ಜಿನೀವಾ:2020 ಮತ್ತು 2021ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಜಗತ್ತಿನೆಲ್ಲೆಡೆ ಸುಮಾರು 1.49 ಕೋಟಿಗೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಬಹಿರಂಗಪಡಿಸಿದೆ. ಕೇವಲ 10 ದೇಶಗಳಲ್ಲಿ ಶೇ.68ರಷ್ಟು ಸಾವು ದಾಖಲಾಗಿದ್ದರೆ, ಆಗ್ನೇಯ ಏಷ್ಯಾ, ಯುರೋಪ್ ಮತ್ತು ಅಮೆರಿಕಗಳಲ್ಲಿ ಹೆಚ್ಚಿನ ಸಾವು (ಶೇ. 84) ದಾಖಲಾಗಿದೆ.
24 ತಿಂಗಳ ಅವಧಿಯಲ್ಲಿ ಒಟ್ಟು ಸಾವುಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಶೇ.81ರಷ್ಟು, ಹಿಂದುಳಿದ ದೇಶಗಳು ಶೇ.53 ಮತ್ತು ಮುಂದುವರೆದ ದೇಶಗಳಲ್ಲಿ ಶೇ.28 ರಷ್ಟು ಸಾವು ವರದಿಯಾಗಿದೆ. ಈ ವರದಿ ಸೋಂಕಿನ ಪರಿಣಾಮವನ್ನು ಮಾತ್ರ ಸೂಚಿಸುತ್ತದೆ. ಆದರೆ ಎಲ್ಲಾ ದೇಶಗಳು ಹೆಚ್ಚು ಸ್ಥಿತಿಸ್ಥಾಪಕ ಆರೋಗ್ಯ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವ ಅಗತ್ಯವನ್ನು ಸೂಚಿಸುತ್ತದೆ ಎಂದು ಡಬ್ಲೂಹೆಚ್‌ಒ ಡೈರೆಕ್ಟರ್ ಜನರಲ್ ಡಾ.ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದರು.
ಜಾಗತಿಕ ಸಾವಿನ ಸಂಖ್ಯೆ ಮಹಿಳೆಯರು (ಶೇ. 43), ಪುರುಷರಿಗಿಂತ (ಶೇ 57) ವಯಸ್ಕರಲ್ಲಿ ಹೆಚ್ಚು ಎಂದು ಅಂದಾಜಿಸಲಾಗಿದೆ. ಮಾರ್ಚ್‌ನಲ್ಲಿ, ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವಿಶ್ಲೇಷಣೆಯು ಜಾಗತಿಕ ಕೋವಿಡ್ ಸಾವಿನ ಸಂಖ್ಯೆ ಅಧಿಕೃತ ಸಾಂಕ್ರಾಮಿಕ ಸಾವಿನ ದಾಖಲೆಗಳು ಸೂಚಿಸುವುದಕ್ಕಿಂತ ಮೂರು ಪಟ್ಟು ಹೆಚ್ಚಿರಬಹುದು ಎಂದು ತಿಳಿಸಿದೆ.