಕಿನಿಂದ ಗುಂಡು ಹಾರಿಸಿ ಅದನ್ನು ಚಿತ್ರೀಕರಿಸಿದ್ದ.

ಟಿಕ್​ಟಾಕ್

By

Published : Aug 13, 2019, 8:47 AM IST

ನವದೆಹಲಿ: ಸದ್ಯದ ವಿದ್ಯಮಾನದಲ್ಲಿ ಯುವ ಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಟಿಕ್​ಟಾಕ್​​ ಹಲವಾರು ಸಾವು - ನೋವಿಗೂ ಕಾರಣವಾಗಿದೆ. ಇದೇ ಆ್ಯಪ್ ಇದೀಗ ಓರ್ವನನ್ನು ಜೈಲುಪಾಲಾಗುವಂತೆ ಮಾಡಿದೆ.

ಫೈಜಾನ್ ಹೆಸರಿನ ದೆಹಲಿ ಮೂಲಕ ಯುವಕ ತನ್ನ ಹುಟ್ಟುಹಬ್ಬವನ್ನು ಅವಿಸ್ಮರಣೀಯವಾಗಿ ಆಚರಿಸಿಕೊಳ್ಳುವ ಇರಾದೆ ಹೊಂದಿದ್ದ. ಈ ನಿಟ್ಟಿನಲ್ಲಿ ಆತ ನಾಡಬಂದೂಕಿನಿಂದ ಗುಂಡು ಹಾರಿಸಿ ಅದನ್ನು ಚಿತ್ರೀಕರಿಸಿದ್ದ.

ಈ ವಿಡಿಯೋವನ್ನುಫೈಜಾನ್ ಟಿಕ್​ಟಾಕ್​ನಲ್ಲಿ ಅಪ್​ಲೋಡ್ ಮಾಡಿದ್ದ. ಈ ವಿಡಿಯೋ ಫೇಸ್​ಬುಕ್​, ವಾಟ್ಸ್​​ಆ್ಯಪ್​ಗಳಲ್ಲಿ ಹರಿದಾಡಿತ್ತು. ಇದು ದೆಹಲಿ ಪೊಲೀಸರಿಗೂ ತಲುಪಿತ್ತು. ದೆಹಲಿ ಸೈಬರ್​ ಪೊಲೀಸರು ಆತನಿರುವ ಸ್ಥಳವನ್ನು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ.

ತನಿಖೆಯ ವೇಳೆ ಫೈಜಾನ್ ತಪ್ಪೊಪ್ಪಿಕೊಂಡಿದ್ದು, ಆತನಿಂದ ಮೊಬೈಲ್​ ಫೋನ್ ಹಾಗೂ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details