ಕರ್ನಾಟಕ

karnataka

ಹೌತಿ ಬಂಡುಕೋರರು 'ಗ್ಯಾಲಕ್ಸಿ ಲೀಡರ್‌ಶಿಪ್' ಹಡಗು​​ ಹೈಜಾಕ್ ಮಾಡಿದ್ದು ಹೇಗೆ? ಭಯಾನಕ ವಿಡಿಯೋ

By PTI

Published : Nov 21, 2023, 9:08 AM IST

Updated : Nov 21, 2023, 12:25 PM IST

Houthi rebels release video of cargo ship hijack: ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಇಸ್ರೇಲ್‌ನ ಸರಕು ಸಾಗಣೆ ಹಡಗನ್ನು ಯೆಮೆನ್‌ನಿಂದ ಹೌತಿ ಬಂಡುಕೋರರು ಅಪಹರಿಸಿದ್ದರು. ಇದೀಗ ವಿಡಿಯೋ ರಿಲೀಸ್​ ಮಾಡಿದ್ದಾರೆ.

Red Sea cargo ship hijack  Yemen Houthi rebels release video  Israel and Gaza war  ಗ್ಯಾಲಾಕ್ಸಿ ಲೀಡರ್ ಶಿಪ್​​ ಹೈಜಾಕ್​ ಶಿಪ್​​ ಹೈಜಾಕ್​ ವಿಡಿಯೋ ರಿಲೀಸ್​ ಮಾಡಿದ ಹೌತಿ ಬಂಡುಕೋರರು  Ship hijacked video viral  ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಇಸ್ರೇಲ್‌  ಸರಕು ಸಾಗಣೆ ಹಡಗನ್ನು ಹೈಜಾಕ್​ ಯೆಮನ್‌ನ ಕರಾವಳಿ ಪ್ರದೇಶಕ್ಕೆ ಸ್ಥಳಾಂತರ  ಹೆಲಿಕಾಪ್ಟರ್‌ನಲ್ಲಿ ಬಂದ ಬಂದೂಕುಧಾರಿಗಳು
ಗ್ಯಾಲಾಕ್ಸಿ ಲೀಡರ್ ಶಿಪ್​​ ಹೈಜಾಕ್​ ವಿಡಿಯೋ ರಿಲೀಸ್​ ಮಾಡಿದ ಹೌತಿ ಬಂಡುಕೋರರು

ಟೆಲ್ ಅವೀವ್: ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ 'ಗ್ಯಾಲಕ್ಸಿ ಲೀಡರ್' ಹೆಸರಿನ ಸರಕು ಸಾಗಣೆ ಹಡಗನ್ನು ಎಮೆನ್‌ ದೇಶದ ಹೌತಿ ಬಂಡುಕೋರರು ಇತ್ತೀಚೆಗೆ ಅಪಹರಿಸಿದ್ದರು. ಇಸ್ರೇಲ್‌ಗೆ ಸೇರಿದ ಈ ಹಡಗನ್ನು ಕೆಂಪು ಸಮುದ್ರದಲ್ಲಿ ಹೈಜಾಕ್ ಮಾಡಿ ಯೆಮನ್‌ನ ಕರಾವಳಿ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸರಕು ಹಡಗನ್ನು ಹೇಗೆ ಅಪಹರಿಸಲಾಗಿತ್ತು ಎಂಬುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು.

ವಿಡಿಯೋದಲ್ಲೇನಿದೆ?: ಹೆಲಿಕಾಪ್ಟರ್‌ನಲ್ಲಿ ಬಂದ ಬಂದೂಕುಧಾರಿಗಳು ಹಡಗಿನ ಡೆಕ್‌ನಲ್ಲಿ ಇಳಿಯುತ್ತಾರೆ. ಘೋಷಣೆಗಳನ್ನು ಕೂಗುತ್ತಾ ಗಾಳಿಯಲ್ಲಿ ಗುಂಡು ಹಾರಿಸಿ, ತಕ್ಷಣ ಅಲ್ಲಿದ್ದವರನ್ನು ವಶಕ್ಕೆ ಪಡೆಯುತ್ತಾರೆ. ಈ ಮೂಲಕ ಹಡಗಿನ ಸಂಪೂರ್ಣ ನಿಯಂತ್ರಣವನ್ನು ತಮ್ಮ ವಶಕ್ಕೆ ಪಡೆದು ಹೈಜಾಕ್ ಮಾಡಿದರು.

