ಕರ್ನಾಟಕ

karnataka

ETV Bharat / international

ಯುದ್ಧದ ಮಧ್ಯೆ ಉಕ್ರೇನ್​ಗೆ ದಿಢೀರ್​ ಭೇಟಿ ನೀಡಿದ ಜೋ ಬೈಡನ್​! ಕಾರಣವೇನು? - Russia Ukraine war anniversary

ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಕೀವ್​ಗೆ ಭೇಟಿ ನೀಡಿ ಸಂಚಲನ ಉಂಟು ಮಾಡಿದ್ದಾರೆ. ಮಹತ್ವದ ಬೆಳವಣಿಗೆಗೆ ಏನು ಕಾರಣ?.

joe-biden
ಅಮೆರಿಕ ಅಧ್ಯಕ್ಷ ಜೋ ಬಿಡೆನ್​

By

Published : Feb 20, 2023, 5:11 PM IST

Updated : Feb 20, 2023, 6:02 PM IST

ಉಕ್ರೇನ್​ಗೆ ದಿಢೀರ್​ ಭೇಟಿ ನೀಡಿದ ಜೋ ಬೈಡನ್

ಕೀವ್ (ಉಕ್ರೇನ್):ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಅವರು ಭೀಕರ ಯುದ್ಧದ ನಡುವೆಯೇ ಉಕ್ರೇನ್​ ರಾಜಧಾನಿ ಕೀವ್​ಗೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿ ಒಂದು ವರ್ಷವಾಗುತ್ತಿದೆ. ಈ ಹೊತ್ತಲ್ಲೇ ವಿಶ್ವದ ದೊಡ್ಡಣ್ಣನ ಭೇಟಿ ಮಹತ್ವ ಪಡೆದುಕೊಂಡಿದೆ. ಈಗಾಗಲೇ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಅವರೊಂದಿಗೆ ಬೈಡನ್​ ಮಾತುಕತೆ ನಡೆಸಿದ್ದಾರೆ.

"ಒಂದು ವರ್ಷದ ನಂತರ ಕೀವ್ ನಿಂತಿದೆ, ಉಕ್ರೇನ್​ ಕೂಡ ನಿಂತಿದೆ" ಎಂದು ಬೈಡನ್​ ಬರೆದುಕೊಂಡಿರುವ ಹೇಳಿಕೆಯನ್ನು ಮಾಧ್ಯಮಗಳು ಬಿತ್ತರಿಸಿವೆ. ಅಲ್ಲದೇ, ಯುದ್ಧ ಸಂತ್ರಸ್ತ ಉಕ್ರೇನ್​ಗೆ ಪಾಶ್ಚಿಮಾತ್ಯ ರಾಷ್ಟ್ರಗಳ ನೆರವು ಮತ್ತು ಅಮೆರಿಕದಿಂದ ಹೆಚ್ಚುವರಿಯಾಗಿ ಅರ್ಧ ಬಿಲಿಯನ್​ ಡಾಲರ್​ ಸಹಾಯವನ್ನೂ ಝೆಲೆನ್​​ಸ್ಕಿ ಭೇಟಿಯ ವೇಳೆ ಅವರು ಘೋಷಿಸಿದ್ದಾರೆ.

ರಷ್ಯಾ 2022 ರ ಫೆಬ್ರವರಿ 24 ರಂದು ಉಕ್ರೇನ್​ ಮೇಲೆ ಯುದ್ಧ ಸಾರಿತು. ಯುದ್ಧ ಆರಂಭವಾಗಿ ಒಂದು ವರ್ಷವಾಗುತ್ತಿದೆ. ಇದೇ ವೇಳೆ ಅಮೆರಿಕದ ಅಧ್ಯಕ್ಷರು ಉಕ್ರೇನ್​ಗೆ ಬಂದಿಳಿದ್ದಾರೆ. ಉಕ್ರೇನ್​ ಭೇಟಿ ಅಧಿಕೃತವಾಗಿರಲಿಲ್ಲ. ಈ ಬಗ್ಗೆ ಉಕ್ರೇನ್​ ಕೂಡ ಮಾಹಿತಿ ನೀಡಿರಲಿಲ್ಲ. ಬೈಡನ್​ ಅವರು ಪೋಲೆಂಡ್​ಗೆ ಭೇಟಿ ನೀಡುವ ಮಾರ್ಗಮಧ್ಯೆ ಉಕ್ರೇನ್​ಗೆ ದಿಢೀರ್​ ಬಂದಿದ್ದಾರೆ. ರಷ್ಯಾ ದಾಳಿ ಹಿಮ್ಮೆಟ್ಟಿಸಲು ಉಕ್ರೇನ್​ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವು ನೀಡಬೇಕು ಎಂದು ಅಮೆರಿಕ ಅಧ್ಯಕ್ಷರು ಕರೆ ನೀಡಿದ್ದರು. ಇದಲ್ಲದೇ ಯುದ್ಧಾರಂಭವಾಗಿ ಒಂದು ವರ್ಷದ ಬಳಿಕ ಕೀವ್​​ಗೆ ಭೇಟಿ ನೀಡಿರುವುದು ತೀವ್ರ ಚರ್ಚೆಗೂ ಗ್ರಾಸವಾಗಿದೆ.

ಉಕ್ರೇನ್​ಗೆ ಹೆಚ್ಚಿನ ನೆರವು:ರಷ್ಯಾದ ವೈಮಾನಿಕ ದಾಳಿಯಿಂದ ಉಕ್ರೇನ್​ ಜನರನ್ನು ರಕ್ಷಿಸಲು ಫಿರಂಗಿ, ಮದ್ದುಗುಂಡುಗಳು, ಆ್ಯಂಟಿ ಆರ್ಮರ್ ಸಿಸ್ಟಮ್‌ಗಳು ಮತ್ತು ವಾಯು ಕಣ್ಗಾವಲು ರಾಡಾರ್‌ಗಳೂ ಸೇರಿದಂತೆ ಯುದ್ಧ ಸಲಕರಣೆಗಳನ್ನು ನೀಡುವುದಾಗಿ ಅಮೆರಿಕ ಅಧ್ಯಕ್ಷರು ಘೋಷಿಸಿದ್ದಾರೆ ಎಂದು ಶ್ವೇತಭವನ ಹೇಳಿಕೆ ಬಿಡುಗಡೆ ಮಾಡಿದೆ.

ಬೈಡನ್‌ಗೆ ಸ್ವಾಗತ:ಅಮೆರಿಕದ ಅಧ್ಯಕ್ಷ ಕೀವ್​ಗೆ ಭೇಟಿ ನೀಡುವ ಮುನ್ನ ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಸ್ವಾಗತ ಕೋರಿದ್ದರು. "ಜೋಸೆಫ್ ಬೈಡನ್, ನಿಮಗೆ ಕೀವ್‌ಗೆ ಸುಸ್ವಾಗತ. ನಿಮ್ಮ ಭೇಟಿಯು ಉಕ್ರೇನಿಯನ್ನರಿಗೆ ಬೆಂಬಲದ ಸಂಕೇತ" ಎಂದು ಟೆಲಿಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

ರಷ್ಯಾಗೆ ಚೀನಾ ನೆರವು:ಉಕ್ರೇನ್​​ ಮೇಲೆ ಒಂದು ವರ್ಷದಿಂದ ಸತತವಾಗಿ ಯುದ್ಧ ಸಾರಿರುವ ರಷ್ಯಾಗೆ ಚೀನಾದಿಂದ ಯುದ್ಧ ಶಸ್ತ್ರಾಸ್ತ್ರಗಳು ರವಾನೆ ಮಾಡಲು ಮುಂದಾಗಿದೆ ಎಂದು ಅಮೆರಿಕ ಆರೋಪಿಸಿದೆ. ಆದರೆ, ಇದನ್ನು ತಳ್ಳಿಹಾಕಿರುವ ಚೀನಾ, ಯುದ್ಧಭೂಮಿಗೆ ನಿರಂತರವಾಗಿ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದು ಅಮೆರಿಕವೇ ಹೊರತಾಗಿ ನಾವಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ತಿರುಗೇಟು ನೀಡಿದ್ದರು.

ಇದನ್ನೂ ಓದಿ:ಬ್ರೆಜಿಲ್‌ನಲ್ಲಿ ಭಾರಿ ಮಳೆ: ಭೂಕುಸಿತ, ಪ್ರವಾಹಕ್ಕೆ 19 ಮಂದಿ ಬಲಿ

Last Updated : Feb 20, 2023, 6:02 PM IST

ABOUT THE AUTHOR

...view details