ಕರ್ನಾಟಕ

karnataka

ETV Bharat / jagte-raho

ನಟ ಸೋನು ಸೂದ್​ ವಿರುದ್ಧ ದೂರು ದಾಖಲಿಸಿದ ಬಿಎಂಸಿ - police complaint against actor Sonu Sood

ನಟ ಸೋನು ಸೂದ್​ ವಿರುದ್ಧ ಬೃಹನ್ ​ಮುಂಬೈ ಮಹಾನಗರ ಪಾಲಿಕೆ ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

Sonu Sood
ನಟ ಸೋನು ಸೂದ್​ ವಿರುದ್ಧ ದೂರು ದಾಖಲಿಸಿದ ಬಿಎಂಸಿ

By

Published : Jan 7, 2021, 11:36 AM IST

ಮುಂಬೈ:ಅನುಮತಿಯಿಲ್ಲದೇ ಬಹುಮಹಡಿ ಕಟ್ಟಡವನ್ನು ಹೋಟೆಲ್​​ ಆಗಿ ಪರಿವರ್ತಿಸಿದ ಆರೋಪದಡಿ ನಟ ಸೋನು ಸೂದ್​ ವಿರುದ್ಧ ಬೃಹನ್​ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಪೊಲೀಸರಿಗೆ ದೂರು ನೀಡಿದೆ.

ಮುಂಬೈನ ಜುಹು ಪ್ರದೇಶದಲ್ಲಿರುವ ಶಕ್ತಿ ನಗರ್​​ ಎಂಬ ಆರು ಅಂತಸ್ತಿನ ಕಟ್ಟಡವನ್ನು ಪಾಲಿಕೆಯ ಅನುಮತಿ ಪಡೆಯದೇ ಸೋನು ಸೂದ್ ಹೋಟೆಲ್​​ ಆಗಿ ಪರಿವರ್ತಿಸಿದ್ದಾರೆ. ಇದರ ವಿರುದ್ಧ ಮಹಾರಾಷ್ಟ್ರ ಪ್ರದೇಶ ಮತ್ತು ಪಟ್ಟಣ ಯೋಜನೆ (ಎಂಆರ್‌ಟಿಪಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಜುಹು ಪೊಲೀಸರಿಗೆ ಬಿಎಂಸಿ ಆಗ್ರಹಿಸಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮಾಜಿ ಬ್ಲಾಕ್ ಅಧ್ಯಕ್ಷನ ಗುಂಡಿಕ್ಕಿ ಹತ್ಯೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನು, ಇಲ್ಲಿ ಯಾವುದೇ ಅವ್ಯವಹಾರವಿಲ್ಲ. ನಾನು ಬಿಎಂಸಿ ಅನುಮತಿ ಪಡೆದಿದ್ದು, ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (MCZMA) ಅನುಮತಿಗಾಗಿ ಕಾಯುತ್ತಿದ್ದೆ ಎಂದು ಹೇಳಿದ್ದಾರೆ.

ABOUT THE AUTHOR

...view details