ಕರ್ನಾಟಕ

karnataka

By

Published : Feb 15, 2023, 9:03 AM IST

ETV Bharat / international

ಸ್ವಿಸ್​ ಸಂಸತ್ತಿಗೆ ಬಾಂಬ್​ ಬೆದರಿಕೆ.. ಸ್ಫೋಟಕಗಳ ಸಮೇತ ಭವನ ಪ್ರವೇಶಿಸಿದ್ದ ಆಗಂತುಕ

ಸ್ವಿಟ್ಜರ್​ಲ್ಯಾಂಡ್​ ಸಂಸತ್​ಗೆ ಬಾಂಬ್​ ಬೆದರಿಕೆ- ಸ್ಫೋಟಕ ಸಮೇತ ಸಂಸತ್ ಪ್ರವೇಶಿಸಿದ್ದ ವ್ಯಕ್ತಿ- ಸ್ವಿಸ್​ನಲ್ಲಿ ಆಗಂತುಕನ ಬೆದರಿಕೆ- ತಪಾಸಣೆಗಾಗಿ ಸಂಸತ್​ ಖಾಲಿ ಮಾಡಿಸಿದ ಪೊಲೀಸರು

explosives
ಸ್ವಿಸ್​ ಸಂಸತ್ತಿಗೆ ಬಾಂಬ್​ ಬೆದರಿಕೆ

ಬೆರ್ನೆ (ಸ್ವಿಟ್ಜರ್​ಲ್ಯಾಂಡ್​):ಸ್ವಿಸ್​ ರಾಜಧಾನಿ ಬೆರ್ನೆಯಲ್ಲಿ ವ್ಯಕ್ತಿಯೊಬ್ಬ ಸ್ಫೋಟಕಗಳೊಂದಿಗೆ ಸಂಸತ್​ ಭವನ ಪ್ರದೇಶಿಸಿದ್ದು, ಭಾರೀ ಉಂಟು ಮಾಡಿತ್ತು. ಶಂಕಿತನನ್ನು ಬಂಧಿಸಿದ ಪೊಲೀಸರು ತಪಾಸಣೆಗಾಗಿ ಇಡೀ ಸಂಸತ್ತು ಮತ್ತು ಅದರ ಕಚೇರಿ ಸಿಬ್ಬಂದಿಯನ್ನು ಖಾಲಿ ಮಾಡಿಸಿದ ವಿದ್ಯಮಾನ ಮಂಗಳವಾರ ನಡೆದಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸಂಸತ್​ ಭವನದಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇದ್ದ ವೇಳೆ ವ್ಯಕ್ತಿಯೊಬ್ಬ ಸ್ಫೋಟಕಗಳನ್ನು ದೇಹಕ್ಕೆ ಕಟ್ಟಿಕೊಂಡು ಗೌಪ್ಯವಾಗಿ ಬಂದಿದ್ದಾನೆ. ಸಂಸತ್​ ಮುಖ್ಯದ್ವಾರದಿಂದ ಒಳಬಂದು ಅನುಮಾನಾಸ್ವದವಾಗಿ ಓಡಾಡುತ್ತಿದ್ದಾಗ ಪೊಲೀಸರು ಹಿಡಿದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತ ಭಾರೀ ಸ್ಫೋಟಕಗಳನ್ನು ಮೈಗೆ ಕಟ್ಟಿಕೊಂಡಿದ್ದಾರೆ.

ಇದರಿಂದ ತಕ್ಷಣವೇ ಎಚ್ಚೆತ್ತ ಪೊಲೀಸರು ಆತನನ್ನು ಬಂಧಿಸಿ, ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಗನ್​, ಸ್ಫೋಟಕ ಮತ್ತು ಬುಲೆಟ್​ಪ್ರೂಫ್​​ ಜಾಕೆಟ್​ ಹೊಂದಿದ್ದ. ಅಲ್ಲದೇ, ಸಂಸತ್​ ಹೊರಭಾಗದಲ್ಲಿ ಆತ ಬಿಟ್ಟು ಬಂದಿದ್ದ ಕಾರಿನಲ್ಲೂ ಸ್ಫೋಟಕಗಳು ಇದ್ದವು ಎಂಬುದು ಪೊಲೀಸ್​ ತಪಾಸಣೆಯಲ್ಲಿ ಕಂಡುಬಂದಿದೆ. ಈತ ಯಾವ ಕಾರಣಕ್ಕಾಗಿ ಸ್ಫೋಟಕ ಸಮೇತ ಸಂಸತ್​ ಪ್ರವೇಶಿಸಿದ್ದ ಎಂಬುದು ತಿಳಿದು ಬಂದಿಲ್ಲ.

ಆಗಂತುಕನನ್ನು ಬಂಧಿಸಿ ಪೊಲೀಸ್​ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ, ದೈಹಿಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆಯೂ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಡೀ ಸಂಸತ್​ ಖಾಲಿ:ಅಪರಿಚಿತ ವ್ಯಕ್ತಿ ಸ್ಫೋಟಕ ಸಮೇತ ಸಂಸತ್​ ಪ್ರವೇಶಿಸಿದ ಸುದ್ದಿ ಕೇಳಿ ಜನರು ಆತಂಕಗೊಂಡಿದ್ದರು. ಅಲ್ಲದೇ, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಇಡೀ ಸಂಸತ್ತನ್ನು ದಿನದಮಟ್ಟಿಗೆ ಖಾಲಿ ಮಾಡಿಸಿದ್ದಾರೆ. ಅಧಿಕಾರಿಗಳು, ಕಚೇರಿಗಳು, ಸಿಬ್ಬಂದಿ ಎಲ್ಲರನ್ನೂ ಸಂಸತ್ತಿನ ಪ್ರದೇಶದಿಂದ ಹೊರಹೋಗಲು ಪೊಲೀಸರು ಸೂಚಿಸಿದ್ದರು.