ಹಮಾಸ್-ಇಸ್ರೇಲಿ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ಹಡಗುಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಹೌತಿ ಬಂಡುಕೋರರು ಘೋಷಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಹಡಗನ್ನು ಹೈಜಾಕ್​ ಮಾಡಲಾಗಿತ್ತು. ಹಡಗಿನಲ್ಲಿ ತನ್ನ ದೇಶದ ಯಾವುದೇ ನಾಗರಿಕರು ಇರಲಿಲ್ಲ ಎಂದು ಇಸ್ರೇಲ್ ತಿಳಿಸಿದೆ. ಗ್ಯಾಲಕ್ಸಿ ಲೀಡರ್ ಹಡಗು ಇಸ್ರೇಲಿ ವ್ಯಾಪಾರಿಗೆ ಸೇರಿದ್ದಾಗಿದೆ. ಆದರೆ ಪ್ರಸ್ತುತ ಅದನ್ನು ಜಪಾನ್ ದೇಶದ ಕಂಪನಿ ನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಡಗಿನಲ್ಲಿ ಬಲ್ಗೇರಿಯಾ, ಫಿಲಿಪ್ಪೀನ್ಸ್‌, ಮೆಕ್ಸಿಕೊ ಮತ್ತು ಉಕ್ರೇನ್‌ನ 25 ಸಿಬ್ಬಂದಿಗಳಿದ್ದರು.

ಬಹಾಮಾಸ್ ಧ್ವಜ ಹಡಗಿನಲ್ಲಿತ್ತು. ಬ್ರಿಟಿಷ್ ಕಂಪನಿಯಲ್ಲಿ ನೋಂದಾಯಿಸಲಾಗಿದೆ. ಭಾಗಶಃ ಇಸ್ರೇಲಿ ಉದ್ಯಮಿ ಅಬ್ರಹಾಂ ಉಂಗಾರ್ ಅವರ ಒಡೆತನದಲ್ಲಿದೆ. ಪ್ರಸ್ತುತ ಇದನ್ನು ಜಪಾನಿನ ಕಂಪನಿಗೆ ಗುತ್ತಿಗೆ ನೀಡಲಾಗಿದೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ಭಯಾನಕ ದಾಳಿ ನಡೆಸಿದ್ದರು. ತದ ನಂತರ ಇಸ್ರೇಲ್ ನಿರಂತರವಾಗಿ ಗಾಜಾ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಹೌತಿಗಳು ಇಸ್ರೇಲ್ ಅನ್ನು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಹೈಜಾಕ್‌ ಆಗಿರುವ ಹಡಗಿನಲ್ಲಿ ಇಸ್ರೇಲ್ ಮತ್ತು ಭಾರತದ ಪ್ರಜೆಗಳಿಲ್ಲ ಎಂಬುದು ದೃಢಪಟ್ಟಿದೆ.

ಇಸ್ರೇಲ್-ಹಮಾಸ್ ಉಗ್ರರ ನಡುವಿನ ಕಾಳಗದಿಂದ ಹೌತಿ ಬಂಡುಕೋರರು ಹತಾಶರಾಗಿದ್ದಾರೆ. ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ, ಯುದ್ಧ ಮತ್ತಷ್ಟು ಉಲ್ಬಣಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ಹೌತಿ ಸೇನಾ ವಕ್ತಾರ ಯಾಹ್ಯಾ ಸರಿಯಾ, ತಮ್ಮ ಪಡೆಗಳು ಇಸ್ರೇಲಿ ಕಂಪನಿಗಳು ಮತ್ತು ಇಸ್ರೇಲಿ ಧ್ವಜಗಳಿರುವ ಹಡಗುಗಳನ್ನು ಗುರಿಯಾಗಿಸುತ್ತದೆ ಎಂದು ಭಾನುವಾರ ಘೋಷಿಸಿದ್ದರು.

ಇದನ್ನೂ ಓದಿ:ಸಾಕಿನ್ನು ಸಾವುನೋವು, ತಕ್ಷಣ ಕದನ ವಿರಾಮ ಜಾರಿಯಾಗಲಿ: ವಿಶ್ವಸಂಸ್ಥೆ ಪ್ರ.ಕಾರ್ಯದರ್ಶಿ ಗುಟೆರೆಸ್

Last Updated : Nov 21, 2023, 12:25 PM IST

ABOUT THE AUTHOR

...view details