ನವದೆಹಲಿ :ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬಿಬಿಸಿ ನಿರ್ಮಿಸಿದ ಸಾಕ್ಷ್ಯಚಿತ್ರದ ಬಗ್ಗೆ ಅಮೆರಿಕಕ್ಕೆ ಯಾವುದೇ ಪರಿಚಯವಿಲ್ಲ ಎಂದು ಮಂಗಳವಾರ ಹೇಳಿಕ ನೀಡಿದ್ದ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಅಮೆರಿಕ ದೇಶವು ವಿಶ್ವದಲ್ಲಿ ಮುಕ್ತ ಪತ್ರಿಕಾ ಮಾಧ್ಯಮದ ಪ್ರತಿಪಾದಕವಾಗಿದೆ ಎಂದು ಹೇಳಿದ್ದಾರೆ.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ 2002ರಲ್ಲಿ ನಡೆದ ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಪ್ರಧಾನಿ ಮೋದಿ ಅವರ ಅಧಿಕಾರವಧಿ ಕುರಿತಾಗಿ ಬಿಬಿಸಿ ತಯಾರಿಸಿದ ಸಾಕ್ಷ್ಯಚಿತ್ರವನ್ನು ಭಾರತ ನಿಷೇದಿಸಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ''ನಾವು ಜಗತ್ತಿನಲ್ಲಿ ಮುಕ್ತ ಪತ್ರಿಕೆಯನ್ನು ಬೆಂಬಲಿಸುತ್ತೇವೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವುದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮದಂತಹ ಪ್ರಜಾಪ್ರಭುತ್ವದ ತತ್ವಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ನೆಡ್ ಪ್ರೈಸ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಪಾಕಿಸ್ತಾನಿ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ನೆಡ್ ಪ್ರೈಸ್,'' ನೀವು ಪ್ರಶ್ನೆಯಲ್ಲಿ ಉಲ್ಲೇಖಿಸುತ್ತಿರುವ ( 2002ರ ಗುಜರಾತ್ ಗಲಭೆಗಳ ಕುರಿತು) ಸಾಕ್ಷ್ಯಚಿತ್ರದ ಬಗ್ಗೆ ನನಗೆ ಅಷ್ಟು ಪರಿಚಯವಿಲ್ಲ. ಅಮೆರಿಕ ಮತ್ತು ಭಾರತ ಎರಡು ಅಭೀವೃದ್ಧಿಶೀಲ ದೇಶಗಳು, ಮತ್ತು ನನಗೆ ಎರಡು ದೇಶಗಳ ಪ್ರಜಾಪ್ರಭುತ್ವಗಳನ್ನು ಸಂಪರ್ಕಿಸುವ ಮೌಲ್ಯಗಳೊಂದಿಗೆ ಬಹಳ ಪರಿಚಿತವಿದೆ ಎಂದು ಉತ್ತರಿಸಿದ್ದರು.
ಸದ್ಯ ಬಿಬಿಸಿ ತಯಾರಿಸಿದ ''ಇಂಡಿಯಾ: ಮೋದಿ ಕೋಶ್ಚನ್'' ಸಾಕ್ಷ್ಯಚಿತ್ರವು ವಿವಾದಗಳನ್ನು ಹುಟ್ಟು ಹಾಕುತ್ತಿದ್ದು, ಭಾರತೀಯರು ಈ ಸಾಕ್ಷ್ಯವನ್ನು ಚಿತ್ರವನ್ನು ವೀಕ್ಷಿಸುವುದನ್ನು ತಡೆಯಲು ಭಾರತ ಸರ್ಕಾರವು ತನಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಮತ್ತು ಟ್ಟಿಟರ್ಗೆ ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಸಾಕ್ಷ್ಯಚಿತ್ರವನ್ನು ಮತ್ತು ಚಿತ್ರದ ತುಣುಕುಗಳನ್ನು ಅಪಲೋಡ್ ಮಾಡದಂತೆ ಮತ್ತು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಲಿಂಕ್ಗಳ ಪೊಸ್ಟ್ಗಳನ್ನು ತೆಗೆದುಹಾಕುವಂತೆ ಸರ್ಕಾರ ನಿರ್ದೇಶನವನ್ನು ನೀಡಿದೆ.
ಸತ್ಯ ಒಂದಲ್ಲ ಒಂದು ದಿನ ಹೊರ ಬರುತ್ತದೆ:ಸತ್ಯ ಒಂದಲ್ಲ ಒಂದು ರೀತಿಯಲ್ಲಿ ಹೊರಬಂದೆ ಬರುತ್ತದೆ ಮಾಧ್ಯಮಗಳ ಎಷ್ಟೇ ಬಾಯಿ ಮುಚ್ಚಿದರು, ಪ್ರಯೋಜನವಿಲ್ಲ ಎಂದು ರಾಹುಲ್ ಗಾಂಧಿ ಹೇಳುವ ಮೂಲಕ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಕಡಿವಾಣ ಹಾಕುವ ಮೋದಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಜೆಎನ್ಯು, ಜಾಮಿಯಾ ಮತ್ತು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಕೆಲವು ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಎಡಪಂಥಿಯ ವಿದ್ಯಾರ್ಥಿ ಸಂಘಟನೆಗಳು ನಿಷೇಧಿಸಲಾದ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕೆಲವು ಕಡೆ ಏರ್ಪಡಿಸಿವೆ.
ಬುಧವಾರ ಸಂಜೆ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ನಿಷೇಧಿತ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿದ್ದಾರೆ ಎಂದು ದಹೆಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದ್ದವು. ಮಂಗಳವಾರ ಮುಂಜಾನೆ ಜೆಎನ್ಯು ವಿದ್ಯಾರ್ಥಿಗಳು ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸಿ, ತಮ್ಮ ತಮ್ಮ ಮೊಬೈಲ್ ಮತ್ತು ಲ್ಯಾಪ್ಟಾಪ್ನಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ:ವಿಶ್ವದ ಆರ್ಥಿಕತೆಯಲ್ಲಿ ಭಾರತ ಪ್ರಜ್ವಲಿಸುವ ತಾಣ: ವಿಶ್ವ ಆರ್ಥಿಕ ಪರಿಸ್ಥಿತಿಯ ಭವಿಷ್ಯದ ವರದಿ ಬಿಡುಗಡೆ