ಲಂಡನ್ (ಇಂಗ್ಲೆಂಡ್):ಮಂಗಳವಾರ ತಡರಾತ್ರಿ ಬಕಿಂಗ್ಹ್ಯಾಮ್ ಅರಮನೆಯ ಹೊರಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಆಕ್ರಮಣಕಾರಿ ಶಸ್ತ್ರಾಸ್ತ್ರ ಹೊಂದಿರುವ ಶಂಕೆಯ ಮೇಲೆ ಆತನನ್ನು ಬಂಧಿಸಿ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ನಿಯಂತ್ರಿಕ ಸ್ಫೋಟ ನಡೆಸಲಾಯಿತು ಎಂದು ಲಂಡನ್ ಪೊಲೀಸರು ತಿಳಿಸಿದ್ದಾರೆ.
ಲಂಡನ್ ಮೆಟ್ರೋ ಪೊಲೀಸರ ಪ್ರಕಾರ, ಅನುಮಾಸ್ಪದ ವ್ಯಕ್ತಿಯೊಬ್ಬ ಬಕ್ಕಿಂಗ್ಹ್ಯಾಮ್ ಅರಮನೆಯ ಗೇಟ್ ಬಳಿ ಒಂದು ಚೀಲದಲ್ಲಿ ಶಾಟ್ಗನ್ ಕಾಟ್ರಿಡ್ಜ್ಗಳನ್ನು ಅರಮನೆಯ ಒಳಗಡೆ ಎಸೆದಿದ್ದಾನೆ ಇದನ್ನು ಗಮನಿಸಿದ ಅಧಿಕಾರಿಗಳು ತಕ್ಷಣವೇ ವ್ಯಕ್ತಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಯಾವುದೇ ಅಹಿತರಕರ ಘಟನೆಗಳು ಮತ್ತು ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಿಲ್ಲ ಮತ್ತು ಈ ಘಟನೆಗೂ ಭಯೋತ್ಪಾದೆನೆಗೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯ ಅಧೀಕ್ಷಕ ಜೋಸೆಫ್ ಮೆಕ್ಡೊನಾಲ್ಡ್ ತಿಳಿಸಿದ್ದಾರೆ.
ಈ ಘಟನೆ ನಡೆದ ಸಮಯದಲ್ಲಿ ಕಿಂಗ್ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ಬಕ್ಕಿಂಗ್ಹ್ಯಾಮ್ ಅರಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ಅರಮನೆಯ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮಂಗಳವಾರ ತಡರಾತ್ರಿ ಅರಮನೆ ಸುತ್ತ ಕಟ್ಟೆಚ್ಚರ ವಹಿಸಲಾಗಿತ್ತು. ಅಧಿಕಾರಿಗಳಿಗು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು, ತನಿಖೆ ಮುಂದವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಶನಿವಾರದಂದು ವೆಸ್ಟ್ಮಿನಿಸ್ಟರ್ ಅಬ್ಬೆ (ಬ್ರಿಟಿಷ್ ರಾಜರ ಪಟ್ಟಾಭಿಷೇಕ ಸ್ಥಳ)ಯಲ್ಲಿ ನಡೆಯಲಿರುವ ಕಿಂಗ್ ಚಾರ್ಲ್ಸ್ನ ಪಟ್ಟಾಭಿಕಷೇಕ ಸಮಾರಂಭಕ್ಕೂ ಮುನ್ನ ಈ ಘಟನೆ ನಡೆದಿದ್ದು ಆತಂಕ ಸೃಷ್ಟಿಸಿದೆ. 1953ರಲ್ಲಿ ರಾಣಿ ಎಲೆಜಬೆತ್ II ಪಟ್ಟಾಭಿಷೇಕದ ನಂತರ ಅರಮನೆಯಲ್ಲಿ ಮೊದಲ ಬಾರಿಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ದೇಶ ವಿದೇಶದಿಂದ ರಾಜಮನೆತನದವರು, ಗಣ್ಯರು ಮತ್ತು ರಾಷ್ಟ್ರದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ.