ಸಂಗಾರೆಡ್ಡಿ(ತೆಲಂಗಾಣ): ಈ ಘಟನೆ ನಡೆದಿದ್ದು ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯಲ್ಲಿ. ಮೂರು ತಿಂಗಳ ಹಿಂದೆ 16 ವರ್ಷದ ಬಾಲಕಿಗೆ ಬಲವಂತವಾಗಿ ಪೋಷಕರು ವಿವಾಹಿತನ ಜೊತೆ ನಿಶ್ಚಿತಾರ್ಥ ಮಾಡಿ ಮದುವೆಗೆ ಮುಂದಾಗಿದ್ದರು. ಬಾಲಕಿಗೆ ಓದುವ ಆಸೆಯಿತ್ತು. ಹೀಗಾಗಿ ಬೇರೆಯವರ ಸಹಾಯ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು. ಅಧಿಕಾರಿಗಳು ಬಾಲಕಿಯ ತಂದೆ - ತಾಯಿಗೆ ಕೌನ್ಸೆಲಿಂಗ್ ಮಾಡಿ ಹೋದರೂ ಪ್ರಯೋಜನವಾಗಲಿಲ್ಲ. ತಂದೆ - ತಾಯಿಯಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ.
ಮದುವೆಗೂ ಮುನ್ನ ವಿವಾಹಿತನ ಜೊತೆ ಸಂಸಾರ... ತಂದೆ, ತಾಯಿ ಯಡವಟ್ಟಿಗೆ ತಾಯಿಯಾದ ಬಾಲಕಿ! - ಬಾಲಕಿ
ನನ್ನನ್ನು ಓದಲು ಬಿಡಿ. ನನಗೆ ಮದುವೆ ಬೇಡ ಎಂದು ಆ ಬಾಲಕಿ ವೇದನೆ ಯಾರೂ ಕೇಳಲಿಲ್ಲ. 10ನೇ ತರಗತಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿನಿಯನ್ನು ಇಂಟರ್ ಮೇಡಿಯಟ್ಗೆ ಸೇರಿಸಬೇಕಾದ ತಂದೆಯೇ ಮೂರ್ಖತನ ಪ್ರದರ್ಶಿಸಿದರೆ, ಮದುವೆ ಮಾಡಬಾರದ ವಯಸ್ಸಿನಲ್ಲಿ ಬಲವಂತವಾಗಿ ನಿಶ್ಚಿತಾರ್ಥ ಮಾಡಿದ ತಾಯಿಯ ನಿರ್ಲಕ್ಷ್ಯ.. ಅಧಿಕಾರಿಗಳ ಆಲಸ್ಯ ಆ ಬಾಲಕಿಯನ್ನು ತಾಯಿಯನ್ನಾಗಿ ಮಾಡಿದೆ.
ಇನ್ನು ಅನುಮಾನ ಬಂದ ಪೊಲೀಸ್ ಅಧಿಕಾರಿಗಳು ತಂದೆ - ತಾಯಿಗೆ ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ನಡೆಸಿದ ಬಳಿಕ ಬೆಚ್ಚಿ ಬೀಳುವ ಸತ್ಯ ಹೊರ ಬಂದಿತ್ತು. ಬಾಲಕಿಯ ತಂದೆ - ತಾಯಿಗಳು ವಿವಾಹಿತ ಜೊತೆ ಮದುವೆಗೂ ಮುನ್ನವೇ ಬಲವಂತವಾಗಿ ಸಂಸಾರ ನಡೆಸಲು ಬಾಲಕಿಯನ್ನು ಬಿಟ್ಟಿದ್ದಾರೆ. ಕೆಲಕಾಲ ನರಕಯಾತನೆ ಅನುಭವಿಸಿದ ಬಾಲಕಿ ಗರ್ಭವತಿಯಾಗಿದ್ದು, ಮನೆ ಬಿಟ್ಟು ಸಂಬಂಧಿಕರ ಮನೆಗೆ ಓಡಿ ಹೋಗಿದ್ದಾಳೆ. ಬಾಲಕಿ ಮತ್ತೆ ಅಧಿಕಾರಿಗಳನ್ನ ಸಂಪರ್ಕಿಸಿ ಆಶ್ರಯ ಪಡೆದಿದ್ದಾಳೆ. ಬಾಲಕಿ ನರಕಯಾತನೆ ಹಾಗೂ ದಯನೀಯ ಪರಿಸ್ಥಿತಿ ಅರಿತ ಅಧಿಕಾರಿಗಳು ಬಾಲಕಿಯ ನೆರವಿಗೆ ದೌಡಾಯಿಸಿದರು. ಉನ್ನತ ಅಧಿಕಾರಿಗಳ ಅನುಮತಿ ಪಡೆದ ಅಧಿಕಾರಿಗಳು ಬಾಲಕಿಗೆ ಗರ್ಭಪಾತ ಮಾಡಿಸಿ ’ಬಾಲ ಸದನ’ದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ನಾಲ್ವರ ಮೇಲೆ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.