ಬಳ್ಳಾರಿ: ಮನೆ ಗೋಡೆ, ಮೇಲ್ಛಾವಣಿ ಕುಸಿದು ದಂಪತಿ ಮೃತಪಟ್ಟಿರುವ ಘಟನೆ ನಗರದ ಕೌಲ್ ಬಜಾರ ವ್ಯಾಪ್ತಿಯ ಕಡಪ ಬೀದಿಯಲ್ಲಿ ನಡೆದಿದೆ.
ಬಳ್ಳಾರಿಯಲ್ಲಿ ಮನೆ ಮೇಲ್ಛಾವಣಿ ಕುಸಿದು ದಂಪತಿ ಸಾವು: ಮಗ ಪ್ರಾಣಾಯದಿಂದ ಪಾರು - ಮನೆ ಗೋಡೆ ಕುಸಿದು ದಂಪತಿ ಸಾವು

11:33 December 01
ಬಳ್ಳಾರಿಯಲ್ಲಿಂದು ಬೆಳ್ಳಂಬೆಳಗ್ಗೆ ದುರಂತವೊಂದು ಸಂಭವಿಸಿದೆ. ಮನೆಯ ಗೋಡೆ ಮತ್ತು ಮೇಲ್ಛಾವಣಿ ಕುಸಿದು ದಂಪತಿ ಸಾವನ್ನಪ್ಪಿದ್ದಾರೆ.
ಅದೃಷ್ಟವಶಾತ್ ಅವಘಡದಲ್ಲಿ ದಂಪತಿ 12 ವರ್ಷದ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೊಲ್ಲಣ್ಣ (45), ಸಾವಿತ್ರಮ್ಮ (40) ಮೃತ ದಂಪತಿ.
ಆಟೋ ಚಾಲಕನಾಗಿದ್ದ ಕೊಲ್ಲಣ್ಣ ತನ್ನ ಕುಟುಂಬದೊಂದಿಗೆ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಸುರಿದ ಮಳೆಗೆ ಮನೆಯ ಗೋಡೆ ಶಿಥಿಲಗೊಂಡಿತ್ತು. ಹೀಗಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗ್ತಿದೆ.
ಘಟನೆ ಬಗ್ಗೆ ಮೃತ ದಂಪತಿಯ ಮಗ ಸಂತೋಷ ಕುಮಾರ್ ಮಾತನಾಡಿ, ಜೋರಾಗಿ ಗಾಳಿ ಬೀಸಿದ ಪರಿಣಾಮ ಮನೆ ಗೋಡಿ ಕುಸಿದು ಬಿದ್ದು ಈ ಅನಾಹುತ ಜರುಗಿರುವುದಾಗಿ ತಿಳಿಸಿದ್ದಾನೆ.
ಮೃತ ದಂಪತಿಯ ಸಂಬಂಧಿಕ ಮಂಜುನಾಥ್ ಮಾತನಾಡಿ, ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಬಿದ್ದ ಪರಿಣಾಮ, ಮಣ್ಣಿನ ಮನೆ ಕುಸಿದಿದೆ. ಘಟನೆಯಲ್ಲಿ ತನ್ನ ಪೋಷಕರನ್ನು ಕಳೆದುಕೊಂಡಿರುವ ಹುಡುಗನಿಗೆ ಸರ್ಕಾರ ಅಥವಾ ಜನಪ್ರತಿನಿಧಿಗಳು ವಸತಿ ಹಾಗೂ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.