ಕರ್ನಾಟಕ

karnataka

By

Published : Sep 22, 2022, 5:37 PM IST

ETV Bharat / international

ರಷ್ಯಾದಲ್ಲಿ ಮಾರ್ಷಲ್ ಲಾ ಜಾರಿ ಸಾಧ್ಯತೆ: ಹೊರಹೋಗುವ ವಿಮಾನ ಟಿಕೆಟ್​ಗೆ ಭಾರಿ ಬೇಡಿಕೆ

ಈ ವಾರ ರಷ್ಯಾದಿಂದ ಹೊರಹೋಗುವ ವಿಮಾನಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ ಎಂದು ಏರ್‌ಲೈನ್ ಮತ್ತು ಟ್ರಾವೆಲ್ ಏಜೆಂಟ್ ಡೇಟಾ ಬುಧವಾರ ತೋರಿಸಿದೆ ಎಂದು ಜಾಗತಿಕ ಮಾಧ್ಯಮವೊಂದು ವರದಿ ಮಾಡಿದೆ.

ರಷ್ಯಾದಲ್ಲಿ ಮಾರ್ಶಲ್ ಲಾ ಜಾರಿ ಸಾಧ್ಯತೆ: ಹೊರಹೋಗುವ ವಿಮಾನ ಟಿಕೆಟ್​ಗೆ ಭಾರಿ ಬೇಡಿಕೆ
Rush Of One Way Flights Out Of Russia After Putins Ukraine Threat

ನವದೆಹಲಿ: ಉಕ್ರೇನ್​ ಮೇಲಿನ ಯುದ್ಧಕ್ಕೆ ಸೇನಾ ಪಡೆಗಳನ್ನು ಸಜ್ಜುಗೊಳಿಸುವಂತೆ ಅಧ್ಯಕ್ಷ ಪುಟಿನ್ ಆದೇಶದ ನಂತರ ರಷ್ಯಾದಿಂದ ಹೊರಹೋಗುವ ಪ್ರಯಾಣಿಕ ವಿಮಾನಗಳ ಟಿಕೆಟ್​ಗಳ ಮಾರಾಟ ಒಮ್ಮೆಲೇ ಹೆಚ್ಚಾಗಿದ್ದು, ಟಿಕೆಟ್​ ದರಗಳು ಸಹ ಗಗನಕ್ಕೇರಿವೆ. ರಷ್ಯಾದಲ್ಲಿ ಮಾರ್ಷಲ್ ಲಾ ಹೇರುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಒಂದು ವೇಳೆ ಮಾರ್ಷಲ್ ಲಾ ಜಾರಿಯಾದರೆ ಯುದ್ಧದಲ್ಲಿ ಹೋರಾಡಬಲ್ಲ ವಯಸ್ಸಿನ ಪುರುಷರು ದೇಶ ಬಿಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಸಾಧ್ಯ ಇದ್ದವರು ದೇಶ ಬಿಡುತ್ತಿದ್ದಾರೆಂದು ನಂಬಲಾಗಿದೆ.

ರಷ್ಯಾದಿಂದ ಹೊರಹೋಗುವ ಒನ್​-ವೇ ವಿಮಾನಗಳಿಗೆ ಪ್ರಯಾಣಿಕರ ದಟ್ಟಣೆ ಉಂಟಾಗಿದೆ ಎಂದು ವಿಮಾನಗಳ ಟ್ರ್ಯಾಕಿಂಗ್ ಸಂಸ್ಥೆ ಫ್ಲೈಟ್​ರಡಾರ್24 ಹೇಳಿದೆ.

ಈ ವಾರ ರಷ್ಯಾದಿಂದ ಹೊರಹೋಗುವ ವಿಮಾನಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ ಎಂದು ಏರ್‌ಲೈನ್ ಮತ್ತು ಟ್ರಾವೆಲ್ ಏಜೆಂಟ್ ಡೇಟಾ ಬುಧವಾರ ತೋರಿಸಿದೆ ಎಂದು ಜಾಗತಿಕ ಮಾಧ್ಯಮವೊಂದು ವರದಿ ಮಾಡಿದೆ. ಉಕ್ರೇನ್‌ನಲ್ಲಿ ಮಾಸ್ಕೋದ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪುಟಿನ್ ಘೋಷಿಸಿದಾಗಿನಿಂದ ರಷ್ಯಾ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ರಷ್ಯಾ ಅಧ್ಯಕ್ಷ ಪುಟಿನ್ ನಿನ್ನೆ ತಮ್ಮ ಸೇನಾಪಡೆಗಳ ಭಾಗಶಃ ಸಜ್ಜುಗೊಳಿಸುವಿಕೆಗೆ ಆದೇಶಿಸಿದ್ದರು. ಉಕ್ರೇನ್ ವಿರುದ್ಧ ಹೋರಾಡಲು 3 ಲಕ್ಷದಷ್ಟು ಕಾಯ್ದಿಟ್ಟ ಸೇನಾಪಡೆಯನ್ನು ಸಜ್ಜುಗೊಳಿಸಲು ಪುಟಿನ್ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತ ನ್ಯಾಯಸಮ್ಮತ ವರ್ಚಸ್ಸು ಪಡೆದು ಅನುಭವಿಸುತ್ತಿದೆ: ರಷ್ಯಾಧ್ಯಕ್ಷ ಪುಟಿನ್

ABOUT THE AUTHOR

...view details