ಕರ್ನಾಟಕ

karnataka

ETV Bharat / international

ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್ ಸಚಿವ ಸ್ಥಾನಕ್ಕೆ ರಾಜೀನಾಮೆ; ಬ್ರಿಟನ್​ ಸರ್ಕಾರಕ್ಕೆ ಹಿನ್ನಡೆ

ಬ್ರಿಟನ್​ ಸರ್ಕಾರದ ಇಬ್ಬರು ಪ್ರಮುಖ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಇದರಲ್ಲಿ ರಿಷಿ ಸುನಕ್‌ ಕೂಡಾ ಒಬ್ಬರು ಎನ್ನುವುದು ಗಮನಾರ್ಹ.

ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್, ಸಾಜಿದ್ ಜಾವಿದ್ ಸಚಿವ ಸ್ಥಾನಕ್ಕೆ ರಾಜೀನಾಮೆ
ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್, ಸಾಜಿದ್ ಜಾವಿದ್ ಸಚಿವ ಸ್ಥಾನಕ್ಕೆ ರಾಜೀನಾಮೆ

By

Published : Jul 6, 2022, 6:44 AM IST

Updated : Jul 6, 2022, 7:10 AM IST

ಲಂಡನ್:ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್​ ಸರ್ಕಾರದ ಹಣಕಾಸು ಸಚಿವ ರಿಷಿ ಸುನಕ್​ ಮತ್ತು ಇನ್ನೋರ್ವ ಸಚಿವ (ಆರೋಗ್ಯ ಕಾರ್ಯದರ್ಶಿ) ಸಾಜಿದ್​ ಜಾವಿದ್ ತಮ್ಮ ಸ್ಥಾನ​ಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಭಾರಿ ಹಿನ್ನಡೆ ಉಂಟು ಮಾಡಿದೆ.

ಹಲವು ಹಗರಣಗಳು, ಕೊರೊನಾ ಸಂದರ್ಭದಲ್ಲಿ ನಿಯಮ ಮೀರಿ ಸಂತೋಷಕೂಟ ಸೇರಿದಂತೆ ಬೋರಿಸ್​ ಜಾನ್ಸನ್​ ನಾಯಕತ್ವದ ಮೇಲೆ ವಿಶ್ವಾಸ ಕಳೆದುಕೊಂಡು ಈ ಇಬ್ಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

"ಸಮರ್ಥ ಮತ್ತು ಗಂಭೀರ ಸರ್ಕಾರವನ್ನು ಜನರು ನಿರೀಕ್ಷಿಸಿದ್ದರು. ಆದರೆ, ಅದು ಜಾನ್ಸನ್​ ನಾಯಕತ್ವದಲ್ಲಿ ಕಂಡುಬರಲಿಲ್ಲ. ಹೀಗಾಗಿ ನಾನು ಸರ್ಕಾರದ ಭಾಗವಾಗಿ ಮುಂದುವರಿಯಲು ಬಯಸುವುದಿಲ್ಲ" ಎಂದು ರಿಷಿ ಸುನಕ್ ತಿಳಿಸಿದ್ದಾರೆ.

ಬೋರಿಸ್​ ಜಾನ್ಸನ್​ ಸರ್ಕಾರದಲ್ಲಿ ಹಲವು ಹಗರಣಗಳು ಕೇಳಿಬಂದಿವೆ. ಅಲ್ಲದೇ, ಕೊರೊನಾ ತುರ್ತು ಸಮಯದಲ್ಲಿ ಗಾಂಭೀರ್ಯತೆ ಕಾಪಾಡಬೇಕಾಗಿದ್ದ ಪ್ರಧಾನಿಯೇ ಪಾರ್ಟಿ ಏರ್ಪಡಿಸಿ ಜಲ್ಸಾ ಮಾಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮುಂದಿನ ಬ್ರಿಟನ್ ಪ್ರಧಾನಿ ಅಭ್ಯರ್ಥಿಯಾಗಿ ರಿಷಿ ಸುನಕ್​ ಹೆಸರು ಕೇಳಿಬರುತ್ತಿವೆ.

ಹೊಸ ಸಚಿವರ ನೇಮಕ:ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪ್ರಧಾನಿ ಜಾನ್ಸನ್​ ಹೊಸ ಸಚಿವರನ್ನು ನೇಮಕ ಮಾಡಿದ್ದಾರೆ. ರಿಷಿ ಸುನಕ್​ ಸ್ಥಾನಕ್ಕೆ ನದೀಮ್​ ಝಹಾವಿ, ಆರೋಗ್ಯ ಕಾರ್ಯದರ್ಶಿಯಾಗಿ ಸ್ಟೀವ್​ ಬಾರ್ಕ್ಲೇ ಅವರನ್ನು ಪರಿಗಣಿಸಲಾಗಿದೆ.

ಇದನ್ನೂ ಓದಿ:ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್​ ಮೊರೆ ಹೋದ ಟ್ವಿಟರ್​

Last Updated : Jul 6, 2022, 7:10 AM IST

ABOUT THE AUTHOR

...view details