ಕರ್ನಾಟಕ

karnataka

ETV Bharat / international

ಮಧ್ಯಪ್ರಾಚ್ಯ ಸಂಘರ್ಷ, ಜಾಗತಿಕ ಅಸ್ಥಿರತೆಗೆ ಅಮೆರಿಕವೇ ಕಾರಣ; ಪುಟಿನ್ ಆರೋಪ - ಜಾಗತಿಕ ಅಸ್ಥಿರತೆಯ ಮುಖ್ಯ ಫಲಾನುಭವಿ

ಇಸ್ರೇಲ್​ ಮತ್ತು ಹಮಾಸ್​ ನಡುವೆ ನಡೆಯುತ್ತಿರುವ ಭೀಕರ ಯುದ್ಧಕ್ಕೆ ಒಂದು ರೀತಿಯಲ್ಲಿ ಅಮೆರಿಕವೇ ಕಾರಣ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಆರೋಪಿಸಿದ್ದಾರೆ.

US 'responsible' for Middle East crisis, global instability: Putin
US 'responsible' for Middle East crisis, global instability: Putin

By ETV Bharat Karnataka Team

Published : Oct 31, 2023, 2:21 PM IST

ಮಾಸ್ಕೋ (ರಷ್ಯಾ) : ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಇತರ ಪ್ರಾದೇಶಿಕ ಸಂಘರ್ಷಗಳಿಗೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳೇ ಕಾರಣ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಪಿಸಿದ್ದಾರೆ. ಈ ಸಂಘರ್ಷದಿಂದ ಎದುರಾದ ಅಸ್ಥಿರತೆಯಿಂದ ಅಮೆರಿಕವೇ ಹೆಚ್ಚು ಲಾಭ ಪಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

"ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತು ಇತರ ಪ್ರಾದೇಶಿಕ ಬಿಕ್ಕಟ್ಟುಗಳಿಗೆ ಕಾರಣವಾಗಿರುವವರು ದ್ವೇಷ ಬಿತ್ತಲು ಮತ್ತು ವಿಶ್ವಾದ್ಯಂತ ಜನರಲ್ಲಿ ಭಿನ್ನಾಭಿಪ್ರಾಯ ಮೂಡಿಸಲು ತಮ್ಮ ವಿನಾಶಕಾರಿ ಶಕ್ತಿಯನ್ನು ಬಳಸಿಕೊಳ್ಳುತ್ತಿದ್ದಾರೆ" ಎಂದು ರಷ್ಯಾದ ನಾಯಕ ಸೋಮವಾರ ಉನ್ನತ ಭದ್ರತಾ ಮತ್ತು ಕಾನೂನು ಜಾರಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಹೇಳಿದರು.

ಮಧ್ಯಪ್ರಾಚ್ಯ ಸಂಘರ್ಷದ ಹಿಂದೆ ಯಾರಿದ್ದಾರೆ ಮತ್ತು ವಿವಿಧ ಪ್ರದೇಶಗಳಲ್ಲಿ ಅವ್ಯವಸ್ಥೆಯನ್ನು ಉಂಟು ಮಾಡಿ ಅದರಿಂದ ಯಾರು ಲಾಭ ಪಡೆಯುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಪ್ರಸ್ತುತ ಅಮೆರಿಕವನ್ನು ಆಳುವ ವ್ಯಕ್ತಿಗಳು ಮತ್ತು ಅವರ ಸಹವರ್ತಿಗಳೇ ಜಾಗತಿಕ ಅಸ್ಥಿರತೆಯ ಮುಖ್ಯ ಫಲಾನುಭವಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.

ಮಧ್ಯಪ್ರಾಚ್ಯದಲ್ಲಿನ ನಾಟಕೀಯ ಬೆಳವಣಿಗೆಗಳು ಮತ್ತು ಇತರ ಪ್ರಾದೇಶಿಕ ಸಂಘರ್ಷಗಳನ್ನು ರಷ್ಯಾ ವಿರುದ್ಧ ಬಳಸಿ ಆ ಮೂಲಕ ರಷ್ಯಾದ ಧಾರ್ಮಿಕ ವೈವಿಧ್ಯತೆಯ ವ್ಯವಸ್ಥೆಯಲ್ಲಿ ಬಿರುಕು ಮೂಡಿಸುವ ಮತ್ತು ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪುಟಿನ್ ಆರೋಪಿಸಿದರು. ಅಮೆರಿಕ ದುರ್ಬಲವಾಗುತ್ತಿದೆ ಮತ್ತು ವಿಶ್ವದ ಏಕೈಕ ಸೂಪರ್ ಪವರ್ ಮತ್ತು ಪ್ರಾಬಲ್ಯದ ಸ್ಥಾನಮಾನವನ್ನು ಕಳೆದುಕೊಳ್ಳುತ್ತಿದೆ. ಈ ವಿಶ್ವ ಕ್ರಮವು ನಿಧಾನವಾಗಿ ಗತಕಾಲದ ವಿಷಯವಾಗುತ್ತಿದೆ ಎಂದು ಪುಟಿನ್ ಹೇಳಿದರು.

ವಾಷಿಂಗ್ಟನ್ ತನ್ನ ಪ್ರಾಬಲ್ಯ ಮತ್ತು ಜಾಗತಿಕ ನಾಯಕತ್ವವನ್ನು ಕಾಪಾಡಿಕೊಳ್ಳಲು ಮತ್ತು ವಿಸ್ತರಿಸಲು ಬಯಸುತ್ತಿದೆ. ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಪ್ರತಿಸ್ಪರ್ಧಿಗಳು ಮತ್ತು ಭೌಗೋಳಿಕ ರಾಜಕೀಯ ವಿರೋಧಿಗಳನ್ನು ನಿಗ್ರಹಿಸುವುದು ಸುಲಭವಾದಾಗ ಅವರಿಗೆ ಇದು ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ಹೇಳಿದರು.

ವಿಮಾನ ನಿಲ್ದಾಣ ಘಟನೆಗೆ ಉಕ್ರೇನ್ ಕಾರಣ: ಭಾನುವಾರ ಸಂಜೆ ದಗೆಸ್ತಾನದ ಮಖಚ್ಕಲಾ ವಿಮಾನ ನಿಲ್ದಾಣದಲ್ಲಿ ನಡೆದ ಇಸ್ರೇಲ್ ವಿರೋಧಿ ಗಲಭೆಗೆ ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳು ಪ್ರಚೋದನೆ ನೀಡಿವೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಆರೋಪಿಸಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ರಷ್ಯಾದ ದಗೆಸ್ತಾನದ ವಿಮಾನ ನಿಲ್ಧಾಣದಲ್ಲಿ ಇಸ್ರೇಲ್​ಗೆ ಹೋಗುತ್ತಿದ್ದ ವಿಮಾನದ ರನ್​ವೇಯನ್ನು ಆಕ್ರಮಿಸಿಕೊಂಡಿದ್ದ ಗಲಭೆಕೋರರು ಇಸ್ರೇಲ್ ನಾಗರಿಕರಿಗಾಗಿ ಹುಡುಕಾಟ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 80 ಜನರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ :ಗಾಜಾ ವಿಷಯಕ್ಕೆ ಬಂದರೆ ಹುಷಾರ್; ಎಲೋನ್ ಮಸ್ಕ್​ಗೆ ಇಸ್ರೇಲ್ ಎಚ್ಚರಿಕೆ ನೀಡಿದ್ಯಾಕೆ?

For All Latest Updates

ABOUT THE AUTHOR

...view details