ಕರ್ನಾಟಕ

karnataka

ETV Bharat / international

Israel-Palestine war: ಇದುವರೆಗೆ 8,525 ಪ್ಯಾಲೇಸ್ಟೈನಿಯನ್​ಗಳ ಸಾವು... ಗಾಜಾದಿಂದ ಈಜಿಪ್ಟ್‌ಗೆ ಬಂದ ವಿದೇಶಿಗರು

Israel-Palestine war: ಇಸ್ರೇಲ್​ ಮತ್ತು ಹಮಾಸ್​ ಸಂಘರ್ಷ ಆರಂಭವಾದ ನಂತರ ಮೊದಲ ಬಾರಿಗೆ ಗಾಜಾದಿಂದ ಈಜಿಪ್ಟ್‌ಗೆ ಬರಲು ರಫಾ ಕ್ರಾಸಿಂಗ್‌ ತೆರೆಯಲಾಗಿದೆ.

israel-palestine-war-foreigners-leave-gaza-for-egypt-through-rafah-crossing
Israel-Palestine war: ಇದುವರೆಗೆ 8,525 ಪ್ಯಾಲೇಸ್ಟೈನಿಯನ್​ಗಳ ಸಾವು... ಗಾಜಾದಿಂದ ಈಜಿಪ್ಟ್‌ಗೆ ಬಂದ ವಿದೇಶಿಗರು

By ETV Bharat Karnataka Team

Published : Nov 1, 2023, 3:49 PM IST

ರಫಾ (ಈಜಿಪ್ಟ್):ಇಸ್ರೇಲ್​ ಹಾಗೂ ಹಮಾಸ್​ ಸಂಘರ್ಷದ ನಂತರ ಮೊದಲ ಬಾರಿಗೆ ಗಾಜಾದಿಂದ ಈಜಿಪ್ಟ್‌ಗೆ ರಫಾ ಕ್ರಾಸಿಂಗ್‌ ಮೂಲಕ ಬುಧವಾರ ಜನತೆಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. 400ಕ್ಕೂ ಹೆಚ್ಚು ವಿದೇಶಿ ಪಾಸ್‌ಪೋರ್ಟ್​ ಹೊಂದಿರುವವರಿಗೆ ಗಾಜಾವನ್ನು ತೊರೆಯಲು ಅನುಮತಿ ನೀಡಲಾಗಿದೆ ಎಂದು ಪ್ಯಾಲೇಸ್ಟೈನ್​ ಕ್ರಾಸಿಂಗ್​ ಪ್ರಾಧಿಕಾರ ತಿಳಿಸಿದೆ.

ಇಸ್ರೇಲ್​ ಮತ್ತು ಹಮಾಸ್​ ನಡುವೆ ಸಂಘರ್ಷ ಉಂಟಾಗಿ ಮೂರು ವಾರಗಳು ಕಳೆದಿವೆ. ನೂರಾರು ಜನರು ವಿವಿಧ ಸಮಯಗಳಲ್ಲಿ ಬಂದು ರಫಾ ಕ್ರಾಸಿಂಗ್‌ಗೆ ಬಂದು ಜಮಾಯಿಸಿದ್ದರು. ಆದರೆ, ಈಜಿಪ್ಟ್, ಇಸ್ರೇಲ್ ಮತ್ತು ಹಮಾಸ್ ನಡುವಿನ ಬಿಕ್ಕಟ್ಟಿನಿಂದಾಗಿ ಅಲ್ಲಿಂದ ಹೊರಬರಲು ಅನುಮತಿ ನೀಡಿರಲಿಲ್ಲ. ಇತ್ತೀಚೆಗೆ ಹಮಾಸ್ ಬಿಡುಗಡೆ ಮಾಡಿದ್ದ ನಾಲ್ವರು ಒತ್ತೆಯಾಳುಗಳನ್ನು ಹೊರತುಪಡಿಸಿ ಯಾರಿಗೂ ಗಾಜಾವನ್ನು ತೊರೆಯಲು ಅವಕಾಶ ಕೊಟ್ಟಿರಲಿಲ್ಲ. ಇದರ ನಡುವೆ ಈ ವಾರದ ಆರಂಭದಲ್ಲಿ ಮತ್ತೊಬ್ಬ ಬಂಧಿತನನ್ನು ಇಸ್ರೇಲ್​ ಪಡೆಗಳು ರಕ್ಷಣೆ ಮಾಡಿದ್ದವು.

