ವಾಷಿಂಗ್ಟನ್ ಡಿಸಿ (ಅಮೆರಿಕ) : ರಿಪಬ್ಲಿಕನ್ ಪಕ್ಷದ ಕಿರಿಯ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ 2024 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಒಂದು ವೇಳೆ ಅಧ್ಯಕ್ಷರಾಗಿ ಆಯ್ಕೆಯಾದರೆ ಎಲೋನ್ ಮಸ್ಕ್ ಅವರನ್ನು ಸಲಹೆಗಾರರನ್ನಾಗಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಟೌನ್ ಹಾಲ್‌ನಲ್ಲಿ ಮಾತನಾಡಿದ ಅವರು "ಇತ್ತೀಚೆಗೆ ಎಲೋನ್ ಮಸ್ಕ್ ಅವರ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಅವರು ಟ್ವಿಟರ್‌ನಲ್ಲಿ ಶೇಕಡಾ 75 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಸಾಕಷ್ಟು ನೂತನ ಬದಲಾವಣೆಗಳನ್ನು ತಂದಿದ್ದಾರೆ. ಅವರು ನನ್ನ ಆಸಕ್ತಿದಾಯಕ ಸಲಹೆಗಾರರಾಗಿರಬೇಕೆಂದು ನಾನು ನಿರೀಕ್ಷಿಸುತ್ತೇನೆ. ಮಸ್ಕ್ ಕಂಪನಿಯನ್ನು ನಡೆಸುವ ರೀತಿಯಲ್ಲಿ ಸರ್ಕಾರವನ್ನು ನಡೆಸಲು ಬಯಸುತ್ತಾರೆ" ಎಂದು ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುವ ಸಾಮಾಜಿಕ ಮಾಧ್ಯಮ ಕಂಪನಿ 'ಎಕ್ಸ್' ನ ಕಾರ್ಯ ನಿರ್ವಹಣೆಯನ್ನು ರಾಮಸ್ವಾಮಿ ಶ್ಲಾಘಿಸಿದ್ದಾರೆ.
ಇನ್ನು ಈ ಹಿಂದೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೂಡ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನು ಬೆಂಬಲಿಸಿದ್ದಾರೆ. ರಾಮಸ್ವಾಮಿ ಉತ್ತಮ ಅಭ್ಯರ್ಥಿ, ಅವರ ಮಾತುಗಳು ಆಲಿಸಬೇಕು ಎನ್ನುವಂತಿದೆ. ಅಮೆರಿಕದಲ್ಲಿ 2024 ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ವಾಣಿಜ್ಯೋದ್ಯಮಿ ವಿವೇಕ್ ರಾಮಸ್ವಾಮಿ 'ಭರವಸೆಯ ಅಭ್ಯರ್ಥಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ: ಸ್ಪರ್ಧೆಗೆ ಮೂರನೇ ಭಾರತೀಯ ಅಮೆರಿಕನ್ ರೆಡಿ!