ನವದೆಹಲಿ: ಪಂಜಾಬ್‌ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಇಬ್ಬರು ಉಗ್ರರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದ್ದಾರೆ.
ಭಾರತದ ಗಡಿಯೊಳಗೆ ನುಗ್ಗಿದ ಇಬ್ಬರು ಉಗ್ರರನ್ನು ಬೇಟೆಯಾಡಿದ ಯೋಧರು - India-Pakistan International Border in Punjab
BSF gunned down two terrorists along the India-Pakistan International Border in Punjab on Thursday. More details will be known once the troops conduct a search operation.
08:56 December 17
ಪಂಜಾಬ್‌ನ ಅಟ್ಟಾರಿ ಗಡಿಯಲ್ಲಿ ಅತಿಕ್ರಮ ಪ್ರವೇಶ ಮಾಡುತ್ತಿದ್ದ ಇಬ್ಬರು ಉಗ್ರರನ್ನು ಬಿಎಸ್‌ಎಫ್ ಸಿಬ್ಬಂದಿ ಹೊಡೆದುರುಳಿಸಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇಂದು ನಸುಕಿನ ಜಾವ 2.30ರ ವೇಳೆಗೆ ಪಂಜಾಬ್‌ನ ಅಟ್ಟಾರಿ ಗಡಿಯಲ್ಲಿ ಶಸ್ತ್ರಸಜ್ಜಿತ ಉಗ್ರರು ಅತಿಕ್ರಮ ಪ್ರವೇಶ ಮಾಡುತ್ತಿರುವುದನ್ನು ಬಿಎಸ್‌ಎಫ್ ಸಿಬ್ಬಂದಿ ಗಮನಿಸಿದ್ದು, ಗುಂಡಿಕ್ಕಿ ಇಬ್ಬರನ್ನು ಬೇಟೆಯಾಡಿದ್ದಾರೆ. ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಉಗ್ರ ಸಂಘಟನೆ ಸಂಪರ್ಕಗಳ ಬಗ್ಗೆ ತನಿಖೆ ಮುಂದುವರೆದಿದೆ: ವಿಕಾಸ್ ಕುಮಾರ್
ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಆದರೆ ಅಟ್ಟಾರಿ ಗಡಿ ಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಮೂಲಗಳು ತಿಳಿಸಿವೆ.