ಇದನ್ನೂ ಓದಿ:ಮಧ್ಯಪ್ರಾಚ್ಯ ಸಂಘರ್ಷ, ಜಾಗತಿಕ ಅಸ್ಥಿರತೆಗೆ ಅಮೆರಿಕವೇ ಕಾರಣ; ಪುಟಿನ್ ಆರೋಪ

ಇದೀಗ ಸಂಘರ್ಷದಲ್ಲಿ ಗಾಯಗೊಂಡ 80ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಗಾಜಾದಿಂದ ಈಜಿಪ್ಟ್‌ಗೆ ಬುಧವಾರ ಕರೆದುಕೊಂಡು ಬರಲಾಗಿದೆ ಎಂದು ಈಜಿಪ್ಟ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಈಜಿಪ್ಟ್ ಕಡೆಯಿಂದ ಆಂಬ್ಯುಲೆನ್ಸ್‌ಗಳು ರಾಫಾ ಕ್ರಾಸಿಂಗ್‌ಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಹತ್ತಿರದ ಪಟ್ಟಣವಾದ ಶೇಖ್ ಜುವೈದ್‌ನಲ್ಲಿ ಆಸ್ಪತ್ರೆಯೊಂದನ್ನು ಸ್ಥಾಪಿಸಲಾಗಿದೆ. ಈ ಸಂಘರ್ಷ ಶುರುವಾದ ನಂತರ ಅಲ್ಲಿಂದ ಹೊರಬಂದ ಜನರನ್ನು ಗಾಜಾಕ್ಕೆ ಮರಳಲು ಇಸ್ರೇಲ್​ ಅನುಮತಿಸುವುದಿಲ್ಲ ಎಂಬ ಕಾರಣದಿಂದಾಗಿ ಪ್ಯಾಲೆಸ್ಟೈನ್ ನಿರಾಶ್ರಿತರನ್ನು ಸ್ವೀಕರಿಸುವುದಿಲ್ಲ ಎಂದು ಈಜಿಪ್ಟ್ ಹೇಳಿತ್ತು.

ಸಾವಿನ ಸಂಖ್ಯೆ 8,525ಕ್ಕೆ ಏರಿಕೆ:ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇದುವರೆಗೆ ಪ್ಯಾಲೇಸ್ಟೈನಿಯನ್​ಗಳ ಸಾವಿನ ಸಂಖ್ಯೆ 8,525ಕ್ಕೆ ಏರಿಕೆಯಾಗಿದೆ ಎಂದು ಗಾಜಾದಲ್ಲಿರುವ ಹಮಾಸ್ ಆರೋಗ್ಯ ಸಚಿವಾಲಯ ತಿಳಿಸಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹಿಂಸಾಚಾರ ಮತ್ತು ಇಸ್ರೇಲ್​ ದಾಳಿಗಳಲ್ಲಿ 122ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರು ಕೊಲೆಯಾಗಿದ್ದಾರೆ.

ಮತ್ತೊಂದೆಡೆ, ಇಸ್ರೇಲ್‌ನಲ್ಲಿ 1,400ಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದಾರೆ. ಅವರಲ್ಲಿ ಹೆಚ್ಚಿನ ನಾಗರಿಕರು ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಹಠಾತ್​ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಇದೇ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಇದಲ್ಲದೇ, ಹಮಾಸ್​ ದಾಳಿಕೋರರು ಇಸ್ರೇಲ್‌ನಿಂದ ಗಾಜಾಕ್ಕೆ ಸುಮಾರು 240 ಒತ್ತೆಯಾಳುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದರಲ್ಲಿ ಇಸ್ರೇಲ್​ ಸೇನೆಯ ಓರ್ವ ಮಹಿಳಾ ಸಿಬ್ಬಂದಿಯನ್ನು ವಿಶೇಷ ಪಡೆಗಳು ಕಾರ್ಯಾಚರಣೆ ನಡೆಸಿದ ರಕ್ಷಣೆ ಮಾಡಿವೆ.

ಇದನ್ನೂ ಓದಿ:ಒತ್ತೆಯಾಳಾಗಿದ್ದ ಯೋಧೆಯನ್ನು ರಕ್ಷಿಸಿದ ಇಸ್ರೇಲ್​ ಸೇನೆ: ಕದನ ವಿರಾಮ ತಿರಸ್ಕರಿಸಿದ ಪ್ರಧಾನಿ ನೆತನ್ಯಾಹು

ABOUT THE AUTHOR

...view details