ಕರ್ನಾಟಕ

karnataka

ETV Bharat / international

ಗೂಗಲ್ ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಹಸ್ತಾಂತರ: ಡಿಜಿಟಲ್ ಇಂಡಿಯಾ ಶ್ಲಾಘನೀಯ ಎಂದ ಪಿಚೈ - ETV Bharath Kannada

ಗೂಗಲ್ ಸಿಇಒ ಸುಂದರ್‌ ಪಿಚೈ ಅವರಿಗೆ 73ನೇ ಗಣರಾಜ್ಯೋತ್ಸದಲ್ಲಿ(2022) ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿನ ಅವರ ಸಾಧನೆಯನ್ನು ಗುರುತಿಸಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು.

Etv Bharatgoogle-and-alphabet-ceo-sundar-pichai-received-padma-bhushan
Etv Bharatಗೂಗಲ್ ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಹಸ್ತಾಂತರ

By

Published : Dec 3, 2022, 11:03 AM IST

ವಾಷಿಂಗ್ಟನ್​​:ಟೆಕ್ ದೈತ್ಯ ಆಲ್ಫಾಬೆಟ್, ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ಪದ್ಮಭೂಷಣ ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಸುಂದರ್‌ ಪಿಚೈ ಅವರಿಗೆ 73ನೇ ಗಣರಾಜ್ಯೋತ್ಸದಲ್ಲಿ(2022) ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿನ ಅವರ ಸಾಧನೆಯನ್ನು ಗುರುತಿಸಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು.

ಈ ಬಗ್ಗೆ ಟ್ವಿಟ್​ ಮಾಡಿಕೊಂಡಿರುವ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು 'ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್​ ಪಿಚೈ ಅವರಿಗೆ ಪದ್ಮಭೂಷಣವನ್ನು ಹಸ್ತಾಂತರಿಸಿರುವುದು ಸಂತಸ ತಂದಿದೆ. ಮಧುರೈನಿಂದ ಅಮೆರಿಕದ ಮೌಂಟೇನ್ ವ್ಯೂಗೆ ವರೆಗಿನ ಸುಂದರ್​ ಅವರ ಜೀವನದ ಸಾಧನೆ ಸ್ಪೂರ್ತಿದಾಯಕವಾದದ್ದು. ಭಾರತ ಮತ್ತು ಅಮೆರಿಕದ ಆರ್ಥಿಕ ಮತ್ತು ತಂತ್ರಜ್ಞಾನ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ. ಜಾಗತಿಕ ಆವಿಷ್ಕಾರದಲ್ಲಿ ಭಾರತೀಯ ಪ್ರತಿಭೆಗಳ ಕೊಡುಗೆಯನ್ನು ಈ ಕ್ಷಣದಲ್ಲಿ ನೆನೆಯಬಹುದು' ಎಂದು ಬರೆದುಕೊಂಡಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಹಸ್ತಾಂತರ

ರಾಯಭಾರಿ ಕಚೇರಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಸುಂದರ್​ ಪಿಚೈ 'ನನಗೆ ಪದ್ಮಭೂಷಣವನ್ನು ನೀಡಲು ಆತಿಥ್ಯ ವಹಿಸಿದ್ದ ರಾಯಭಾರಿ ಸಂಧು ಮತ್ತು ಕಾನ್ಸುಲ್ ಜನರಲ್ ಪ್ರಸಾದ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಪ್ರಶಸ್ತಿಗಾಗಿ ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶವು ಈ ರೀತಿಯಲ್ಲಿ ಗೌರವಿಸಿರುವುದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ಬ್ಲಾಗ್​​ನಲ್ಲಿ ಬರೆದುಕೊಂಡಿದ್ದಾರೆ.

