ಕರ್ನಾಟಕ

karnataka

ETV Bharat / international

ಹಮಾಸ್-ಇಸ್ರೇಲ್​ ಕದನ ವಿರಾಮ ಒಪ್ಪಂದ: ಮತ್ತೆ 17 ಒತ್ತೆಯಾಳುಗಳ ಬಿಡುಗಡೆ, ಈಜಿಪ್ಟ್‌ಗೆ ರವಾನೆ - ಹಮಾಸ್​ ಇಸ್ರೇಲ್ ಯುದ್ಧ​

Hamas released 17 more hostages: ಹಮಾಸ್-ಇಸ್ರೇಲ್​ ನಡುವಿನ ಕದನ ವಿರಾಮ ಒಪ್ಪಂದದಂತೆ ಹಮಾಸ್​ ಉಗ್ರರು 2ನೇ ಹಂತದಲ್ಲಿ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ.

17 hostages released
ಒತ್ತೆಯಾಳುಗಳ ಬಿಡುಗಡೆ

By ANI

Published : Nov 26, 2023, 8:47 AM IST

Updated : Nov 26, 2023, 10:56 AM IST

ಟೆಲ್ ಅವಿವ್(ಇಸ್ರೇಲ್): ಹಮಾಸ್ ಉಗ್ರರು ಎರಡನೇ ಹಂತದಲ್ಲಿ​ ತನ್ನಲ್ಲಿದ್ದ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 13 ಇಸ್ರೇಲ್ ಮತ್ತು 4 ಥಾಯ್ಲೆಂಡ್ ನಾಗರಿಕರು ಸೇರಿದ್ದಾರೆ. ಹಮಾಸ್-ಇಸ್ರೇಲ್ ನಡುವಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಭಾಗವಾಗಿ ಈ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿದ್ದು, ಈಜಿಪ್ಟ್‌ಗೆ ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ವರದಿಯಂತೆ, ಹಮಾಸ್​ ಈ ಒತ್ತೆಯಾಳುಗಳನ್ನು ಮೊದಲು ರೆಡ್‌ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಿದ್ದು ನಂತರ ಈಜಿಪ್ಟ್‌ಗೆ ಕರೆದೊಯ್ಯಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿದೆ.

ಒತ್ತೆಯಾಳುಗಳನ್ನು ಕರೆದೊಯ್ಯುವ ಬೆಂಗಾವಲು ಪಡೆ ಕೆರೆಮ್​ ಶಾಲೋಮ್ ಕ್ರಾಸಿಂಗ್‌ಗೆ ತೆರಳಿತು. ಅಲ್ಲಿ ಇಸ್ರೇಲ್​ನ ಅಧಿಕಾರಿಗಳು ಹೆಸರುಗಳ ಪಟ್ಟಿ ಪರಿಶೀಲಿಸಿದ್ದಾರೆ. ಇಸ್ರೇಲ್ ರಕ್ಷಣಾ ಪಡೆ ಪ್ರತಿನಿಧಿಗಳು ತಮ್ಮವರ ಮಾಹಿತಿ ನಿಯಮಿತವಾಗಿ ನವೀಕರಿಸುತ್ತಿದ್ದಾರೆ. ಬಿಡುಗಡೆಯಾಗಿರುವ ಒತ್ತೆಯಾಳುಗಳಲ್ಲಿ ಹಿಲಾ ರೋಟೆಮ್ ಎಂಬ 12 ವರ್ಷದ ಬಾಲಕಿಯೂ ಸೇರಿದ್ದಾಳೆ. ತಾಯಿಯೊಂದಿಗೆ ಈಕೆ ಹಮಾಸ್ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿದ್ದಳು. ಆದರೆ ತಾಯಿ ರಾಯಾ ರೋಟೆಮ್(54) ಬಿಡುಗಡೆಯಾಗಿಲ್ಲ.

ಅಕ್ಟೋಬರ್ 7ರಂದು ಕಿಬ್ಬುಟ್ಜ್ ಬೀರಿ ಮೇಲಿನ ಭೀಕರ ಹಮಾಸ್ ದಾಳಿಯಲ್ಲಿ ಇನ್ನೊಬ್ಬ ಒತ್ತೆಯಾಳು ಎಮಿಲಿ ಹ್ಯಾಂಡ್ (9) ಕೊಲ್ಲಲ್ಪಟ್ಟಿದ್ದರು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಆಕೆ ಕಿಬ್ಬುಟ್ಜ್‌ನಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿದ್ದಾಗ ಅಪಹರಣಕ್ಕೊಳಗಾಗಿದ್ದರು. ನೋಮ್ ಓರ್​(17 ) ಮತ್ತು ಅಲ್ಮಾ ಓರ್ (13) ಜತೆಗೆ ಇವರ ತಂದೆ ಡ್ರೋರ್ ಓರ್(48) ಮತ್ತು ಅವರ ಸೋದರ ಸಂಬಂಧಿ ಲಿಯಾಮ್ ಓರ್ (18) ಎಂಬವರನ್ನು ಕಿಬ್ಬುಟ್ಜ್ ಬೀರಿಯಲ್ಲಿರುವ ಅವರ ಮನೆಯಿಂದಲೇ ಹಮಾಸ್ ಭಯೋತ್ಪಾದಕರು ಅಕ್ಟೋಬರ್ 7ರಂದು ಒತ್ತೆಯಾಳಾಗಿರಿಸಿದ್ದರು.

ಈ ಸಂದರ್ಭದಲ್ಲಿ ಹಮಾಸ್​ ಉಗ್ರರು ನೋಮ್ ಓರ್ ಮತ್ತು ಅಲ್ಮಾ ಓರ್​ ಅವರ ತಾಯಿ ಯೋನಾತ್ ಓರ್​ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಟೈಮ್ಸ್ ಆಫ್ ಇಸ್ರೇಲ್ ಮಾಹಿತಿ ಪ್ರಕಾರ, ತಂದೆ ಡ್ರೋರ್ ಓರ್ ಮತ್ತು ಲಿಯಾಮ್ ಓರ್ ಗಾಜಾದಲ್ಲೇ ಒತ್ತೆಯಾಳಾಗಿದ್ದು ಅವರನ್ನು ಹಮಾಸ್​ ಭಯೋತ್ಪಾದಕರು ಬಿಡುಗಡೆ ಮಾಡಿಲ್ಲ. ಇದಲ್ಲದೆ, ಅಧಿಕ ಇಸ್ರೇಲಿ ಒತ್ತೆಯಾಳುಗಳನ್ನು ಕಿಬ್ಬುಟ್ಜ್ ಬೀರಿಯಿಂದ ಅಪಹರಿಸಲಾಗಿದೆ.

ಇದನ್ನೂ ಓದಿ:ಕದನ ವಿರಾಮ: ಹಮಾಸ್​ನಿಂದ 25 ಒತ್ತೆಯಾಳುಗಳ ಬಿಡುಗಡೆ, ಇಸ್ರೇಲ್​ನಿಂದ 39 ಪ್ಯಾಲೆಸ್ತೀನ್ ಕೈದಿಗಳು ಬಂಧಮುಕ್ತ

Last Updated : Nov 26, 2023, 10:56 AM IST

ABOUT THE AUTHOR

...view details