ಕ್ಯಾನ್ಬೆರ್ರ(ಆಸ್ಟ್ರೇಲಿಯಾ): ಭಾರತ ಸೇರಿದಂತೆ 17 ದೇಶಗಳ 100 ಯುದ್ಧ ವಿಮಾನಗಳು ಇಂದಿನಿಂದ ಸೆಪ್ಟೆಂಬರ್ 6 ರವರೆಗೆ ಆಸ್ಟ್ರೇಲಿಯಾದ ಸಮುದ್ರ ಪ್ರದೇಶದಲ್ಲಿ ಪಿಚ್ ಬ್ಲಾಕ್ 2022 ಎಂಬ ಬೃಹತ್ ಸಮರಾಭ್ಯಾಸ ನಡೆಸಲಿವೆ. ಇದರಲ್ಲಿ ಭಾಗವಹಿಸಲು ರಾಯಲ್ ಆಸ್ಟ್ರೇಲಿಯನ್ ಏರ್ ಫೋರ್ಸ್ (RAAF) ಡಾರ್ವಿನ್ ನೆಲೆಯ ಕಡೆಗೆ ತೆರಳುತ್ತಿದ್ದ ಭಾರತೀಯ ವಾಯುಪಡೆಯ ಸುಖೋಯ್ ಎಸ್‌ಯು-30 ಎಂಕೆಐ ಫೈಟರ್ ಜೆಟ್‌ಗಳಿಗೆ ಫ್ರೆಂಚ್ ವಾಯುಪಡೆಯು ಇಂಧನ ತುಂಬಿಸಿ, ಸಹಾಯ ಮಾಡಿದೆ. ಇದನ್ನು ಇಂಡೋ ಫ್ರೆಂಚ್ ಬಾಂಧವ್ಯದ ಭಾಗ ಎಂದು ಗುರುತಿಸಲಾಗಿದೆ.
ಯುದ್ಧವಿಮಾನಗಳ ಪ್ರೊಜೆಕ್ಷನ್ ಸಮಯದಲ್ಲಿ ಇಂಧನ ತುಂಬುವ ಅಗತ್ಯ ಬಂದಿದ್ದು, ಫ್ರೆಂಚ್ ವಾಯುಪಡೆ ಇಂಧನ ತುಂಬಲು ಸಹಾಯ ಮಾಡಿದೆ. ಇದಕ್ಕೆ ಫ್ರೆಂಚ್ ವಾಯು ಹಾಗೂ ಬಾಹ್ಯಾಕಾಶ ಪಡೆಗೆ ಐಎಎಫ್ ಧನ್ಯವಾದಗಳನ್ನು ಹೇಳಿದೆ. ಈ ಕುರಿತು ಐಎಎಫ್ ಟ್ವೀಟ್ ಮಾಡಿದ್ದು, #IAF ತುಕಡಿಯು #ExPitchBlack22 ಗಾಗಿ #RAAF ಡಾರ್ವಿನ್ ಬೇಸ್‌ಗೆ ಚಲಿಸುತ್ತಿರುವಾಗ, ಮಾರ್ಗದಲ್ಲಿ ವೈಮಾನಿಕ ಇಂಧನ ತುಂಬಲು ಸಹಾಯ ಮಾಡಿದ ಫ್ರೆಂಚ್ ಏರ್ ಮತ್ತು ಸ್ಪೇಸ್ ಫೋರ್ಸ್‌ನ ನಮ್ಮ ಸ್ನೇಹಿತರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದೆ.