ಜೆರುಸಲೇಂ:ಉತ್ತರ ಇಸ್ರೇಲ್‌ನಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಅಪರೂಪದ ಮೆದುಳು ತಿನ್ನುವ ಅಮೀಬಾ (ಏಕಕೋಶ ಜೀವಿ)ಕ್ಕೆ ಬಲಿಯಾಗಿದ್ದಾರೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ.
ಯಾವುದೇ ಕಾಯಿಲೆಗಳಿಲ್ಲದ ವ್ಯಕ್ತಿ, ಮೆದುಳು ತಿನ್ನುವ ಅಮೀಬಾ ನೇಗ್ಲೇರಿಯಾ ಫೌಲೆರಿಯಿಂದ ಉಂಟಾಗುವ ಅಪರೂಪದ ವಿನಾಶಕಾರಿ ಮೆದುಳಿನ ಸೋಂಕು, ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂದೂ ಕರೆಯಲ್ಪಡುವ ನೇಗ್ಲೇರಿಯಾಸಿಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಏಕಕೋಶ ಜೀವಿ ಕಂಡುಬರುವುದೆಲ್ಲಿ?:ಈ ಅಮೀಬಾ ಪ್ರಕಾರವು ಸಿಹಿನೀರು, ಕೊಚ್ಚೆ ಗುಂಡಿಗಳು ಮತ್ತು ಇತರ ನಿಶ್ಚಲವಾದ ನೀರಿನ ಮೂಲಗಳಲ್ಲಿ ಕಂಡುಬರುತ್ತದೆ. ಗಲಿಲೀ ಸಮುದ್ರದ ಈಶಾನ್ಯ ರೆಸಾರ್ಟ್ ನಗರವಾದ ಟಿಬೇರಿಯಾಸ್‌ನಲ್ಲಿರುವ ಪೋರಿಯಾ ವೈದ್ಯಕೀಯ ಕೇಂದ್ರದಲ್ಲಿ ಅಪರೂಪದ ಪ್ರಕರಣ ವರದಿಯಾಗಿದೆ. ಅಪರೂಪ ಪ್ರಕರಣದ ಕಾರಣದಿಂದಾಗಿ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ಯುಸ್ ಕೇಂದ್ರಗಳಿಗೆ ರೋಗನಿರ್ಣಯದ ದೃಢೀಕರಣಕ್ಕಾಗಿ ಕ್ಲಿನಿಕಲ್ ಮಾದರಿಯನ್ನು ಕಳುಹಿಸಲಾಗಿದೆ.
ಏನು ಈ ರೋಗದ ಲಕ್ಷಣಗಳು:ಮೂಗಿನ ಮೂಲಕ ಸಂಭವಿಸುವ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್(PAM) ಸೋಂಕಿನ ಆರಂಭಿಕ ಹಂತದ ರೋಗಲಕ್ಷಣಗಳೆಂದರೆ, ತೀವ್ರ ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ. ಸೋಂಕು ಹೆಚ್ಚಿದಂತೆ ರೋಗಲಕ್ಷಣಗಳು ಮತ್ತಷ್ಟು ಉಲ್ಭಣಗೊಂಡು ಸಾವಿಗೆ ಕಾರಣವಾಗುತ್ತದೆ.
ಇದನ್ನೂ ಓದಿ:20 ವರ್ಷಗಳ ಹಿಂದೆ ನಾಪತ್ತೆ.. ಈಗ ಪಾಕಿಸ್ತಾನದಲ್ಲಿ ಮಹಿಳೆ ಪತ್ತೆ!