ಟೊರೊಂಟೊ (ಕೆನಡಾ):ಕೆನಡಾ ನಿರ್ದೇಶಕಿ ಲೀನಾ ಲೀನಾ ಮಣಿಮೇಕಲೈ ಕೆಲ ದಿನಗಳ ಹಿಂದಷ್ಟೇ ಕಾಳಿ ದೇವಿಯನ್ನು ಅವಮಾನಿಸುವ ರೀತಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ವಿವಾದ ಉಂಟು ಮಾಡಿದ್ದರು. ಇದೀಗ ಟೊರೊಂಟೋದಲ್ಲಿರುವ ಗಾಂಧೀಜಿ ಪ್ರತಿಮೆಯನ್ನು ಧ್ವಂಸ ಮಾಡಿ ಭಾರತೀಯರ ಭಾವನೆಗೆ ಧಕ್ಕೆ ತಂದ ಘಟನೆ ನಡೆದಿದೆ.
ಟೊರೊಂಟೋದ ರಿಚ್ಮಂಡ್ ಹಿಲ್ ಪ್ರದೇಶದಲ್ಲಿರುವ ವಿಷ್ಣು ದೇವಾಲಯದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಇಡಲಾಗಿದೆ. ಬುಧವಾರ ಅದನ್ನು ಯಾರೋ ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ಈ ಬಗ್ಗೆ ಭಾರತದ ರಾಯಭಾರ ಕಚೇರಿ ಆಕ್ಷೇಪ ವ್ಯಕ್ತಪಡಿಸಿದೆ.
ಗಾಂಧೀಜಿ ಪ್ರತಿಮೆಯನ್ನು ಭಗ್ನಿಗೊಳಿಸಿದ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ಕೆನಡಾದಲ್ಲಿರುವ ಭಾರತೀಯರ ಸ್ವಾತಂತ್ರ್ಯವನ್ನು ಕಾಪಾಡಬೇಕು. ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ರಾಯಭಾರಿ ಕಚೇರಿ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದೆ.
ಭಾರತೀಯರ ಮೇಲೆ ದ್ವೇಷ ಸಾಧಿಸಲಾಗುತ್ತಿದೆ. ಇಂತಹ ಕೃತ್ಯಗಳು ಮರುಕಳಿಸುತ್ತಿರುವುದು ಭಾರತೀಯರ ಭಾವನೆಗಳನ್ನು ಘಾಸಗೊಳಿಸಿದೆ. ಈ ಬಗ್ಗೆ ಕೆನಡಾದ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಭಾರತದ ದೂತಾವಾಸ ಕಚೇರಿ ಟ್ವೀಟ್ ಮಾಡಿದೆ.
ಓದಿ:ವಿಡಿಯೋ: ಶ್ರೀಲಂಕಾದ ಪ್ರಧಾನಿ ಕುರ್ಚಿ ಕಾವಲಿಗೆ ನಿಂತ ಸೇನಾಪಡೆ