ನಮ್ಮ ಮನೆ ಬಾಗಿಲಿಗೆ ಬಂದ ಪ್ರತಿಯೊಂದು ಹೊಸ ತಂತ್ರಜ್ಞಾನವು ನಮ್ಮ ಜೀವನವನ್ನು ಉತ್ತಮಗೊಳಿಸಿತು. ಆ ಅನುಭವವು ನನ್ನನ್ನು ಗೂಗಲ್‌ನ ಹಾದಿಯಲ್ಲಿ ಇರಿಸಿದೆ ಮತ್ತು ಪ್ರಪಂಚದಾದ್ಯಂತದ ಜನರ ಜೀವನವನ್ನು ಸುಧಾರಿಸುವ ತಂತ್ರಜ್ಞಾನವನ್ನು ನಿರ್ಮಿಸಲು ಸಹಾಯ ಮಾಡುವ ಅವಕಾಶವನ್ನು ಕಲ್ಪಿಸಿದೆ ಎಂದು ಪಿಚೈ ಬರೆದಿದ್ದಾರೆ.

ಡಿಜಿಟಲ್ ಇಂಡಿಯಾ ಶ್ಲಾಘನೀಯ:ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ದೃಷ್ಟಿಯನ್ನು ಪಿಚೈ ಶ್ಲಾಘಿಸಿದ್ದಾರೆ. ಡಿಜಿಟಲ್ ಇಂಡಿಯಾದ ದೃಷ್ಟಿ ಖಂಡಿತವಾಗಿಯೂ ಪ್ರಗತಿಗೆ ವೇಗ ವರ್ಧಕವಾಗಿದೆ. ಎರಡು ಪರಿವರ್ತನಾಶೀಲ ದಶಕಗಳಲ್ಲಿ ಸರ್ಕಾರಗಳು, ವ್ಯವಹಾರಗಳು ಮತ್ತು ಸಮುದಾಯಗಳ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ಹೂಡಿಕೆಯನ್ನು ಮುಂದುವರಿಸಲು ಹೆಮ್ಮೆಪಡುತ್ತೇನೆ ಎಂದು ಅವರು ಹೇಳಿದ್ದಾರೆ.

ಭಾರತದ ಡಿಜಿಟಲ್ ಭವಿಷ್ಯ:ಭಾರತದ ಡಿಜಿಟಲ್ ಭವಿಷ್ಯದಲ್ಲಿ 10 ಶತಕೋಟಿ ಅಮೆರಿಕನ್​ ಡಾಲರ್​ ಹೂಡಿಕೆ ಮಾಡುವುದಾಗಿ ಘೋಷಿಸಿದ್ದೇವೆ. ಕಡಿಮೆ ದರದ ಇಂಟರ್ನೆಟ್ ಸೌಲಭ್ಯ, ಡಿಜಿಟಲ್ ರೂಪಾಂತರದಲ್ಲಿ ಎಲ್ಲಾ ಗಾತ್ರದ ವ್ಯವಹಾರಗಳಿಗೆ ಸಹಕಾರಿಯಾಗುವ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಇದಕ್ಕಾಗಿ ಡಿಜಿಟಲ್ ಕೌಶಲ್ಯಕ್ಕೆ ಹೆಚ್ಚಿನ ಹೂಡಿಕೆ ಮಾಡಲಾಗುತ್ತಿದೆ. ಮಹಿಳಾ ಉದ್ಯಮಶೀಲತಾ ಕಾರ್ಯಕ್ರಮದ ಮೂಲಕ 1 ಮಿಲಿಯನ್ ಮಹಿಳೆಯರಿಗೆ ತರಬೇತಿ ನೀಡಿದ್ದೇವೆ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ 55,000 ಶಿಕ್ಷಕರಿಗೆ ತರಬೇತಿ ನೀಡಿದ್ದೇವೆ ಎಂದು ತಮ್ಮ ಬ್ಲಾಗ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಮೈಕ್ರೋಸಾಫ್ಟ್​ CEO ಸತ್ಯ ನಾದೆಲ್ಲಾ, Google CEO ಸುಂದರ್ ಪಿಚೈಗೆ ಪದ್ಮಭೂಷ

ABOUT THE AUTHOR

...view details