ಕರ್ನಾಟಕ

karnataka

ETV Bharat / international

ಇಸ್ರೇಲ್​ - ಗಾಜಾ ನಡುವೆ ದಾಳಿ - ಪ್ರತಿದಾಳಿ.. ಹಮಾಸ್ ಕಮಾಂಡರ್ ಸೇರಿ 10 ಜನರ ಸಾವು - ಗಾಜಾದ ಮೇಲೆ ಇಸ್ರೇಲ್ ಸರಣಿ ವೈಮಾನಿಕ ದಾಳಿ

ಗಾಜಾದ ಮೇಲೆ ಇಸ್ರೇಲ್ ಸರಣಿ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಹಮಾಸ್ ಕಮಾಂಡರ್ ಸೇರಿ 10 ಜನರು ಮೃತಪಟ್ಟಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಗಾಜಾ ಸಹಿತ ಎರಡು ರಾಕೆಟ್ ದಾಳಿ ನಡೆಸಿದೆ.

Rockets fired from Gaza  Israeli strikes kill militant leader  Israel and Gaza between war  ಹಮಾಸ್ ಕಮಾಂಡರ್ ಸೇರಿ 10 ಜನರು ಮೃತ  ಗಾಜಾದ ಮೇಲೆ ಇಸ್ರೇಲ್ ಸರಣಿ ವೈಮಾನಿಕ ದಾಳಿ  ಇಸ್ರೇಲ್​ ಮತ್ತು ಗಾಜಾ ನಡುವೆ ಯುದ್ಧ
ಹಮಾಸ್ ಕಮಾಂಡರ್ ಸೇರಿ 10 ಜನರು ಮೃತ!

By

Published : Aug 6, 2022, 9:03 AM IST

ಟೆಲ್ ಅವಿವ್: ಗಾಜಾದ ಮೇಲೆ ಇಸ್ರೇಲ್ ಸರಣಿ ವೈಮಾನಿಕ ದಾಳಿ ನಡೆಸಿ ಹಮಾಸ್ ಕಮಾಂಡರ್ ಸೇರಿ 10 ಜನರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವಾರದ ಆರಂಭದಲ್ಲಿ ಹಿರಿಯ ಪ್ಯಾಲೆಸ್ತೀನಿಯನ್ ದಂಗೆಕೋರನನ್ನು ಬಂಧಿಸಿದ ನಂತರ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಉದ್ವಿಗ್ನತೆಯ ನಡುವೆ ಶುಕ್ರವಾರ ಗಾಜಾದ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇದಾದ ಕೆಲವೇ ಗಂಟೆಗಳಲ್ಲಿ ಗಾಜಾದಿಂದ ಇಸ್ರೇಲ್ ಮೇಲೆ ಹಲವಾರು ರಾಕೆಟ್‌ಗಳನ್ನು ಹಾರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲ್ ಕೂಡ ದೇಶದಲ್ಲಿ 'ವಿಶೇಷ ಪರಿಸ್ಥಿತಿ' ಘೋಷಿಸಿದ್ದು, ಗಡಿಯ 80 ಕಿಮೀ ವ್ಯಾಪ್ತಿಯ ಎಲ್ಲ ಶಾಲೆಗಳನ್ನು ಮುಚ್ಚಲಾಗಿದ್ದು, ಜನರ ಇತರ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಇಸ್ರೇಲ್ ಈ ವಾರದ ಆರಂಭದಲ್ಲಿ ಗಾಜಾದ ಸುತ್ತಲಿನ ರಸ್ತೆಗಳನ್ನು ಮುಚ್ಚಿದೆ. ಬಳಿಕ ಹೆಚ್ಚುವರಿ ಪಡೆಗಳನ್ನು ಗಡಿಗೆ ಕಳುಹಿಸಿತ್ತು. ಸೋಮವಾರ (ಆಗಸ್ಟ್ 1) ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹಿರಿಯ ಹಮಾಸ್ ಸದಸ್ಯನನ್ನು ಬಂಧಿಸಿದ ನಂತರ ಈ ಎಲ್ಲ ಬೆಳವಣಿಗೆಗಳು ಕಂಡು ಬಂದಿವೆ.

ಕಳೆದ 15 ವರ್ಷಗಳಿಂದ ಹೋರಾಟ:ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಹಮಾಸ್ ನಡುವೆ 15 ವರ್ಷಗಳಲ್ಲಿ ನಾಲ್ಕು ಯುದ್ಧಗಳು ಮತ್ತು ಹಲವಾರು ಸಣ್ಣ ಕದನಗಳು ನಡೆದಿವೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಭೀಕರ ಯುದ್ಧವು ಮೇ 2021 ರಲ್ಲಿ ನಡೆದಿತ್ತು.

'ನಾವು ಹೋರಾಟವನ್ನು ಪ್ರಾರಂಭಿಸುತ್ತಿದ್ದೇವೆ': ಗಾಜಾ ವಿರುದ್ಧ ಪ್ರಚೋದನೆಯನ್ನು ಪ್ರಾರಂಭಿಸಿದ ಇಸ್ರೇಲಿ ಶತ್ರುಗಳು ಹೊಸ ಅಪರಾಧವನ್ನು ಮಾಡಿದ್ದಾರೆ ಎಂದು ಹಮಾಸ್ ವಕ್ತಾರ ಫೌಜಿ ಬಾರ್ಹೋಮ್ ಹೇಳಿದ್ದಾರೆ.

ಗಾಜಾದಿಂದ ಎರಡು ರಾಕೆಟ್‌ ದಾಳಿ: ಇಸ್ರೇಲಿ ದಾಳಿಯ ನಂತರ ಗಾಜಾದಿಂದ ಮಧ್ಯ ಮತ್ತು ದಕ್ಷಿಣ ಇಸ್ರೇಲ್‌ ಮೇಲೆ ಎರಡು ರಾಕೆಟ್‌ಗಳನ್ನು ಹಾರಿಸಲಾಗಿತ್ತು. ಆದ್ರೆ ಆ ರಾಕೆಟ್​ಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್​ ಮಾಧ್ಯಮಗಳು ವರದಿ ಮಾಡಿವೆ.

ಓದಿ:ಅಂತಾರಾಷ್ಟ್ರೀಯ ಮಾಧ್ಯಮ ಕಚೇರಿ, ವಸತಿ ಕಟ್ಟಡದ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ- ವಿಡಿಯೋ


ABOUT THE AUTHOR

...view details