ಅಗ್ನಿಶಾಮಕ ದಳ ಮತ್ತು ಸ್ಫೋಟ ವಿಭಾಗದ ತಜ್ಞರು ಸೇರಿದಂತೆ ಬರ್ನ್ ಕ್ಯಾಂಟನ್ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಸಂಸತ್ತನ್ನು ಜಾಲಾಡಿದ್ದಾರೆ. ಯಾವುದೇ ಶಂಕಿತ ವಸ್ತು ಲಭ್ಯವಾಗಿಲ್ಲ. ಬಳಿಕ ಹೊರಭಾಗದಲ್ಲಿ ವ್ಯಕ್ತಿ ನಿಲ್ಲಿಸಿ ಬಂದಿದ್ದ ಕಾರನ್ನೂ ತಪಾಸಣೆ ನಡೆಸಿ ಅಲ್ಲಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆದರು. ಸ್ಫೋಟಕ ಸಂಬಂಧಿತ ಪ್ರಕರಣಗಳ ವಿಚಾರಣೆ ನಡೆಸುವ ಫೆಡರಲ್ ಪ್ರಾಸಿಕ್ಯೂಟರ್ ಕಚೇರಿ (BA), ಫೆಡ್ಪೋಲ್, ಬರ್ನ್ ಕ್ಯಾಂಟೋನಲ್ ಪೊಲೀಸ್ ಮತ್ತು ವಲೈಸ್ ಕ್ಯಾಂಟೋನಲ್ ಪೋಲಿಸ್ ಜಂಟಿಯಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಗೂಗಲ್​ ಕಚೇರಿಗೆ ಬಾಂಬ್​ ಬೆದರಿಕೆ:ಕುಡಿದ ಮತ್ತಿನಲ್ಲಿ ಹೈದರಾಬಾದ್​ ಮೂಲದ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ಪುಣೆಯಲ್ಲಿರುವ ಗೂಗಲ್ ಕಚೇರಿಗೆ ಬಾಂಬ್ ಬೆದರಿಕೆ ಕರೆ ಮಾಡಿದ ಘಟನೆ ಈಚೆಗೆ ನಡೆದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಡೀ ಕಚೇರಿ ತಪಾಸಿಸಿದ ಬಳಿಕ ಯಾವುದೇ ವಸ್ತು ಸಿಗದ ಕಾರಣ ಇದೊಂದು ಹುಸಿ ಕರೆ ಎಂದು ಗೊತ್ತಾಗಿತ್ತು. ಕರೆ ಮಾಡಿದ ವ್ಯಕ್ತಿ ಪತ್ತೆ ಹಚ್ಚಿ ಹೈದರಾಬಾದ್​ನಲ್ಲಿ ಬಂಧಿಸಲಾಗಿತ್ತು.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಗೂಗಲ್ ಕಚೇರಿಗೆ ವ್ಯಕ್ತಿಯೊಬ್ಬ ಭಾನುವಾರ ಕರೆ ಮಾಡಿ, ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿರುವ ಗೂಗಲ್ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ಗಾಬರಿಗೊಂಡ ಅಲ್ಲಿನ ಸಿಬ್ಬಂದಿ ತಕ್ಷಣವೇ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಂಬ್​ ಇಟ್ಟ ಕರೆಯಂತೆ ಪುಣೆ ಗೂಗಲ್​ ಇಡೀ ಕಚೇರಿಯನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ.

ಕಚೇರಿಯಲ್ಲಿ ಎಲ್ಲೂ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಯಾವುದೇ ಬಾಂಬ್ ಕೂಡ ಇರಲಿಲ್ಲ. ಆಗ ಇದೊಂದು ಹುಸಿ ಕರೆ ಎಂದು ಖಚಿತವಾಗಿದೆ. ಇದರ ವಿರುದ್ಧ ಗೂಗಲ್ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಹುಸಿ ಕರೆ ಬಂದ ನೆಟ್​ವರ್ಕ್​ ಹಿಡಿದು ತನಿಖೆ ನಡೆಸಿದಾಗ ಹೈದರಾಬಾದ್​ನಿಂದ ಕರೆ ಬಂದಿದ್ದು ಗೊತ್ತಾಗಿದೆ. ಮುಂಬೈ ಪೊಲೀಸರು ಹೈದರಾಬಾದ್ ಬಂದು ಕುಡುಕ ಕಿರಾತಕನನ್ನು ಬಂಧಿಸಿದ್ದರು.

ಓದಿ:ಕನ್ಯಾಕುಮಾರಿಯಲ್ಲಿ ಮಂಗಳೂರು ಬೋಟ್​ಗಳ ಮೇಲೆ ಕಲ್ಲು ತೂರಾಟ ಪ್ರಕರಣ: ಗಾಯಗೊಂಡ ಮೀನುಗಾರರಿಂದ ದೂರು

ABOUT THE AUTHOR

...view details