ಕರ್ನಾಟಕ

karnataka

ETV Bharat / international

ಕಿಂಗ್ ಚಾರ್ಲ್ಸ್ ಭೇಟಿ ನಂತರ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ಸ್ವೀಕಾರ - Rishi Sunak to take charge as UK Prime Minister

ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರು ಇಂದು 10 ಡೌನಿಂಗ್ ಸ್ಟ್ರೀಟ್‌ನಲ್ಲಿ ತಮ್ಮ ಅಂತಿಮ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಅವರು ರಾಜನಿಗೆ ರಾಜೀನಾಮೆ ಪತ್ರ ನೀಡಲಿದ್ದಾರೆ. ರಿಷಿ ಸುನಕ್​ ರಾಜನನ್ನು ಭೇಟಿಯಾದ ಬಳಿಕ, ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ರಿಷಿ ಸುನಕ್​
ರಿಷಿ ಸುನಕ್​

By

Published : Oct 25, 2022, 10:53 AM IST

ಲಂಡನ್:ಕನ್ಸರ್ವೇಟಿವ್ ಪಕ್ಷದ ಹೊಸ ನಾಯಕರಾಗಿ ಭಾರತೀಯ ಮೂಲದ ರಿಷಿ ಸುನಕ್​ ಆಯ್ಕೆಯಾಗಿದ್ದಾರೆ. ಅವರು ಇಂದು ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಲಿಜ್ ಟ್ರಸ್ ಅವರು ಇಂದು 10 ಡೌನಿಂಗ್ ಸ್ಟ್ರೀಟ್‌ನಲ್ಲಿ ತಮ್ಮ ಅಂತಿಮ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ರಾಜನಿಗೆ ಔಪಚಾರಿಕವಾಗಿ ರಾಜೀನಾಮೆ ನೀಡಲು ಬಕಿಂಗ್‌ಹ್ಯಾಮ್ ಅರಮನೆಗೆ ತೆರಳಲಿದ್ದಾರೆ.

ಸುನಕ್ (42) ಅವರೂ ಇಂದೇ ರಾಜನ ಭೇಟಿಗಾಗಿ ಅರಮನೆಗೆ ಬರುತ್ತಾರೆ. ಔಪಚಾರಿಕವಾಗಿ ಅವರನ್ನು ಇಂಗ್ಲೆಂಡ್​​​​ನ ಹೊಸ ಪ್ರಧಾನಿಯಾಗಿ ಘೋಷಿಸುತ್ತಾರೆ. ಮಾಜಿ ಸಚಿವರೂ ಆದ ಸುನಕ್​ ನಂತರ 10 ಡೌನಿಂಗ್ ಸ್ಟ್ರೀಟ್‌ನ ಮೇಲೆ ತಮ್ಮ ಮೊದಲ ಪ್ರಧಾನ ಮಂತ್ರಿ ಭಾಷಣವನ್ನು ಮಾಡುತ್ತಾರೆ. ಪತ್ನಿ ಅಕ್ಷತಾ ಮೂರ್ತಿ ಮತ್ತು ಪುತ್ರಿಯರಾದ ಕೃಷ್ಣ ಮತ್ತು ಅನುಷ್ಕಾ ಅವರನ್ನು ಸೇರುವ ನಿರೀಕ್ಷೆಯಿದೆ.

ಇದನ್ನೂ ಓದಿ:ಬ್ರಿಟನ್‌ ಪ್ರಧಾನಿಯಾಗಿ ಸುನಕ್ ಆಯ್ಕೆ: ನಮಗೆಲ್ಲ ಹೆಮ್ಮೆ ಎಂದು ನಾರಾಯಣ ಮೂರ್ತಿ ಸಂತಸ

ಯುಕೆ ಒಂದು ಶ್ರೇಷ್ಠ ದೇಶವಾಗಿದೆ, ಆದರೆ ನಾವು ಗಂಭೀರವಾದ ಆರ್ಥಿಕ ಸವಾಲನ್ನು ಎದುರಿಸುತ್ತಿದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ. ನಮಗೆ ಈಗ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ. ನಮ್ಮ ಪಕ್ಷ ಮತ್ತು ದೇಶವನ್ನು ಒಟ್ಟಿಗೆ ತರಲು ನಾನು ಆದ್ಯತೆ ನೀಡುತ್ತೇನೆ ಎಂದು ಸುನಕ್ ಸೋಮವಾರ ಚುನಾಯಿತ ಪ್ರಧಾನಿಯಾಗಿ ತಮ್ಮ ಮೊದಲ ಭಾಷಣದಲ್ಲಿ ಹೇಳಿದರು.


ABOUT THE AUTHOR

...view details