ಚೆನ್ನೈ:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪತ್ನಿಯೊಬ್ಬಳು ತನ್ನ ಗಂಡನನ್ನು ಕೊಲೆ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ.
ಈ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು, ಹೆಂಡ್ತಿಯೇ ಗಂಡನನ್ನು ಕೊಲೆ ಮಾಡುತ್ತಿದ್ದಾಳೆ. ದುರಂತ ಎಂದರೆ ಮಕ್ಕಳು ಮತ್ತು ಕುಟುಂಬಸ್ಥರು ಮಲಗಿದ್ದು, ಮಹಿಳೆಯ ಗೆಳತಿ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಕೊಲೆ ಮಾಡುತ್ತಿರುವ ವಿಡಿಯೋ ವೈರಲ್ ಹೆಂಡ್ತಿ ಗಂಡನ ಎದೆ ಮೇಲೆ ಕುಳಿತು, ಕುತ್ತಿಗೆಗೆ ವೇಲ್ನಿಂದ ಸುತ್ತಿ, ಉಸಿರಾಡದಂತೆ ಬಿಗಿಯಾಗಿ ಹಿಡಿದು, ಗಂಡ ಸಾಯೋತನಕ ಬಿಡದೇ ಕೊಲೆ ಮಾಡುತ್ತಾಳೆ. ಈ ವಿಡಿಯೋ ತನ್ನ ಗೆಳತಿಯಿಂದ ಚಿತ್ರಿಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟಿಜೆನ್ಸ್ ಭಯ ಭೀತರಾಗಿದ್ದಾರೆ.
ಇನ್ನು ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿರುವವರು ಯಾರು, ಇವರು ಚೆನ್ನೈನವರಾ ಅಥವಾ ಬೇರೆ ಎಲ್ಲಿಂದಾದ್ರೂ ಈ ವಿಡಿಯೋ ವೈರಲ್ ಆಗುತ್ತಿದೆಯಾ, ಇದು ಇತ್ತೀಚೆಗೆ ನಡೆದ ಘಟನೆಯಾ ಅಥವಾ ಹಳೆಯ ಘಟನೆಯಾ, ಫೇಕ್ ವಿಡಿಯೋನಾ?, ಆತ ಸತ್ತಿದ್ದಾನೋ, ಬದಕಿದ್ದಾನೋ ಎಂಬ ವಿಷಯಗಳ ಸೇರಿದಂತೆ ಮತ್ತಷ್ಟು ಪೊಲೀಸರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.